spot_img
Saturday, December 7, 2024
spot_img

ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಸಜ್ಜಿತ ಪ್ರಯೋಗಾಲಯಕ್ಕೆ ಗಣಕಯಂತ್ರಗಳ ದೇಣಿಗೆ

ಕುಂದಾಪುರ: ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೩-೨೪ ನೇ ಸಾಲಿನಿಂದ ಪ್ರಾರಂಭಿಸಲಾದ ಬಿ.ಸಿ.ಎ. ಪದವಿ ಕೋರ್ಸ್‌ಗೆ ಸುಸಜ್ಜಿತವಾದ ಗಣಕಯಂತ್ರ ಪ್ರಯೋಗಾಲಯದ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಕೇವಲ ಸರಕಾರಿ ನಿಗದಿತ ಅತ್ಯಲ್ಪ ಶುಲ್ಕದಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ ನುರಿತ ಅನುಭವಿ ಉಪನ್ಯಾಸಕ ವೃಂದ ಹಾಗೂ ದಾನಿಗಳ ನೆರವಿನಿಂದ ಮೌಲ್ಯಯುತವಾದ ಬಿ.ಸಿ.ಎ. ಪದವಿ ಶಿಕ್ಷಣವನ್ನು ನೀಡಲು ಅನುಕೂಲವಾಗಿದೆ. ಕಾಲೇಜಿನ ಮಹಾದಾನಿಗಳಾದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಇವರು ತಮ್ಮ ರಾಮಿ ಫೌಂಡೇಶನ್ ವತಿಯಿಂದ ೧೦ ಲಕ್ಷಕ್ಕೂ ಮಿಕ್ಕಿದ ಮೌಲ್ಯದ ಲೆನೋವಾ ಕಂಪನಿಯ ೨೦ ಗಣಕಯಂತ್ರಗಳನ್ನು ದಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.

ಕರ್ನಾಟಕ ಬ್ಯಾಂಕ್‌ನ ವತಿಯಿಂದ ಸುಮಾರು ಆರು ಲಕ್ಷಕ್ಕೂ ಮಿಕ್ಕಿದ ಮೌಲ್ಯದ 20 ನವೀನ ಗಣಕಯಂತ್ರಗಳನ್ನು ದೇಣಿಗೆಯಾಗಿ ನೀಡಿರುತ್ತದೆ. ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಪೂರೈಸಲಾದ 10 ಗಣಕಯಂತ್ರಗಳು ಹೀಗೆ ೫೦ ಉತ್ತಮ ಗುಣಮಟ್ಟದ ಗಣಕಯಂತ್ರಗಳನ್ನು ಹೊಂದಿರುವ ಸುಸಜ್ಜಿತವಾದ ಗಣಕಯಂತ್ರ ಪ್ರಯೋಗಾಲಯ ಇತ್ತೀಚೆಗೆ ಉದ್ಘಾಟಿಸಿದ ಕರ್ನಾಟಕ ಬ್ಯಾಂಕ್‌ನ ಎ.ಜಿ.ಎಮ್. ವಾದಿರಾಜ ಕೆ. ಇವರು ಕಾಲೇಜಿನಲ್ಲಿ ಇರುವ ಸುವ್ಯವಸ್ಥಿತವಾದ ಮೂಲಭೂತ ಸೌಕರ್ಯಗಳ ಲಭ್ಯತೆಯನ್ನು ಹಾಗೂ ವಿದ್ಯಾರ್ಥಿಗಳ ಒಟ್ಟು ಸಂಖ್ಯಾ ಬಲವನ್ನು ಕಂಡು ಇಂದು ಮಾದರಿ ಸರ್ಕಾರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿರುವುದಾಗಿ ತಿಳಿಸಿ ಅಭಿಮಾನವನ್ನು ವ್ಯಕ್ತಪಡಿಸಿದರು.

ರಾಮಿ ಪೌಂಡೇಶನ್ ಪರವಾಗಿ ಸ್ಥಳೀಯ ಶಿಕ್ಷಣ ಪ್ರೇಮಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ದಾನಿಗಳಾದ ವರದರಾಜ ಎಂ. ಶೆಟ್ಟಿಯವರ ನಿರಂತರ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಇವರು ಶಿಕ್ಷಣದಿಂದ ವಂಚಿತರಾಗಿರುವ ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡಿ ಅವರ ಭವಿಷ್ಯವನ್ನು ರೂಪಿಸಲು ನಿರಂತರವಾಗಿ ಶ್ರಮಿಸುವುದೇ ಈ ಸಂಸ್ಥೆಯ ಧ್ಯೇಯವಾಗಿದೆ. ಇದಕ್ಕೆ ಪೂರಕವಾಗಿ ದಾನಿಗಳಾದ ವರದರಾಜ ಎಂ. ಶೆಟ್ಟಿಯವರ ನಿರಂತರವಾದ ಸಹಾಯ ಹಸ್ತ ಹಾಗೂ ಕರ್ನಾಟಕ ಬ್ಯಾಂಕ್ ಇವರು ನೀಡಿರುವ ದಾನಗಳಿಂದ ಸಂಸ್ಥೆಗೆ ಇನ್ನಷ್ಟು ಬಲ ಬಂದಂತಾಗಿದೆ. ಇವರೆಲ್ಲರಿಗೂ ಕೃತಜ್ಞರಾಗಿರುತ್ತೇವೆ ಎಂದು ನುಡಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ, ಅದ್ಯಾಪಕ ಕಾರ್ಯದರ್ಶೀ ಡಾ. ಶೇಖರ ಬಿ., ಐಕ್ಯೂ‌ಎಸಿ ಸಂಚಾಲಕ ಶ್ರೀ ನಾಗರಾಜ ಯು ಇವರು ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕಿನ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು. ಸ್ವಾತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಇಂಗ್ಲೀಷ್ ಅಧ್ಯಾಪಕಿ ಶ್ರೀಮತಿ ಜಯಂತಿ ಬಾ ಇವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!