Saturday, September 14, 2024

ಹತ್ರಾಸ್‌ ಕಾಲ್ತುಳಿತ ಪ್ರಕರಣ : ಎಸ್‌ಡಿಎಂ, ಸರ್ಕಲ್ ಆಫೀಸರ್, ತಹಸೀಲ್ದಾರ್ ಸೇರಿ ಆರು ಮಂದಿಯನ್ನು ಅಮಾನತುಗೊಳಿಸಿದ ಉ.ಪ್ರ ಸರ್ಕಾರ | ಸರ್ಕಾರದ ಈ ನಡೆಯ ಹಿಂದೆ “ದೊಡ್ಡ ಪಿತೂರಿ” !?

ಜನಪ್ರತಿನಿಧಿ (ಲಖನೌ) : 120ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತ ಪ್ರಕರಣದ ಹಿಂದೆ ”ಕಾಣದ ಕೈಗಳ ಕೈವಾಡ”ವಿರಬಹುದು ಎಂದು ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ(ಎಸ್‌ಐಟಿ) ಅಭಿಪ್ರಾಯಪಟ್ಟಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಹತ್ರಾಸ್ ಕಾಲ್ತುಳಿತ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ, ಇದರ ಹಿಂದೆ ದೊಡ್ಡ ಸಂಚಿನ ಭಾಗವಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.  ಇದಕ್ಕೆ ಪುಷ್ಟಿ  ನೀಡುವಂತೆ ಉತ್ತರ ಪ್ರದೇಶ ಸರ್ಕಾರ  ಇಂದು(ಮಂಗಳವಾರ) ಸ್ಥಳೀಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (Sub-divisional Magistrate-SDM) ಅಧಿಕಾರಿಯನ್ನು ಅಮಾನತು ಮಾಡಿ ಆದೇಶಿಸಿದೆ.

ಹತ್ರಾಸ್ ಕಾಲ್ತುಳಿತದ ಬಗ್ಗೆ ಎಸ್‌ಐಟಿ ನೀಡಿರುವ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಥಳೀಯ ಎಸ್‌ಡಿಎಂ ಮಾತ್ರವಲ್ಲದೇ ಸರ್ಕಲ್ ಅಧಿಕಾರಿ ಮತ್ತು ಇತರ ನಾಲ್ವರ ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಿದೆ ಎನ್ನಲಾಗಿದೆ. ಇನ್ನು, ಉತ್ತರ ಪ್ರದೇಶದ ಸರ್ಕಾರದ ಈ ನಡೆಯೇ ಘಟನೆಯ ಹಿಂದೆ “ದೊಡ್ಡ ಪಿತೂರಿ” ಇರಬಹುದು ಎಂದು ಕೂಡ ಹೇಳಲಾಗುತ್ತಿದೆ.

SIT ಸಲ್ಲಿಕೆ ಮಾಡಿರುವ ವರದಿಯಲ್ಲಿ ಜುಲೈ 2 ರಂದು 121 ಮಂದಿಯನ್ನು ಬಲಿ ಪಡೆದ ಘಟನೆಗೆ ಕಾರಣವಾದ ಸ್ಥಳೀಯ ಆಡಳಿತದ ಲೋಪಗಳನ್ನು ಎತ್ತಿ ತೋರಿಸಿದ್ದು, ಕಾಲ್ತುಳಿತಕ್ಕೆ ಸಂಘಟಕರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.

ಕಾರ್ಯಕ್ರಮದ ವ್ಯವಸ್ಥೆಗಳ ಬಗ್ಗೆ ಗಮನ ಹರಿಸಬೇಕಾಗಿರುವುದು ಆಡಳಿತದ ಜವಾಬ್ದಾರಿಯಾಗಿತ್ತು. ಇದನ್ನು ಅಧಿಕಾರಿಗಳು ನಿರ್ವಹಿಸಿಲ್ಲ. ಸ್ಥಳೀಯ ಪೊಲೀಸರು ಹಾಗೂ ಆಡಳಿತವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಲು ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಎಸ್‌ಐಟಿ ವರದಿಯ ಆಧಾರದ ಮೇಲೆ ಎಸ್‌ಡಿಎಂ, ಸರ್ಕಲ್ ಆಫೀಸರ್, ತಹಸೀಲ್ದಾರ್ ಸೇರಿದಂತೆ ಆರು ಮಂದಿಯನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!