spot_img
Wednesday, January 22, 2025
spot_img

ನೂಜಿ: ರೋಟರಿ ಕ್ಲಬ್ ತೆಕ್ಕಟ್ಟೆ ಆಶ್ರಯದಲ್ಲಿ ಸಮವಸ್ತ್ರ, ಸ್ಕೂಲ್ ಬ್ಯಾಗ್ ವಿತರಣೆ

ತೆಕ್ಕಟ್ಟೆ: ಬೇಳೂರಿನ ಮಾಜಿ ಯೋಧ ದಿ. ರಾಮ ಮೊಗವೀರ ಇವರ ಪ್ರಥಮ ಪುಣ್ಯ ಸಂಸ್ಮರಣೆ ದಿನ ಅವರ ಪುತ್ರ ರೊ. ಸುರೇಶ್ ಮತ್ತು ಕುಟುಂಬಸ್ಥರು ನೀಡಿದ ಶಾಲಾ ಸಮವಸ್ತ್ರವನ್ನು ರೋಟರಿ ಕ್ಲಬ್ ತೆಕ್ಕಟ್ಟೆಯ ಆಶ್ರಯದಲ್ಲಿ ನೂಜಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ರೋಟರಿ ಜಿಲ್ಲೆ ೩೧೮೨ ವಲಯ ಎರಡರ ಅಸಿಸ್ಟೆಂಟ್ ಗವರ್ನರ್ ರೊ. ಮಮತಾ ಆರ್ ಶೆಟ್ಟಿ ವಿತರಿಸಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ಅಗಲಿದ ತಮ್ಮ ತಂದೆಯವರ ಪುಣ್ಯ ದಿನದಂದು ಸುಮಾರು ರೂ.೪೦೦೦೦ ಮೌಲ್ಯದ ಸಮವಸ್ತ್ರ ವಿತರಿಸಿ ಸಂಸ್ಮರಣೆ ಮಾಡಿರುವುದು ಒಂದು ಶ್ಲಾಘನೀಯ ಕಾರ್ಯ ಎಂದರು.

ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮಾವತಿ ಶೆಟ್ಟಿ ಮಾತನಾಡಿ ಶಾಲೆಯ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆ ಮತ್ತು ಹಳೆ ವಿದ್ಯಾರ್ಥಿಗಳ ನೆರವು ಯಾಚಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ರೊ. ಗಣಪತಿ ಶ್ರೀಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಎಂ. ಬಿ.ಶಿವಣ್ಣ, ಎಸ್. ಡಿ. ಎಂ ಸಿ ಅಧ್ಯಕ್ಷೆ ರೂಪ ಭಟ್, ರೋಟರಿ ಕ್ಲಬ್ಬಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಸರೋಜಿನಿ ಶೆಟ್ಟಿ ಸ್ವಾಗತಿಸಿ, ರೊ. ಎಚ್. ಜಗದೀಶ್ ಪ್ರಸ್ತಾವನೆಗೈದರು. ರೊ. ಕೃಷ್ಣ ಮೊಗವೀರ ವಂದಿಸಿದರು. ಶಿಕ್ಷಕ ಸುಧಾಮ ಮೊಗವೀರ ಕಾರ್ಯಕ್ರಮ ನಿರ್ವಹಿಸಿದರು.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!