spot_img
Wednesday, February 19, 2025
spot_img

ಮುದೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಎನ್‌ಸಿಡಿಸಿ ಅವಾರ್ಡ್‌

ಜನಪ್ರತಿನಿಧಿ (ಮುದೂರು) : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಪ್ರತಿಷ್ಠಿತ ಎನ್‌ಸಿಡಿಸಿ ಅವಾರ್ಡ್‌ ಲಭಿಸಿದೆ.

ಭಾರತ ಸರ್ಕಾರದ ಸಹಕಾರ ಸಚಿವಾಲಯದ ಅಡಿಯಲ್ಲಿ ಶಾಸನಬದ್ಧವಾಗಿ ನಿಗಮವಾಗಿರುವ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ(ಎನ್ ಸಿಡಿಸಿ) ಕೊಡಮಾಡುವ ಪ್ರಶಸ್ತಿ ಇದಾಗಿದ್ದು, ಸಹಕಾರ ಕ್ಷೇತ್ರದ ಶ್ರೇಷ್ಠತೆ ಹಾಗೂ ಉತ್ತಮ ಕಾರ್ಯಕ್ಷಮತೆಗಾಗಿ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಉತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ನೀಡುವ ಪ್ರಶಸ್ತಿಯನ್ನು ಮುದೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ದೊರಕಿದೆ.

ಸಹಕಾರ ಸಂಘಗಳ ರಿಜಿಸ್ಟರ್‌ ಇದರ ನೇತೃತ್ವದ ಸಮಿತಿ ರಚಿಸಲಾಗಿದ್ದು, ಆಯ್ಕೆ ಸಮಿತಿಯು ಮುದೂರು ವ್ಯವಸಾಯ ಸೇವಾ ಸಂಘವನ್ನು, ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಗ್ರಾಮೀಣ ಭಾಗದ ರೈತರು, ಕೃಷಿಕರ ಆಶೋತ್ತರಗಳಿಗೆ ಸ್ಪಂದಿಸುವ ಮುದೂರು ವ್ಯವಸಾಯ ಸೇವಾ ಸಹಕಾರ ಸಂಘ 2002ರಲ್ಲಿ ಕೊಲ್ಲೂರು ವ್ಯವಸಾಯ ಸೇವಾ ಸಹಕಾರ ಸಂಘದಿಂದ ಪ್ರತ್ಯೇಕಗೊಂಡು ಕಾರ್ಯನಿರ್ವಹಿಸುತ್ತಾ ಬಂದಿದೆ.

ಸಂಘವು ಸ್ವಂತ ಕಟ್ಟಡವನ್ನು ಹೊಂದಿ ಪೂರ್ಣ ಪ್ರಮಾಣದ ಗ್ರಾಹಕ ಸೇವೆಗೆ ಬದ್ದವಾಗಿ ನಿಂತಿದೆ. ಸುಂದರವಾದ ಪ್ರಧಾನ ಕಚೇರಿಯು ಹವಾನಿಯಂತ್ರಿತವಾಗಿದೆ. ರೈತರ ಅನುಕೂಲಕ್ಕಾಗಿ ಸುಸಜ್ಜಿತ ಗೋದಾಮು ಮಳಿಗೆ, ರಸಗೊಬ್ಬರ ಮಾರಾಟ ಮಳಿಗೆಯನ್ನು ಹೊಂದಿದೆ.

ತನ್ನ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಕೃಷಿ ಅಭಿವೃದ್ಧಿ ಸಾಲ, ಸದಸ್ಯರಿಗೆ ಬೇಕಾದ ಆರ್ಥಿಕ ಅಗತ್ಯತೆಯನ್ನು ನೀಡುತ್ತಿದೆ.  ಸಂಘ ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅನೇಕ ಕಾರ್ಯಗಳನ್ನು ಮಾಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಿಕೊಟ್ಟಿದೆ. ರಿಕ್ಷಾ ಚಾಲಕರ ಅನುಕೂಲಕ್ಕಾಗಿ ರಿಕ್ಷಾ ತಂಗುದಾಣ ನಿರ್ಮಾಣ ಮಾಡಿಕೊಟ್ಟಿದೆ.

ಇನ್ನೊಂದು ಪ್ರಮುಖ ವಿಶೇಷ ಕೊಡುಗೆ ಮುದೂರು ಗ್ರಾಮಕ್ಕೆ ನೀಡಿದೆ. ಶವ ಸಂಸ್ಕಾರ ಮಾಡಲು ಆಧುನಿಕ ಮಾದರಿಯ ಯಂತ್ರವನ್ನು ಊರಿಗೆ ಸಮರ್ಪಿಸಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿ ಗ್ಯಾಸ್ ಅಳವಡಿಸಿರುವ ಶವ ದಹನ ಮಾಡುವ ಯಂತ್ರವಾಗಿದೆ. ಇದೊಂದು ವಿಶಿಷ್ಟ ಕೊಡುಗೆಯಾಗಿದೆ ಕೇವಲ ಒಂದು ಸಿಲಿಂಡರ್‌ನಲ್ಲಿ ಒಂದು ಶವವನ್ನು ದಹನ ಮಾಡಬಹುದಾಗಿದೆ.

ಸಂಘದ ಅಧ್ಯಕ್ಷರಾಗಿ ವಿಜಯ ಶಾಸ್ತ್ರಿ, ಉಪಾಧ್ಯಕ್ಷರಾಗಿ ನಕ್ಷತ್ರ ಬೋವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ, ನಿರ್ದೇಶಕರಾಗಿ ಸಂತೋಷ್‌, ನಿಷಾದ್, ಚಂದ್ರಶೇಖರ್‌, ಅಬ್ದುಲ್‌ ಅಸೀಸ್‌, ರಾಘವೇಂದ್ರ ಡಿ, ಸುಶೀಲ, ಸಿ.ಕೆ ವಿಜಿ, ಸುವರ್ಣ ಕುಮಾರ್‌, ಬೆನ್ನಿ, ಜಯಂತ, ಬಸವ ನಾಯ್ಕ್‌, ವಲಯ ಮೇಲ್ವಿಚಾರಕರಾಗಿ ಶಿವರಾಮ ಪೂಜಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಜುಲೈ 11ರಂದು ಬೆಂಗಳೂರಿನಲ್ಲಿ ನಡೆಯಲಿದೆ. ರಾಷ್ಟ್ರೀಯ ಮಟ್ಟದ ಸಹಕಾರ ಮುಖಂಡರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!