Sunday, September 8, 2024

ದೇಶದ ಪ್ರತಿಷ್ಠಿತ ಕರ್ನಾಟಕ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ

ಜನಪ್ರತಿನಿಧಿ : ದೇಶದ ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಸದ್ಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಕರ್ನಾಟಕ ಬ್ಯಾಂಕ್​ನಲ್ಲಿ ಒಟ್ಟು 14 ಡೇಟಾ ಎಂಜಿನಿಯರ್, ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 26, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ತಮ್ಮ ರೆಸ್ಯೂಮ್ ಕಳುಹಿಸುವ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:
ಡೇಟಾ ಎಂಜಿನಿಯರ್- 11
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 1
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 1
ಫೈರ್​ವೆಲ್ ಅಡ್ಮಿನಿಸ್ಟ್ರೇಟರ್- 1

ವಿದ್ಯಾರ್ಹತೆ:
ಡೇಟಾ ಎಂಜಿನಿಯರ್- ಬಿ.ಎಸ್ಸಿ, ಬಿಸಿಎ, ಬಿಇ/ಬಿ.ಟೆಕ್, ಪದವಿ, ಎಂಸಿಎ, ಎಂ.ಟೆಕ್ ಪದವಿ ಪಡೆದಿರಬೇಕು.
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್, ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್, ಫೈರ್​ವೆಲ್ ಅಡ್ಮಿನಿಸ್ಟ್ರೇಟರ್- ಬಿಇ/ಬಿ.ಟೆಕ್, ಪದವಿ, ಎಂಸಿಎ ಮಾಡಿರಬೇಕು.

ವಯೋಮಿತಿ:
ಡೇಟಾ ಎಂಜಿನಿಯರ್- 30 ವರ್ಷ
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
ಫೈರ್​ವೆಲ್ ಅಡ್ಮಿನಿಸ್ಟ್ರೇಟರ್- 35 ವರ್ಷ
(ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.)

ವೇತನ:
ಡೇಟಾ ಎಂಜಿನಿಯರ್- ಮಾಸಿಕ ರೂ. 48,480-85,920
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್-ಮಾಸಿಕ ರೂ. 64,820-93,960
ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- ಮಾಸಿಕ ರೂ. 64,820-93,960
ಫೈರ್​ವೆಲ್ ಅಡ್ಮಿನಿಸ್ಟ್ರೇಟರ್- ಮಾಸಿಕ ರೂ. 64,820-93,960

 ಆಯ್ಕೆ ಪ್ರಕ್ರಿಯೆ: ವಿದ್ಯಾರ್ಹತೆ,  ಅನುಭವ, ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ recruitment@ktkbank.com ಗೆ ಸಲ್ಲಿಸಬೇಕು. ಇನ್ನೂ ಹೆಚ್ಚಿನ ಮಾಹಿತಿಗೆ ಕರ್ನಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ ಪರಿಶೀಲಿಸಬಹುದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!