spot_img
Wednesday, April 1, 2026
spot_img

ಚೋರಾಡಿಯಲ್ಲಿ ಸೇತುವೆ ಸಂಪರ್ಕ ಕುಸಿತ | ಜನಜೀವನ ಅತಂತ್ರ| ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

 

ಹಾಲಾಡಿ: ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದ್ದು ಹಾಲಾಡಿ ಸಮೀಪದ ಚೋರಾಡಿಯಲ್ಲಿ ಸೇತುವೆಯ ಸಂಪರ್ಕವೇ ಕಡಿದು ನದಿ ಪಾಲಾಗಿದೆ. ಸೇತುವೆಯ ಸಂಪರ್ಕ ಕೊಂಡಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಕಳೆದ ಎರಡು ವರ್ಷದ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು.

ಸೇತುವೆಯ ಒಂದು ಭಾಗದಿಂದ ಸೇತುವೆಯ ಫಿಲ್ಲರ್‌ಗೆ ಹೊಂದಿಕೊಂಡಂತೆ ಕಾಂಕ್ರಿಟ್ ವಾಲ್ ನಿರ್ಮಿಸಲಾಗಿತ್ತು. ಈ ಕಾಂಕ್ರಿಟ್ ಗೋಡೆಯೇ ಕುಸಿದು ನೀರು ಪಾಲಾಗಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾಲಾಡಿ ಟಿವಿ‌ಎಸ್ ಶೋರೂಂ ಹತ್ತಿರದಿಂದ ಮುದೂರಿಗೆ ಹೋಗುವ ಮಾರ್ಗದ ಸೇತುವೆ ಇದಾಗಿದ್ದು ಈ ಭಾಗಕ್ಕೆ ಸಂಪರ್ಕ ಬೆಸೆಯುವ ಪ್ರಮುಖ ಸೇತುವೆಯಾಗಿದೆ. ನೀರಿನ ರಭಸಕ್ಕೆ ಸೇತುವೆಯ ಬಳಿ ಸಂಪರ್ಕ ಸಂಪೂರ್ಣ ಕುಸಿದು ನೀರುಪಾಲಾಗಿದೆ. ಎರಡು ಭಾಗದ ಸಂಪರ್ಕ ಕಡಿತಗೊಂಡಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಅಧಿಕಾರಿಗಳು ಭೇಟಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!