Sunday, October 13, 2024

ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಗಾ ಭೇಟಿ : ಸಂತ್ರಸ್ತೆಯರೊಂದಿಗೆ ಸಂವಾದ

ಜನಪ್ರತಿನಿಧಿ (ಇಂಫಾಲ) : ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಜಾನಾಂಗೀಯ ಹಿಂಸಾಚಾರ ಬೇಗುದಿಯಿಂದ ಕುದಿಯುತ್ತಿರುವ ಮಣಿಪುರಕ್ಕೆ ಭೇಟಿ ನೀಡಿದ್ದು, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.  ರಾಹುಲ್‌ ಗಾಂಧಿ ಮಣಿಪುರದ ಜಿರಿಬಾಮ್‌ನಲ್ಲಿ ಸಂತ್ರಸ್ತೆಯರೊಂದಿಗೆ ಸಂವಾದ ಮಾಡುವ ಮೂಲಕ ಕಷ್ಟದ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಂಬಲದ ನುಡಿಗಳನ್ನಾಡಿದರು ಎಂದು ತಿಳಿಸಿದೆ.

ಹಿಂಸಾಚಾರ ನಡೆದ ಬಳಿಕ ರಾಹುಲ್‌ ಮೂರನೇ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಇದು ಜನರ ಪರವಾಗಿ ಅವರ ಅಚಲ ಬದ್ಧತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಇತ್ತೀಚೆಗೆ ಮಣಿಪುರದ ಜಿರಿಬಾಮ್‌ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಎರಡು ಪೊಲೀಸ್‌ ಉಪಠಾಣೆಗಳು, ಒಂದು ಅರಣ್ಯ ಇಲಾಖೆ ಕಚೇರಿ ಹಾಗೂ ಸುಮಾರು ಎಪ್ಪತ್ತು ಮನೆಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ನಡೆದಿತ್ತು.

ಜೂನ್‌ ಆರರಂದು ಜಿರಿಬಾಮ್‌ ಜಿಲ್ಲೆಯಲ್ಲಿ ಬಂಡುಕೋರರು ಸುಮಾರು ಅರವತ್ತು ವಯಸ್ಸಿನ ವ್ಯಕ್ತಿಯೊಬ್ಬರನ್ನು ಹತ್ಯೆಗೈದಿದ್ದರು. ಆ ನಂತರ ಅಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ೨೩೯ ಜನರನ್ನು ಗ್ರಾಮಗಳಿಂದ ಸ್ಥಳಾಂತರ ಮಾಡಿ ಜಿರಿ ಪಟ್ಟಣದ ಕ್ರೀಡಾ ಸಂಕ್ರೀಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.

ರಾಹುಲ್‌ ಗಾಂಧಿ ಮಣಿಪುರಕ್ಕೆ ಭೇಟಿ

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!