Wednesday, September 11, 2024

ಹಮ್-ಯು.ಎನ್. ಉಮೆನ್ ಏಷ್ಯಾ-ಪೆಸಿಫಿಕ್ ಲೀಡಿಂಗ್ ಫ್ರಂ ದಿ ಫ್ರಂಟ್ ಎಂಬ ಕಥಾ ಸಂಗ್ರಹ ಪುಸ್ತಕದಲ್ಲಿ ಸ್ಥಾನ ಪಡೆದ ಯಕ್ಷಗುರು ಪ್ರಿಯಾಂಕ ಕೆ. ಮೋಹನ್

ಕುಂದಾಪುರ, (ಜನಪ್ರತಿನಿಧಿ ವಾರ್ತೆ):  ಹಮ್-ವೆನ್.ಉಮೆನ್.ಲೀಡ್ ಆಧರಿಸಿದ, ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಯು.ಎನ್.ಉಮೆನ್ ಇಂಡಿಯಾ ನಿರ್ಮಿಸಿದ ಪುಸ್ತಕ ಈ ಪುಸ್ತಕದಲ್ಲಿ ಭಾರತೀಯ ಮಹಿಳಾ ಪರಿವರ್ತಕ ನಾಯಕತ್ವದ ಕುರಿತಾದ 75 ಕಥೆಗಳ ಸಂಕಲನವನ್ನು ಒಳಗೊಂಡಿದೆ. ಮಹಿಳಾ ನಾಯಕರನ್ನು ಗೌರವಿಸಲು ಪೋರ್ಡ್ ಫೌಂಡೇಶನ್ ಸಹಯೋಗದೊಂದಿಗೆ ಪುಸ್ತಕವನ್ನು ಬಿಡುಗಡೆ ಮಾಡಲಾಗಿದ್ದು UN Women Asia-Pacific leading from the front ಎಂಬ ಕಥಾ ಸಂಗ್ರಹವನ್ನು ಹೊಂದಿದೆ. ಈ ಪುಸ್ತಕದಲ್ಲಿ ಕರ್ನಾಟಕದಿಂದ ಯಕ್ಷ ಗುರು ಪ್ರಿಯಾಂಕ ಕೆ. ಮೋಹನ್ ಅವರ ಕೆಲಸದ ಬಗ್ಗೆ, ಅವರ ಅಭಿಪ್ರಾಯ ಒಳಗೊಂಡಿದೆ. ಪರಿವರ್ತನಾಶೀಲ ನಾಯಕತ್ವದ ಶಕ್ತಿಗೆ ಪ್ರಿಯಾಂಕ ಅವರ ಪ್ರಯಾಣ ಸಾಕ್ಷಿಯಾಗಿದೆ. ಸಂಪ್ರದಾಯವನ್ನು ನಾವೀನ್ಯತೆಯೊಂದಿಗೆ ಸಂಯೋಜಿಸುವ, ಲಿಂಗ ಸ್ಟೀರಿಯೊ ಟೈಪ್‌ಗಳಿಗೆ ಸವಾಲು ಹಾಕುವ ಮತ್ತು ಯುವ ಕಲಾವಿದರನ್ನು ಪ್ರೇರೇಪಿಸುವ ಮತ್ತು ಸಬಲಗೊಳಿಸುವ ಅವರ ಸಾಮರ್ಥ್ಯವು ಯಕ್ಷಗಾನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಮತ್ತು ವಿಕಸನಗೊಳಿಸುವಲ್ಲಿ ಶಾಶ್ವತವಾದ ಪ್ರಭಾವವನ್ನು ಬೀರಿದೆ. ಹಾಗೇ ಭಾರತದಲ್ಲಿ ಸಾಂಪ್ರದಾಯಿಕ ಮತ್ತು ಜಾನಪದ ಪ್ರಕಾರಗಳ ಕಳೆದು ಹೋದ ವೈಭವವನ್ನು ಪುನಃ ಸ್ಥಾಪಿಸಲು ಪ್ರಿಯಾಂಕ ಕೆ. ಮೋಹನ್‌ರು ನೂರಾರು ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ.

ತನ್ನ ಏಳನೇ ವಯಸ್ಸಿನಲ್ಲಿಯೇ ಯಕ್ಷಗಾನದ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದವರು. ಇಂಜಿನಿಯರ್ ಪದವಿ ಪಡೆದ, ಪ್ರಸ್ತುತ ವೃತ್ತಿ ಶಿಕ್ಷಣಕ್ಕೆ ಸಂಬಂಧಪಟ್ಟ ಶಿಕ್ಷಾಲೋಕಮ್ ಸಂಸ್ಥೆಯಲ್ಲಿ ಉದ್ಯೋಗಿಯಾದ ಪ್ರಿಯಾಂಕ, ಪತಿ ಸಹಾಯಕ ಆಯುಕ್ತರಾದ ಗಿರೀಶರೊಂದಿಗೆ, ಮಗಳು ಶಾರ್ವಿಯೊಂದಿಗೆ ಬಾಳಪಥದಲ್ಲಿ ಸಾಗುತ್ತಿದ್ದರೂ ಅಪ್ಪ ಕೆ. ಮೋಹನ್‌ರ ಯಕ್ಷದೇಗುಲ ಸಂಸ್ಥೆಯು ಪ್ರಿಯಾಂಕಳ ಕಲೋಪಾಸನೆಯ ತಪೋ ಮಂದಿರವಾಗಿದೆ. ಬಿಡುವಿಲ್ಲದ ಬದುಕಿನಲ್ಲಿ ಕಲೆಗಾಗಿಯೇ ಜೀವನದ ಬಹುಪಾಲು ಸಮಯವನ್ನು ವ್ಯಯಿಸುತ್ತ, ತನ್ನೊಳಗಿನ ಕಲೆಯನ್ನು ಮುಂದಿನ ತಲೆಮಾರಿಗೂ ದಾಟಿಸುತ್ತಾ, ವಿಸ್ತರಿಸುತ್ತಾ, ಯಕ್ಷಗಾನ ಕಲೆಯನ್ನು ಉಳಿಸಬೇಕು, ಬೆಳಸಬೇಕು ಎಂಬ ಧ್ಯೇಯ, ಧೋರಣೆ ಕೇವಲ ಭಾಷಣ, ಪೋಷಣೆಗಳಷ್ಟೇ ಸೀಮಿತವಾಗಿ ಬೀಡುವ ಈ ಸಂದರ್ಭದಲ್ಲಿ ಪ್ರಿಯಾಂಕ ಕೆ. ಮೋಹನ್‌ರಂತಹ ಮೌನ ಸಾಧಕರ ಕಲೆಯೊಳಗಿನ ತಪಸ್ಸು ಕಂಡ ಕಣ್ಣುಗಳಿಗಷ್ಟೇ ಅರ್ಥವಾದೀತು. ಬರೇ ಯಕ್ಷಗಾನ ಕಲಾವಿದೆಯಲ್ಲದೇ ಭರತನಾಟ್ಯದ ಸಶಕ್ತ ಕಲಾ ಪ್ರವೀಣೆಯೂ ಹೌದು.

ಇತ್ತ ಸಂಸಾರ, ಅತ್ತ ಉದ್ಯೋಗ, ಇವೆರಡರ ಮಧ್ಯೆ ಹೆಣ್ಣು ಮಗಳೋರ್ವಳು ಎಲ್ಲಾಕಡೆಯಲ್ಲೂ ನ್ಯಾಯೋಚಿತ ನಿಭಾವಣೆಯಲ್ಲಿ ಸಾಗಬೇಕಾದ ಅನಿವಾರ್ಯತೆಯಲ್ಲಿಯೂ ಬದುಕಿಗಂಟಿದ ಯಕ್ಷಗಾನದಲ್ಲಿ ಸರ್ವಾಂಗೀಣ ಸಾಧಕಿಯಾಗಿ, ಸಂಘಟಕಿಯಾಗಿ ನಡೆಯುವುದಿದೆಯಲ್ಲ ಅದು ನಿಜಕ್ಕೂ ಶ್ಲಾಘನೀಯ.

ಪ್ರತಿ ದೇಶವು ಅನುಭವಿಸುವ ಮಹಿಳಾ ರಾಜಕೀಯ ಸಬಲೀಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಮಸ್ಯೆಗಳು ಮತ್ತು ಸವಾಲುಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ UN ಮಹಿಳಾ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಪರಿವರ್ತನಾಶೀಲ ನಾಯಕತ್ವದ ಶಕ್ತಿಗೆ ಯಕ್ಷಗುರುಗಳಾದ ಪ್ರಿಯಾಂಕ ಕೆ. ಮೋಹನ್ ಅವರ ಪ್ರಯಾಣ ಸಾಕ್ಷಿಯಾಗಿದೆ. ಹಾಗೇ ಯು.ಎನ್.ಉಮೆನ್ ಏಷ್ಯಾ-ಪೆಸಿಫಿಕ್ ಲೀಡಿಂಗ್ ಫ್ರಂ ದಿ ಫ್ರಂಟ್ ಎಂಬ ಹಮ್ ಕಥಾ ಸಂಗ್ರಹದ ಪುಸ್ತಕದಲ್ಲಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನ ಕಲಾವಿದೆ ಗುರು ಪ್ರಿಯಾಂಕ ಕೆ ಮೋಹನ್ ಕಾಣಿಸಿಕೊಂಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!