Tuesday, October 8, 2024

IBPS Recruitment : ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶ

ಜನಪ್ರತಿನಿಧಿ : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2025-2026ರ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಅಡಿಯಲ್ಲಿ ಸುಮಾರು 6,128 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳಿಗೆ ಇದೊಂದು ಸುವರ್ಣ ಅವಕಾಶವೇ ಸರಿ.

ವಿದ್ಯಾರ್ಹತೆ:  ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದೊಂದಿಗೆ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಜುಲೈ 1, 2024ರಂತೆ ಅರ್ಜಿ ಸಲ್ಲಿಸುವವರ ವಯಸ್ಸು 20ರಿಂದ 28 ವರ್ಷಗಳ ನಡುವೆ ಇರಬೇಕು. ಅಂದರೆ ಅರ್ಜಿದಾರರು ಜುಲೈ 2, 1996 ಮತ್ತು ಜುಲೈ 1, 2004ರ ನಡುವೆ ಜನಿಸಿದವರಾಗಿರಬೇಕು.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 850 ರೂ.. SC/ST, PWD, EMM, DESM ಅಭ್ಯರ್ಥಿಗಳು 175 ರೂ. ಪಾವತಿಸಬೇಕು. ಇನ್ನು, ಅಂತಿಮ ಆಯ್ಕೆಯು ಪ್ರಾಥಮಿಕ ಹಾಗೂ ಮುಖ್ಯ ಪರೀಕ್ಷೆಯ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಕೆ: ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21 ಆಗಿದೆ.

ಲಿಖಿತ ಪರೀಕ್ಷಾ ವಿಧಾನ: IBPS ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯು 100 ಅಂಕಗಳ 100 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್ ಭಾಷೆ, ಸಂಖ್ಯಾ ಸಾಮರ್ಥ್ಯ ಮತ್ತು ರೀಸನಿಂಗ್ ಎಬಿಲಿಟಿ ವಿಭಾಗಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ 2 ಗಂಟೆಗಳ ಅವಧಿಯಾಗಿರುತ್ತದೆ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ : ಜುಲೈ 21, 2024
  • ಪೂರ್ವ ಪರೀಕ್ಷೆಯ ತರಬೇತಿಯ ದಿನಾಂಕ : ಆಗಸ್ಟ್ 12ರಿಂದ 17ರವರೆಗೆ
  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆ: ಆಗಸ್ಟ್ 24, 25, 31ರಂದು
  • ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ದಿನಾಂಕ : ಸೆಪ್ಟೆಂಬರ್ ತಿಂಗಳಲ್ಲಿ
  • ಆನ್‌ಲೈನ್ ಮುಖ್ಯ ಪರೀಕ್ಷೆಗಳು : ಅಕ್ಟೋಬರ್ 13, 2024‌

ಹೆಚ್ಚಿನ ಮಾಹಿತಿಗಾಗಿ ಅಧಿಕೃತ IBPS ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!