Sunday, September 8, 2024

ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಕರಿಗೆ ಸಮೃದ್ಧ ಜನಸೇವಾ ಟ್ರಸ್ಟ್ ನಿಂದ ಊಟದ ವ್ಯವಸ್ಥೆ

ಬೈಂದೂರು: ನಿರಂತರ ಮಳೆಯಿಂದಾಗಿ ನಾವುಂದ ಬಡಾಕೇರಿಯ ಸಾಲುಬುಡ ಸಂಪೂರ್ಣ ಜಲಾವೃತಗೊಂಡಿದ್ದು, ಸುಮಾರು ೮೦ ಮನೆಗಳು ಜಲದಿಗ್ಬಂದನಕ್ಕೆ ಒಳಗಾಗಿದ್ದವು. ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಸೂಚನೆಯಂತೆ ಸ್ವಯಂ ಸೇವಕರ ದೊಡ್ಡ ಪಡೆ ಪರಿಹಾರ ಕಾರ್ಯಕ್ಕೆ ದುಮುಕಿತ್ತು. ಸುಮಾರು ೫೦ಕ್ಕೂ ಅಧಿಕ ಸ್ವಯಂಸೇವಕರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದ್ದು ಅವರಿಗೆ ಬೈಂದೂರಿನ ಸಮೃದ್ಧ ಜನಸೇವಾ ಟ್ರಸ್ಟ್ ವತಿಂದ ೮೦ಕ್ಕೂ ಹೆಚ್ಚು ಊಟದ ಪ್ಯಾಕೇಟ್ ಗಳನ್ನು ವಿರಿಸಲಾಯಿತು.

ತುರ್ತು ಕಾರ್ಯದ ನಿಮಿತ್ತು ಬೆಂಗಳೂರು ಪ್ರವಾಸದಲ್ಲಿ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನೆರೆ ಭೀತಿಯ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ ಆಡಳಿತ ಯಂತ್ರ ಚುರುಕುಗೊಳಿಸಿದ್ದರು. ಅಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಕಾರ್ಯಚರಣೆಗೆ ಇಳಿದಿದ್ದರು. ಈ ಮಧ್ಯೆ ಶಾಸಕರ ಕರೆಗೆ ಒಗೊಟ್ಟು ಸ್ವಯಂಸೇವಕರು ಸ್ವಪ್ರೇರಣೆಯಿಂದ ಸೇವಾ ಕಾರ್ಯದಲ್ಲಿ ದಿನಪೂರ್ತಿ ತೊಡಗಿಸಿಕೊಂಡಿದ್ದರು. ಅವರಿಗೆ ಸಮೃದ್ಧ ಜನಸೇವಾ ಟ್ರಸ್ಟ್ ವತಿಂದ ಊಟದ ವ್ಯವಸ್ಥೆ ಪೂರೈಸಲಾಯಿತು.

ನೆರೆ ಪೀಡಿತ ಪ್ರದೇಶಕ್ಕೆ ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಉದ್ಯಮಿ ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಖಜಾಂಚಿ ಶ್ರೀಗಣೇಶ್ ಗಾಣಿಗ, ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಸೋಮಯ್ಯ, ಮಂಡಲ ಕಾರ್ಯದರ್ಶಿ ಪ್ರಸಾದ್ ಪಿ. ಬೈಂದೂರು ಸೇಹಿತ ಅನೇಕರು ಭೇಟಿ ನೀಡಿ, ಪರಿಹಾರ ಕಾರ್ಯ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!