spot_img
Wednesday, April 1, 2026
spot_img

ಸ.ಹಿ.ಪ್ರಾ.ಶಾಲೆ, ಉಳ್ಳೂರು-74: ಸಮವಸ್ತ್ರ, ನೋಟ್ ಪುಸ್ತಕ ಹಾಗೂ ಐಡಿ ಕಾರ್ಡ್ ವಿತರಣೆ

ಶಂಕರನಾರಾಯಣ: ಸ.ಹಿ.ಪ್ರಾ.ಶಾಲೆ, ಉಳ್ಳೂರು-74 ಇಲ್ಲಿ ಜು.3ರಂದು ಮಕ್ಕಳಿಗೆ ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.

ಶಾಲೆಯ ಹಳೆ ವಿದ್ಯಾರ್ಥಿ ಜಯರಾಮ ಕುಲಾಲ ಮತ್ತು ಮನೆಯವರು, ಕುಂಬ್ರಿಜೆಡ್ಡು, ಇವರು ಸಮವಸ್ತ್ರ (ಟೀ ಶರ್ಟ್ ಮತ್ತು ಪ್ಯಾಂಟ್) ನೀಡಿದರೆ , ಆಂಗ್ಲ ಮಾಧ್ಯಮ ಪಠ್ಯಪುಸ್ತಕ, ಐಡಿ ಕಾರ್ಡ್ ಮತ್ತು ಬೆಲ್ಟ್ ಗಳನ್ನು ಮಹೇಶ್ ಶೆಟ್ಟಿ ಬಂಟಕೋಡು, ಹಾಗೂ ನೋಟ್ ಪುಸ್ತಕವನ್ನು ಸುದೀಪ್ ಶೆಟ್ಟಿ ಸಿ ಎ, ಜ್ಞಾನ ಫೌಂಡೇಶನ್ ಬೆಂಗಳೂರು ಇವರು ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ನಂತರ ಅದನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಭೆಯನ್ನು ಉದ್ಘಾಟಿಸಿದ ಸಂಜೀವ ಶೆಟ್ಟಿ ಸಂಪಿಗೇಡಿ ದಾನಿಗಳನ್ನು ಅಭಿನಂದಿಸಿ ಮಾತನಾಡಿದರು. ಸಭೆಯಲ್ಲಿ ದಾನಿಗಳಾದ ರತ್ನಾಕರ ಶೆಟ್ಟಿ ಮತ್ತು ಜಯರಾಮ ಕುಲಾಲ ಇವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಉಳ್ಳೂರು ೭೪ ರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ ಶೆಟ್ಟಿ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲ್ ದೇವಾಡಿಗ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾದ ಗಣೇಶ್ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯು.ರತ್ನಾಕರ ಶೆಟ್ಟಿ, ವ್ಯ. ಸೇ. ಸ. ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ದಾನಿಗಳಾದ ಜಯರಾಮ ಕುಲಾಲ, ಮುಖ್ಯ ಶಿಕ್ಷಕ ಮೂರ್ತಿ ಎಂ.ಎಚ್. ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ಪ್ರಕಾಶ ಕುಲಾಲ್ ವಂದಿಸಿದರು. ಶಿಕ್ಷಕರಾದ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!