Sunday, October 13, 2024

ಜೇಸಿ ಸಪ್ತಾಹದ ಸಭಾಪತಿಯಾಗಿ ಜೇಸಿ ರಾಜು ಪೂಜಾರಿ ಮೂಡ್ಲಕಟ್ಟೆ ಅವಿರೋಧ ಆಯ್ಕೆ

ಜನಪ್ರತಿನಿಧಿ(ಕುಂದಾಪುರ) : ಜೆಸಿಐ ಕುಂದಾಪುರ ಸಿಟಿಯ ಆತಿಥ್ಯದಲ್ಲಿ ಸೆಪ್ಟೆಂಬರ್ 9 ರಿಂದ 15 ರ ವರೆಗೆ ಕುಂದಾಪುರ ದ ಜ್ಯೂನಿಯರ್ ಕಾಲೇಜ್ ನ ಶ್ರೀ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ಜರುಗುವ ಜೇಸಿ ಸಪ್ತಾಹದ ಸಭಾಪತಿಯಾಗಿ ಜೇಸಿ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಶನ್ ಶಾಖೆಯನ್ನು ಹೊಸಂಗಡಿಯಲ್ಲಿ ಪ್ರಾರಂಭಿಸಿ, ಕೆ.ಪಿ.ಸಿ ಇಂಗ್ಲೀಷ್ ಮೇಡಿಯಮ್ ನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ,  ಪ್ರಸ್ತುತ ಭಾರತ್ ವಿಕಾಸ ಸೌಹಾರ್ದ ಸಹಕಾರಿ ಸಂಘ ಕುಂದಾಪುರದಲ್ಲಿ ಮುಖ್ಯ  ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ , ರೋಟರಿ ರಿವರ್ ಸೈಡ್ ಕ್ಲಬ್‌ ಇದರ ಸ್ಥಾಪಕ ಕಾರ್ಯದರ್ಶಿಯಾಗಿ ತದನಂತರ ಅಧ್ಯಕ್ಷರಾಗಿ ಪ್ರಸ್ತುತ ಡಿಸ್ಟ್ರಿಕ್ಟ್ ಕಾನ್ಫರೆನ್ಸ್ ಜೋನಲ್ ಕೋ-ಅರ್ಡಿನೇಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಜೇಸಿ ರಾಘವೇಂದ್ರ ಕುಲಾಲ್ ಸ್ಥಾಪಕ ಅಧ್ಯಕ್ಷ ರಾದ ಹುಸೇನ್ ಹೈಕಾಡಿ, ನಿಕಟಪೂರ್ವ ಅಧ್ಯಕ್ಷ ಡಾ ಸೋನಿ, ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ಅಭಿಲಾಷ್ ಬಿ ಏ, ಪ್ರಶಾಂತ್ ಹವಾಲ್ದಾರ್, ಗಿರೀಶ್ ಹೆಬ್ಬಾರ್, ವಿಜಯ ಭಂಡಾರಿ, ಲೇಡಿ ಜೇಸಿ ಕೋ ಆರ್ಡಿನೇಟರ್ ರೇಷ್ಮಾ ಕೋಟ್ಯಾನ್, ಯುವ ಜೇಸಿ ಕೋ ಆರ್ಡಿನೇಟರ್‌ ಕಿರಣ್, ಜೇಸಿ ಸದ್ಯಸ್ಯರಾದ ಸಂಚನ, ನಯನ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!