Sunday, September 8, 2024

ರಸ್ತೆಯ ಹೊಂಡಗಳು ಮೃತ್ಯುಕೂಪವಾಗಲು ಇಲಾಖೆಗಳೇ ಕಾರಣ-ವಿಕಾಸ್ ಹೆಗ್ಡೆ

ಕುಂದಾಪುರ: ಸರ್ವ ಋತುವಿನಲ್ಲೂ ಉಪಯೋಗಿಸುವ ಡಾಂಬರು (ಬಿಟ್ಟುಮಿನ್) ಸಿಗುವ ಕಾಲಘಟ್ಟದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ರಸ್ತೆಗಳ ಹೊಂಡಗುಂಡಿಗಳಾಗಿ ಮೃತ್ಯುಕೂಪವಾಗಲು ಇಲಾಖೆಗಳ ದಿವ್ಯ ನಿರ್ಲಕ್ಷವೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ.

ಹಿಂದೆ ಮಳೆಗಾಲದಲ್ಲಿ ರಸ್ತೆ ದುರಸ್ತಿ ಇತ್ಯಾದಿ ಮಾಡಲು ಸಾಧ್ಯವಿರಲಿಲ್ಲ. ಆದರೆ ಇಂದು ಸರ್ವ ಋತುವಿನಲ್ಲೂ ಉಪಯೋಗಿಸಲು ಯೋಗ್ಯವಾದ ಡಾಂಬರು ಸಿಗುವಾಗ ಸಂಬಂಧಿತ ಇಲಾಖೆಗಳು ರಸ್ತೆ ದುರಸ್ಥಿ ಮಾಡದೆ ಇರುವುದು ಅವರ ಕರ್ತವ್ಯಲೋಪವಾಗಿದೆ. ಇದೂ ಕೂಡ ಭ್ರಷ್ಟಾಚಾರದ ಒಂದು ಭಾಗವಾಗಿದೆ. ರಸ್ತೆ ಹೊಂಡ ಮೊದಲ ಹಂತದಲ್ಲೇ ದುರಸ್ತಿ ಮಾಡಿದರೆ ಇದು ಕಡಿಮೆ ಖರ್ಚಿನಲ್ಲಿ ಆಗುವ ಕೆಲಸವಾಗಿದ್ದು ಇದರಿಂದ ಇಲಾಖಾ ಅಧಿಕಾರಿಗಳಿಗೆ ವೈಯಕ್ತಿಕ ಲಾಭ ಕಡಿಮೆ ಆದುದರಿಂದ ಸಂಬಂಧಿತ ಇಲಾಖೆಗಳು ರಸ್ತೆಯ ಹೊಂಡಗಳು ದೊಡ್ಡದಾಗುವ ತನಕ ಕಾಯುತ್ತಿವೆ. ಇಲಾಖೆಯ ಜಾಣ ನಡೆಗೆ ಸಂಬಂಧಿತ ಜನಪ್ರತಿನಿಧಿನಗಳು ಕೂಡ ಜಾಣ ಮೌನಕ್ಕೆ ಶರಣಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!