spot_img
Saturday, December 7, 2024
spot_img

ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿದ್ದರೇ ಸಾಕು UAEನಲ್ಲಿ ಕೆಲಸ ಮಾಡಬಹುದು ! ಇಲ್ಲಿದೆ ಮಾಹಿತಿ

ಜನಪ್ರತಿನಿಧಿ : ನಿರುದ್ಯೋಗ ಇಂದು ಕಾಡುತ್ತಿರುವ ಜ್ವಲಂತ ಸಮಸ್ಯೆ. ವಯಸ್ಸು ಮೀರುತ್ತಿದ್ದರೂ ಇನ್ನೂ ಆರ್ಥಿಕ ಸ್ಥಿತಿ ಸುಧಾರಿಸುತ್ತಿಲ್ಲ, ಸರಿಯಾದ ಕೆಲಸ ಇಲ್ಲ ಎನ್ನುವವರಿಗೆ ಉದ್ಯೋಗ ಅರಸುವುದು ಹರಸಾಹಸವೇ ಆಗಿದೆ. ಹಲವಾರು ಮಂದಿ ಉದ್ಯೋಗ​ ಹುಡುಕಿ ಹುಡುಕಿ ಎಲ್ಲೂ ಕೆಲಸ ಸಿಗದೇ ಸೋತಿರುತ್ತಾರೆ.

ಆದರೆ ಇಲ್ಲಿ ನಿಮಗೊಂದು ಉತ್ತಮ ಅವಕಾಶವಿದೆ. ನೀವೂ ಸಹ ಕೆಲಸ ಹುಡುಕುತ್ತಿದ್ದರೆ ಈ ಮಾಹಿತಿಯನ್ನು ತಪ್ಪದೇ ಗಮನಿಸಿ. UAEನಲ್ಲಿ ನಿಮಗಾಗಿ ಉದ್ಯೋಗಾವಕಾಶ ತೆರೆದುಕೊಳ್ಳುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ನೇರ ಸಂದರ್ಶನ ಇರುತ್ತದೆ. ಜುಲೈ 20 ರಂದು ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ಯಾರ್ಹತೆ: 10ನೇ ತರಗತಿ ಪಾಸ್​​ ಆಗಿರಬೇಕು.
ನೀವು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಆ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಪಾಸ್​ಪೋರ್ಟ್​​: ECNR ಪಾಸ್​ಪೋರ್ಟ್​ ಮಾತ್ರ. ವೀಸಾವನ್ನು ಕಂಪನಿಯವರಿಂದಲೇ ನೀಡಲಾಗುತ್ತದೆ. ವಸತಿ ಕೂಡ ನಿಮಗೆ ಕಂಪನಿಯವರೇ ನೀಡುತ್ತಾರೆ.  ಐಡಿ ಚಾರ್ಜ್ಸ್​​ ನೀವೇ ನೀಡಬೇಕಾಗುತ್ತದೆ. ವಿಮಾನ ಟೀಕೇಟಿನ ಮೊತ್ತವನ್ನು ನೀವೇ ನೀಡಬೇಕು.

ನೇಮಕಾತಿ ಸೇವಾ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ. ನೇಮಕಾತಿ ಶುಲ್ಕ 35,400 ರೂ ಆಗಿರುತ್ತದೆ. UAE ನಲ್ಲಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕವನ್ನು ಸಂಪರ್ಕಿಸಬಹುದಾಗಿದೆ.

hr.imk@gmail.com ಈ ಮೇಲ್​ ಐಡಿಗೆ(ಮಿಂಚಂಚೆ) ನಿಮ್ಮ ಸಿವಿ ಕಳುಹಿಸಿ​. ನಂತರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ. ಆಯ್ಕೆ ಆದಲ್ಲಿ ನೀವೂ ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9606492213, 9606492214 ಈ ಸಂಖ್ಯೆಗಳಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಕೆಳಗಿನ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದಾಗಿದೆ.
ಪ್ಲಂಬರ್​, ಸ್ಟೀಲ್ ಫಿಕ್ಸರ್,​​ ಕಾರ್ಪೆಂಟರ್,​ ಅಲ್ಯೂಮೀನಿಯಂ ಫ್ಯಾಬ್ರಿಕೇಟರ್, ​ ಫರ್ನೀಚರ್ ಕಾರ್ಪೆಂಟರ್, ​ ಫರ್ನೀಚರ್ ಪೇಂಟರ್,​ ಏಸಿ ಟೆಕ್ನೀಷಿಯನ್​, ಡಕ್ಟ್​ಮ್ಯಾನ್, ​ಹೆಲ್ಪರ್​.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!