Thursday, November 21, 2024

ಡೆಂಗ್ಯೂ : ಶುದ್ಧ ನೀರಿನಲ್ಲೇ ಈಡೀಸ್‌ ಸೊಳ್ಳೆಗಳು ಹುಟ್ಟುತ್ತವೆ, ಎಚ್ಚರ !

ಡೆಂಗ್ಯೂ ಅನ್ನುವಂತದ್ದು ವೈರಸ್‌ನಿಂದ ಬರುವ ಕಾಯಿಲೆ. ಈಡಿಸ್ ಎನ್ನುವ ಹೆಣ್ಣು ಸೊಳ್ಳೆ ಒಬ್ಬ ಆರೋಗ್ಯವಂತ ಮನುಷ್ಯನಿಗೆ ಕಚ್ಚಿದಾಗ ವೈರಸ್ ಸೊಂಕು ಉಂಟಾಗುತ್ತದೆ.  ಹೆಚ್ಚಾಗಿ ಜೂನ್ ತಿಂಗಳ ಮಳೆಗಾಲದಲ್ಲಿ ಕಂಡು  ಈ ಸೊಂಕು ಕಂಡುಬರುತ್ತದೆ. ಈ ಸೊಳ್ಳೆ ಕಚ್ಚಿ ಎರಡು ಮೂರು ದಿನದ ನಂತರ ಸೊಂಕಿನ ಲಕ್ಷಣಗಳು ಗೋಚರವಾಗುತ್ತದೆ. ಜ್ವರ ಬರುವುದು ವಿಪರೀತ ಮೈಕೈ ನೋವು, ಚಳಿ ಇತ್ಯಾದಿ ಕಾಣಿಸಿಕೊಂಡು ಎರಡು ಮೂರು ದಿನದ ನಂತರ ಸೊಂಕು ಮಾಯಾವಾಗುತ್ತದೆ.  ಡೆಂಗ್ಯೂ ಗೆ ಯಾವದೇ ತರಹದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ.

ಡೆಂಗ್ಯೂ ವೈರಸ್ ಎಂಬುವAತದ್ದು ನಾಲ್ಕು ವಿಧದ ವೈರಸ್. DENV1, DENV2, DENV3  DENV4  ಮಾನ್ಯವಾಗಿ ಮನುಷ್ಯನ ದೇಹದ ಒಳಗೆ ಯಾವುದಾದರೂ ಒಂದು ವೈರಸ್‌ನ ಸೊಂಕು ಉಂಟಾದಾಗ, ಮನುಷ್ಯನ ದೇಹದಲ್ಲಿ ANTI BODIES ಉತ್ಪತ್ತಿಯಾಗುತ್ತದೆ.

ANTI BODIES ಅನ್ನುವಂತದ್ದು ಜ್ವರವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ. ಡೆಂಗ್ಯೂ ಟೈಪ್‌ ಒನ್ ವೈರಸ್ ನಿಂದ ಸೊಂಕು ಉಂಟಾಗಿ ಜ್ವರ ಬರುವುದು ವಿಪರೀತ ಮೈ ಕೈ ನೋವು, ಮಾಂಸಕಂಡಗಳಲ್ಲಿ ನೋವು ಉಂಟಾಗಿ ಅದು ಕ್ರಮೇಣ ಹಾಗೇ ವಾಸಿಯಾಗುತ್ತದೆ. ಕ್ರಮೇಣ ವಾಸಿಯಾದ ನಂತರ ಮತ್ತೊಮ್ಮೆ ಅವನಿಗೆ ಸೊಳ್ಳೆ ಕಚ್ಚಿ  ಡೆಂಗ್ಯೂ ಬರಬಹುದು. ಅವನಿಗೆ ಮೊದಲು ಟೈಪ್ ೧ ವೈರಸ್ ಉಂಟಾಗಿ ಮತ್ತೊಮ್ಮೆ Type2 Type3 ಅಥವಾ Type4 ನಿಂದ ಅಂದರೆ ಜ್ಹೀರೋ ಟೈಪ್  ನಿಂದ ಸೊಂಕು ಬಂದರೆ ಆ ದೇಹ ವೈರಸ್‌ನ್ನು ಗುರುತಿಸುತ್ತದೆ. ಅದಕ್ಕೆ ಸರಿಯಾದ ANTI BODIES ಅನ್ನು ಉತ್ಪತ್ತಿ ಮಾಡುತ್ತದೆ. ಈ ANTI BODIES ನಮ್ಮ ದೇಹದಲ್ಲಿ ಇರುವಂತಹ ವೈರಸ್ ಅನ್ನು ಗುರುತ್ತಿಸುತ್ತದೆ. ದೇಹದಲ್ಲಿನ ಪ್ಲೆಟೆಟ್‌ಗಳ ಸಂಖ್ಯೆ ಕಡಿಮೆಯಾದಾಗ ಬೇರೆ ಅಂಗಾAಗ ಅಂದರೆ ಚರ್ಮದ ಅಡಿಭಾಗದಲ್ಲಿ, ಕಿಡ್ನಿಯಲ್ಲಿ , ಬ್ರೈನ್‌ನಲ್ಲಿ, ಲಿವರ್‌ನಲ್ಲಿ ಹಾಗೇ ಹೃದಯದಲ್ಲು ಕೂಡಾ ರಕ್ತಾಸ್ರಾವವನ್ನು ಉಂಟುಮಾಡುತ್ತದೆ. ಅಂದರೆ ಸಣ್ಣ ರಕ್ತನಾಳಗಳಲ್ಲಿ ರಕ್ತನಾಳ ಒಡೆದು ಹೋಗಿ ರಕ್ತಸ್ರಾವವಾಗುತ್ತದೆ. ತೀವ್ರವಾದ ಡೆಂಗ್ಯೂ ಜ್ವರವು ಜೀವಕ್ಕೆ ಅಪಾಯಕಾರಿ, ನಿಮಗೆ ಜ್ವರವಿದ್ದರೆ ಅಥವಾ ನಿಮಗೆ ಯಾವುದೇ ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಪಡೆಯಬೇಕು.

ಪರೀಕ್ಷೆ ಮಾಡಿಸಿಕೊಳ್ಳುವುದು ಹೇಗೆ? :
ಹೆಚ್ಚಿನ ಸಂದರ್ಭದಲ್ಲಿ ವೈದ್ಯರು ಡೆಂಗ್ಯೂ ಎಂದು ಶಂಕಿಸಿದರೆ ಸಂಪೂರ್ಣ ರಕ್ತದ ಪರೀಕ್ಷೆಯನ್ನು ಶಿಫಾರಸು ಮಾಡಲಾಗುತ್ತದೆ. ರಕ್ತದಲ್ಲಿ ಡೆಂಗ್ಯೂ  ವೈರಸ್ ಇರುವಿಕೆಯನ್ನು ಪತ್ತೆಹಚ್ಚಲು ನೀವು ರಚನಾತ್ಮಕವಲ್ಲದ ಪ್ರೋಟೀನ್ ೧ ಪರೀಕ್ಷೆ ಇಮ್ಯುನೊಗ್ಲಾಬ್ಯುವಿನ್ ಜಿ/ ಇಮ್ಯುನೊಗ್ಲಾಬ್ಯುವಿನ್ ಎಮ್ ಪರೀಕ್ಷೆ ಅಥವಾ ನೈಜ-ಸಮಯದ ಪಾಲಿಮೇರಿಸ್ ಚೈನ್ ರಿಯಾಕ್ಷನ್ ಪರೀಕ್ಷೆಯನ್ನು ಒಳಗೊಂಡಿರುವ ನಿರ್ಣಾಯಕ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

ಸಮಸ್ಯೆಗಳೇನು?
ಮನುಷ್ಯನ ದೇಹದಲ್ಲಿ ಒಂದುವರೆಯಿAದ ನಾಲ್ಕುವರೆ ರಕ್ತದಷ್ಟು ಪ್ಲೆಟ್ಲಟ್‌ಗಳ ಸಂಖ್ಯೆ ಕಡಿಮೆಯಾಗುತ್ತದೆ ಅದರಿಂದ ರಕ್ತನಾಳಗಳಲ್ಲಿ ರಕ್ತಸ್ರಾವ ಉಂಟಾಗುತ್ತದೆ.

ಆ ಸಂದರ್ಭದಲ್ಲಿ ಪ್ಲೆಟ್ಲೆಟ್‌ಗಳನ್ನು ಕೊಡಬೇಕಾಗುತ್ತದೆ. ಮುಖ್ಯವಾಗಿ ಡೆಂಗ್ಯೂ ಜ್ವರದಲ್ಲಿ ವೈದ್ಯರು ನಿರ್ದಿಷ್ಟವಾಗಿ ಗ್ಲೂಕೋಸ್ ಗಳನ್ನ ಹಾಕಬೇಕು ಇಲ್ಲದಿದ್ದರೆ ಅದರಿಂದಲೇ ಸಮಸ್ಯೆಯಾಗಿ ಸಾಯುವಂತ ಸಂದರ್ಭ ಬರುತ್ತದೆ. ಯಾವಾಗ ಡೆಂಗ್ಯೂವಿನಲ್ಲಿ ಶಾಕ್ ಸಿಂಡ್ರೋಮ್ ಅಥವಾ ಹೆಮರಾಜಿಕ್ ಜ್ವರ ನಲ್ಲಿರುವವರಿಗೆ ವೈದ್ಯರು ಪ್ಲೆಟ್ಲೆಟ್‌ಗಳನ್ನು ಕೊಡಬೇಕು ಪ್ಲೆಟ್ಲೆಟ್ ಅಂದರೆ ನಮ್ಮ ರಕ್ತದಲ್ಲಿರುವ ಒಂದು ಭಾಗ ರಕ್ತದಲ್ಲಿರು ಬೇರೆ ಬೇರೆ ಭಾಗಗಳನ್ನು ಬೇರ್ಪಡಿಸಿ ಕೆಂಪು ರಕ್ತಕಣ ಪ್ಲಾಸ್ಮಾ ಬಿಳಿ ರಕ್ತಕಣಗಳನ್ನು ವಿಂಗಡನೆ ಮಾಡಿ ಅದರಲ್ಲಿರುವಂತಹ ಪ್ಲೆಟ್ಲೆಟ್‌ಗಳನ್ನ  ಒಬ್ಬ ರಕ್ತಧಾನಿಯಿಂದ ಪಡೆದಂತ ರಕ್ತವನ್ನು ಪ್ರತ್ಯೇಕವಾಗಿ ಕೊಡುವಂತದ್ದು. ಸಾಮಾನ್ಯವಾಗಿ ವೈದ್ಯರು ಯಾರಿಗೆ ಸಮಸ್ಯೆಯಿದೆ ಅವರನ್ನು ಅಡ್ಮಿಟ್ ಮಾಡಿಕೊಂಡು ಅವರ ಪ್ಲೆಟ್ಲೆಟ್ ಗಳನ್ನು ದಿನ ಬಿಟ್ಟು ದಿನ ಪರೀಕ್ಷೆಯನ್ನು ಮಾಡುತ್ತಾರೆ. ಒಂದು  ಸಾರಿ ಪ್ಲೆಟ್ಲೆಟ್‌ಗಳ ಸಂಖ್ಯೆ ೫೦,೦೦೦ ಕ್ಕಿಂತ ಕಡಿಮೆಯಿದ್ದರೆ ರಕ್ತಸ್ರಾವ ಉಂಟಾಗುತ್ತದೆ ಅದರಿಂದ ಅವರು ಅಲರ್ಟ್ನಲ್ಲಿಯಿರುತ್ತಾರೆ. ಅವರಿಗೆ ಮುಂದೆ ಪ್ಲೆಟ್ಲೆಟ್‌ಗಳು ಬೇಕಾಗುತ್ತದೆ ಎನ್ನುವುದನ್ನು ಗಮನಿಸಿ ಚಿಕಿತ್ಸೆಯನ್ನು ಮಾಡುತ್ತಾರೆ. ಕ್ರಮೆಣ ಎರಡು ಮೂರು ದಿನಗಳಲ್ಲಿ ಪ್ಲೆಟ್ಲೆಟ್ ಗಳು ನಾರ‍್ಮಲ್ ಆಗುತ್ತದೆ .

 ಈಡಿಸ್ ಸೊಳ್ಳೆ ಎಲ್ಲಿ ಉತ್ಪತ್ತಿಯಾಗುತ್ತದೆ?
ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ನೀರಿನ ಅಭಾವ ಉಂಟಾದಾಗ ನೀರನ್ನು ಶೇಕರಿಸಿ ಇಟ್ಟುಕೊಳ್ಳುತ್ತೇವೆ.  ನೀರನ್ನು ಸಣ್ಣ ಸಣ್ಣ ಬಕೇಟ್‌ಗಳಲ್ಲಿ ಅಥವಾ ಟ್ಯಾಂಕ್‌ಗಳಲ್ಲಿ ಶೇಕರಿಸಿಟ್ಟುಕೊಟ್ಟುಕೊಳ್ಳುತ್ತೇವೆ. ನೀರನ್ನು  ಕನಿಷ್ಟ ಒಂದು ವಾರ ಶೇಕರಿಸಿ ಇಟ್ಟರೆ ಅದು ಈಡಿಸ್ ಸೊಳ್ಳೆ  ಉತ್ಪತ್ತಿಯಾಗುವುದಕ್ಕೆ ಕಾರಣವಾಗಬಹುದು. ನೀರು ಒಂದೆಡೆ ಶೇಕರಣೆಯಾಗುವುದನ್ನು ನಾಶ ಮಾಡುವುದು ಉತ್ತಮ.  ಶುದ್ಧ ನೀರಿನಲ್ಲೇ ಈಡೀಸ್‌ ಸೊಳ್ಳೆಗಳು ಹುಟ್ಟುತ್ತವೆ. ಈ ಸೊಳ್ಳೆಯ ವಿಶೇಷಯೆನೆಂದರೆ ಇದು ಮನುಷ್ಯ ಎಲ್ಲೆಲ್ಲಿ ವಾಸಿಸುತ್ತಾನೆ ಅಲ್ಲಿಯೇ ಸುತ್ತ ಮುತ್ತ  ಇದ್ದು ಮನುಷ್ಯನಿಗೆ ಕಚ್ಚಿ ಅಲ್ಲಿಯೇ ಸಾಯುತ್ತದೆ. ಹಾಗಾಗಿ ನೀರನ್ನು ಶೇಕರಣೆಮಾಡಿ ಇಡುವಾಗ ಮುಚ್ಚಿ ಇಡುವುದು ಅಥವಾ ಪಾತ್ರೆಗಳನ್ನು  ವಾರಕೊಮ್ಮೆಯಾದರೂ ಕ್ಲೀನ್ ಮಡುವುದು, ಬಿಸಿಲಿನಲ್ಲಿ ಇಡುವುದನ್ನು ಮಾಡಬೇಕು. ಸೊಳ್ಳೆಗಳು ಮೊಟ್ಟೆಗಳನ್ನು ಇಡುವ ಆವಾಸಸ್ಥಾನಗಳನ್ನು ತೆಗೆದು ಹಾಕುವ ಮೂಲಕ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಈಡಿಸ್ ಸೊಳ್ಳೆ ಉತ್ಪತ್ತಿಯಾಗಲೂ ಕನಿಷ್ಟ ೫ ಎಮ್‌ಎಲ್ ನೀರು ಸಾಕು. ಅದು ಸ್ವಚ್ಛವಾದ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಈ ಸೊಳ್ಳೆ ಹೆಚ್ಚಾಗಿ ಹಗಲನಲ್ಲಿ ಕಚ್ಚುವಂತದ್ದು. ಈಡಿಸ್ ಸೊಳ್ಳೆ ನೋಡಲಿಕ್ಕೆ ಟೈಗರ್ ತರ ಇರುತ್ತದೆ ಅದರ ಮೈ ಮೇಲೆ ಕಪ್ಪು ಮತ್ತು ಬಿಳಿಯ ಪಟ್ಟೆಗಳಿರುತ್ತದೆ. ಅದಕ್ಕೆ ಟೈಗರ್ ಮೊಸ್ಕಿಟೋ ಅಂತ ಕರಿತೆವೆ. ಇದು ಹಗಲಿನಲ್ಲಿ ಕಚ್ಚಿ ಅಲಿಯೇ ತನ್ನ ವಂಶಾಭಿವೃದ್ದಿ ಮಾಡುತ್ತವೆ. ಒಂದು ಸೊಳ್ಳೆ ಕನಿಷ್ಟ ಮೂರು ದಿನಕೊಮ್ಮೆ ಕಚ್ಚಿ ಮತ್ತೆ ಮುರು ದಿನದ ನಂತರ ಮತ್ತೊಮ್ಮೆ ಕಚ್ಚಿ ಮನೆಯ ಸುತ್ತ ಮುತ್ತಲೇ ಇರುತ್ತದೆ. ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಉದ್ದನೆಯ ತೋಳಿನ  ಬಟ್ಟೆಯನ್ನು ಧರಿಸುವುದು ಉತ್ತಮ.

ಡಯಬಿಟೀಸ್‌, ರಕ್ತದೊತ್ತಡ, ಲಿವರ್‌ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು, ರ‍್ಭಿಣಿಯರು ಹಾಗೂ ಚಿಕ್ಕ ಮಕ್ಕಳಲ್ಲಿ ಡೆಂಗ್ಯೂ ಹೆಚ್ಚು ಮಾರಣಾಂತಿಕವಾಗಬಲ್ಲದು. ಡೆಂಗ್ಯೂ ವೈರಸ್‌ ನಲ್ಲಿ ನಾಲ್ಕು ಪ್ರಬೇಧಗಳಿರುವ ಕಾರಣ ಈ ವೈರಸ್‌ಗೆ ಸೂಕ್ತ ಲಸಿಕೆ ಇನ್ನೂ ಲಭ್ಯವಿಲ್ಲ. ಈಡೀಸ್‌ ಸೊಳ್ಳೆಯು ಹಗಲಿನ ವೇಳೆ ಕಚ್ಚುವುದರಿಂದ ಹಗಲಿನ ವೇಳೆಯೂ ಜಾಗೃತೆವಹಿಸುವುದು ಮುಖ್ಯ. ಮಳೆಗಾಲ ಬಂತೆಂದರೇ ಡೆಂಗ್ಯೂ ಬಗ್ಗೆ ಹೆಚ್ಚಿನ ಆತಂಕ ಸೃಷ್ಟಿಯಾಗುತ್ತದೆ. ಅಗತ್ಯ ಸುರಕ್ಷತಾ ಕ್ರಮ ವಹಿಸಿಕೊಂಡರೇ ಇದರಿಂದ ಪಾರಾಗಬಹುದು. ಡೆಂಗ್ಯೂ ಕಾಣಿಸಿಕೊಂಡ ಪ್ರದೇಶಗಳಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.

 -ಡಾ. ಪ್ರೇಮಾನಂದ ಕೆ.
ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!