Saturday, October 12, 2024

ಮೋದಿ ನೇತೃತ್ವದ ಬಿಜೆಪಿ ಟೈಟಾನಿಕ್‌ ಹಡಗಿನಂತೆ ಮುಳುಗಲಿದೆ : ಸ್ವಪಕ್ಷವನ್ನೇ ಟೀಕಿಸಿದ ಸುಬ್ರಮಣಿಯನ್‌ ಸ್ವಾಮಿ

ಜನಪ್ರತಿನಿಧಿ (ನವದೆಹಲಿ) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಟೈಟಾನಿಕ್‌ ಹಡಗಿನಿಂತೆ ಮುಳುಗಲಿದೆ ಎಂದು ಬಿಜೆಪಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಇಂದು(ಸೋಮವಾರ) ಭವಿಷ್ಯ ನುಡಿದಿದ್ದಾರೆ.

ವಿವಿಧ ರಾಜ್ಯಗಳ ಉಪ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬೆನ್ನೆಲ್ಲೇ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಸುಬ್ರಮಣಿಯನ್‌, ʼಬಿಜೆಪಿಯಲ್ಲಿರುವ ನಾವು ನಮ್ಮ ಪಕ್ಷ ಟೈಟಾನಿಕ್‌ ಹಡಗು ಮುಳುಗಿದಂತೆ ಮುಳುಗುವುದಂತೆ ನೋಡಲು ಬಯಸುವುದಾದರೇ ಅದರ ನೇತೃತ್ವವನ್ನು ಮೋದಿ ಅವರೇ ವಹಿಸುವುದು ಉತ್ತಮ. ಶಾಶ್ವತವಾಗಿ ಮುಳುಗಲಿರುವ ಬಿಜೆಪಿಯಲ್ಲಿ ಬಿರುಕು ಉಂಟಾಗಿದೆ ಎನ್ನುವುದನ್ನು ಉಪ ಚುನಾವಣೆ ಫಲಿತಾಂಶ ತೋರಿಸುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಏಳು ರಾಜ್ಯಗಳ ಹದಿಮೂರು ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಫಲಿತಾಂಶ ಜುಲೈ 13ರಂದು ಪ್ರಕಟಗೊಂಡಿದೆ.

ವಿರೋಧ ಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಹತ್ತು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಎರಡು ಹಾಗೂ ಸ್ವತಂತ್ರ ಅಭ್ಯರ್ಥಿ ಒಂದು ಕಡೆ ಗೆದ್ದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸೋಲುಕಂಡು ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ, ಉಪ ಚುನಾವಣೆಯಲ್ಲಿ ಉತ್ತರಾಖಂಡದ ಬದರಿನಾಥದಲ್ಲಿಯೂ ಹೀನಾಯ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಹಿಂದುತ್ವ ಪರ ಮತದಾರರು ಕೇಸರಿ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್‌ ಸ್ವಾಮಿ ಸ್ವಪಕ್ಷದ ವಿರುದ್ಧವೇ ವಿಡಂಬನಾತ್ಮಕ ಪೋಸ್ಟ್‌ ಮೂಲಕ ಟೀಕೆ ಮಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!