spot_img
Tuesday, March 31, 2026
spot_img

ಶಾಸಕ ಭರತ್ ಶೆಟ್ಟಿ ಹೇಳಿಕೆ ಅವರ ಹಿಂಸಾ ಮನಸ್ಥಿತಿ ತೋರಿಸುತ್ತದೆ-ವಿಕಾಸ್ ಹೆಗ್ಡೆ

ಕುಂದಾಪುರ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿಯವರದ್ದು ಹಿಂಸೆಯನ್ನು ಎತ್ತಿ ಹಿಡಿಯುವ ಹಿಂದುತ್ವ ಎಂದು ಹೇಳಿದ್ದನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎನ್ನುವ ಮೂಲಕ ಹಿಂಸೆ ಬಿಜೆಪಿಯವರ ಪರಮೋ ಧರ್ಮ ಎನ್ನುವುದನ್ನು ಪುರಾವೆ ಸಮೇತ ಸಾಬೀತು ಪಡಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಇದನ್ನೇ ಹೇಳಿದ್ದು ಬಿಜೆಪಿಯವರದ್ದು ಹಿಂಸಾ ಪರಮೋ ಧರ್ಮ ಎಂದು. ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂದು ಹೇಳಿರುವುದು ಅವರ ಹಿಂಸಾ ಮನಸ್ಥಿತಿಯನ್ನು ಏತ್ತಿ ತೋರಿಸುತ್ತದೆ. ಕಾಂಗ್ರೆಸ್ ನವರು ಮಹಾತ್ಮಾ ಗಾಂಧೀಜಿ ಅನುಯಾಯಿಗಳು ನಮ್ಮದು ಅಹಿಂಸೆಯೇ ಪರಮೋ ಧರ್ಮ, ಶಾಸಕ ಭರತ್ ಶೆಟ್ಟಿ ಮಾತು ಅವರ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ. ಎರಡು ಅವಧಿಗೆ ಶಾಸಕನಾಗಿರುವ ಅದರಲ್ಲೂ ವೃತ್ತಿಯಲ್ಲಿ ವೈದ್ಯನಾಗಿರುವ ಭರತ್ ಶೆಟ್ಟಿ ಸಾಮಾಜಿಕ ಜೀವನದಲ್ಲಿ ಇರಲು ಯೋಗ್ಯತೆ ಇರುವ ವ್ಯಕ್ತಿ ಅಲ್ಲ ಎಂದು ಪದೇ ಪದೇ ಅವರೇ ಸಾಬೀತು ಮಾಡುತ್ತಿದ್ದಾರೆ. ಶಾಸಕ ಭರತ್ ಶೆಟ್ಟರಿಗೆ ಮಾನಸಿಕ ಸ್ಥಿಮಿತ ಇದ್ದಂತೆ ಇಲ್ಲ ಇದಕ್ಕೆ ಅವರು ಸೂಕ್ತ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಉತ್ತಮ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!