spot_img
Friday, January 17, 2025
spot_img

ಮೃತ ಇಂಜಿನಿಯರ್‌ ಓರ್ವವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ : ಮುಜುಗರಕ್ಕೀಡಾದ ನಗರಾಭಿವೃದ್ಧಿ ಇಲಾಖೆ

ಜನಪ್ರತಿನಿಧಿ (ಬೆಂಗಳೂರು) : ಮೃತ ಇಂಜಿನಿಯರ್ ಓರ್ವರನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ತೀರ್ವ ಮುಖಭಂಗಕ್ಕೆ ಒಳಗಾಗಿದೆ.

ಹೌದು, ಕಳೆದ ಜನವರಿ ತಿಂಗಳಲ್ಲಿ ಸಾವನ್ನಪ್ಪಿದ್ದ ಇಂಜಿನಿಯರ್ ಓರ್ವರನ್ನು ಕೊಡಡು ಜಿಲ್ಲೆಗೆ ಜುಲೈ 9 ರಂದು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಆದೇಶ ಬೆನ್ನಿಗೆ ರಾಜ್ಯ ಸರ್ಕಾರದ ಈ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಇಲಾಖೆ ಕಿರಿಯ ಇಂಜಿನಿಯರ್‌ ಆಗಿದ್ದ ಅಶೋಕ ಪುಟಪಾಕ್‌ ಎನ್ನುವವರು ಆರು ತಿಂಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ವಿಧಾನಸಭಾ ಕ್ಷೇತ್ರದಲ್ಲಿ ಈ ಎಡವಟ್ಟು ನಡೆದಿದ್ದು, ಇಲಾಖೆಯ ನೌಕರ ಮೃತಪಟ್ಟಿದ್ದರು ಮಾಹಿತಿ ಇರಲಿಲ್ಲವೇ? ಎಂದು ಸಾರ್ವಜನಿಕ ವಲಯದಲ್ಲಿ ಸದ್ಯ ಪ್ರಶ್ನೆ ಎದ್ದಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!