spot_img
Wednesday, April 1, 2026
spot_img

ಬೈಂದೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ: ಸಂಸದರ ನೇತೃತ್ವದಲ್ಲಿ ಸಭೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ. ವೈ.ರಾಘವೇಂದ್ರ ಅವರು ಜು.4ರಂದು ಬೆಂಗಳೂರಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ನೆಡೆಸಿ ನಡೆದರು.

ಮಲೆನಾಡು ಹಾಗೂ ಕರಾವಳಿ ಸಂಪರ್ಕಿಸುವ ಆಗುಂಬೆ ಟನೆಲ್ ಪ್ರಸ್ತಾವನೆ, ಗಂಗೊಳ್ಳಿ-ಕುಂದಾಪುರ ಸೇತುವೆ ನಿರ್ಮಾಣ, ಎನ್.ಎಚ್-೬೬ರಲ್ಲಿ ಬೈಂದೂರು ವಿಧಾಸಭಾ ಕ್ಷೇತ್ರದ ಹೆಮ್ಮಾಡಿ, ತಲ್ಲೂರು, ಮುಳ್ಳಿಕಟ್ಟೆ, ತ್ರಾಸಿ, ಯಡ್ತರೆ ಜಂಕ್ಷನ್ , ಹಾಗೂ ಬೈಂದೂರು ತಾಲೂಕು ಕಛೇರಿ ಬಳಿ ಅಂಡರ್ ಪಾಸ್ ನಿರ್ಮಾಣ, ಎನ್.ಎಚ್-೬೬ ರಲ್ಲಿ ಅರಾಟೆ, ಮುಳ್ಳಿಕಟ್ಟೆ, ಯಡ್ತರೆ ಜಂಕ್ಷನ್ ಹಾಗೂ ಶಿರೂರು ನೀರ್ಗದ್ದೆ ಬಳಿ ಸರ್ವಿಸ್ ರಸ್ತೆ., ಎನ್.ಎಚ್-೬೬ ರಲ್ಲಿ ತ್ರಾಸಿ ಜಂಕ್ಷನ್ -ಮರವಂತೆ ಬೀಚ್ ವರೆಗೆ ಬೀದಿ ದೀಪ., ಎನ್.ಎಚ್-೬೬ರಲ್ಲಿ ಮರವಂತೆ ಬಳಿ ರಸ್ತೆ ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ, ಬೈಂದೂರು-ರಾಣೆಬೆನ್ನೂರು ಎನ್.ಎಚ್-೭೬೬ (ಸಿರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ., ಎನ್.ಎಚ್-೭೬೬(ಸಿ) ರಲ್ಲಿ ಕೊಲ್ಲೂರು ಬೈಪಾಸ್ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಹೆದ್ದಾರಿ ಪ್ರಾಧಿಕಾರದ ಆರ್. ಒ ಬ್ರಹ್ಮಣಕರ್, ಹೆದ್ದಾರಿ ವಿಭಾಗದ ಸಿ.ಇ ಜಗದೀಶ್, ಇ‌ಇ ದಿವಾಕರ್, ಹೆದ್ದಾರಿ ಉಸ್ತುವಾರಿ ಅಧಿಕಾರಿ ಪೀರ್ ಪಾಷ, ಹೆದ್ದಾರಿ ಸಮಾಲೋಚಕರಾದ ತಿಮ್ಮಾರೆಡ್ಡಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ವೆಂಕಟೇಶ್ ಕಿಣಿ ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!