spot_img
Thursday, December 5, 2024
spot_img

ದೇಶದ ಜನತೆ ಅಪಪ್ರಚಾರವನ್ನು ಸೋಲಿಸಿ, ಅಭಿವೃದ್ಧಿಗೆ ಒತ್ತು ನೀಡಿದ್ದಾರೆ : ರಾಜ್ಯಸಭೆಯಲ್ಲಿಯೂ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ

ಜನಪ್ರತಿನಿಧಿ (ನವ ದೆಹಲಿ) : ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ಮಾಡಿದ್ದಾರೆ. ನವೆಂಬರ್ 24 ರಂದು ನಾವು ಸಂವಿಧಾನ ದಿನ ಆಚರಿಸಲು ನಿರ್ಧರಿಸಿದಾಗ ಈಗ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಿರುವವರು ಅದನ್ನು ವಿರೋಧಿಸಿದರು ಎಂದು ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಅವರು ತಿರುಗೇಟು ನೀಡಿದರು.

ಇಂದು(ಬುಧವಾರ) ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಸಂವಿಧಾನದ ಕಾರಣದಿಂದ ನನಗೆ ಇಲ್ಲಿಗೆ ಬರಲು ಅವಕಾಶ ದೊರಕಿದೆ. ನಮಗೆ ಸಂವಿಧಾನದ ಆಶಯ ಅಮೂಲ್ಯ. ನಮಗೆ ಸಂವಿಧಾನ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರ 10 ವರ್ಷಗಳನ್ನು ಪೂರೈಸಿದೆ, ಇನ್ನೂ 20 ವರ್ಷಗಳ ಕಾಲ ಪೂರೈಸಬೇಕಿದೆ. ಕಳೆದ 10 ವರ್ಷಗಳಲ್ಲಿ ಸಮರ್ಪಣಾ ಮನೋಭಾವ ಹಾಗೂ ನಿರಂತರ ಸೇವೆಯೊಂದಿಗೆ ಮಾಡಿದ ಕೆಲಸವನ್ನು ಸಾರ್ವಜನಿಕರು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ಜನತೆ ಆಶೀರ್ವಾದ ಮಾಡಿದ್ದಾರೆ. ದೇಶದ ಜನತೆ ಅಪಪ್ರಚಾರವನ್ನು ಸೋಲಿಸಿದ್ದಾರೆ, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ವಿಶ್ವಾಸ ರಾಜಕಾರಣಕ್ಕೆ ಜನ ಬೆಂಬಲಿಸಿದ್ದಾರೆ ಎಂದು ಹೇಳಿದ್ದಲ್ಲದೇ, ಪ್ರತಿಪಕ್ಷಗಳು ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

60 ವರ್ಷಗಳ ನಂತರ, 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಮರಳಿದೆ. ಇದು ಸಾಮಾನ್ಯ ವಿಷಯವಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಸಾರ್ವಜನಿಕರು ನೀಡಿದ ಈ ನಿರ್ಧಾರಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಕಪ್ಪುಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮತ್ತೆ ಅವರು ಪ್ರತಿಪಕ್ಷಗಳ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ಇದೇ ಸಂದರ್ಭದಲ್ಲಿ ಮೋದಿ, ಇವರಿಗೆ ಆಟೋ ಪೈಲಟ್‌ ಮತ್ತು ರಿಮೋಟ್‌ ಪೈಲಟ್‌ ಬಳಸಿ ಸರ್ಕಾರ ನಡೆಸುವವರು ಬೇಕಾಗಿದ್ದಾರೆ. ಅವರಿಗೆ ಅಭಿವೃದ್ಧಿ ಮೇಲೆ ನಂಬಿಕೆ ಇಲ್ಲ, ಹೇಗೆ ಕಾಯಬೇಕು ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂಬುದಾಗಿ ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದ್ದರು.

ಸೋನಿಯಾಗಾಂಧಿ ಬಗ್ಗೆ ರಿಮೋಟ್‌ ಪದ ಬಳಸಿ ಪರೋಕ್ಷವಾಗಿ ಟೀಕಸಿದ್ದ ಮೋದಿ ವಿರುದ್ಧ ಪ್ರತಿಪಕ್ಷಗಳು ಹರಿಹಾಯ್ದವು. ರಾಜ್ಯಸಭೆಯನ್ನು ಮುಂದೂಡಿ, ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿ ರಾಜ್ಯಸಭೆಯಿಂದ ಹೊರನಡೆದ ಘಟನೆಯೂ ನಡೆಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!