Saturday, October 12, 2024

ಹೊಸ ಕ್ರಿಮಿನಲ್ ಕಾನೂನುಗಳು ಭಾರತದಲ್ಲಿ ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿದೆ : ಅಮಿತ್‌ ಶಾ

ಜನಪ್ರತಿನಿಧಿ (ನವ ದೆಹಲಿ) : ಇಂದಿನಿಂದ ಜಾರಿಗೆ ಬಂದಿರುವ ಹೊಸ ಕ್ರಿಮಿನಲ್ ಕಾನೂನುಗಳು ಭಾರತದಲ್ಲಿ ಬ್ರಿಟಿಷ್ ಕಾನೂನುಗಳ ಯುಗವನ್ನು ಕೊನೆಗೊಳಿಸಿದೆ, ಅಪರಾಧ ನ್ಯಾಯ ವ್ಯವಸ್ಥೆಯನ್ನು ‘ಸಂಪೂರ್ಣವಾಗಿ ಸ್ವದೇಶಿ’ ಆಗಿ ಪರಿವರ್ತಿಸಿದೆ, ಇದು ಭಾರತೀಯ ನೀತಿಯಲ್ಲಿ ಹುದುಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಈ ಕ್ರಿಮಿನಲ್ ಕಾನೂನುಗಳು ಅನುಷ್ಠಾನ ಪೂರ್ಣಗೊಂಡ ನಂತರ, ಅತ್ಯಂತ ಆಧುನಿಕ ಕಾನೂನುಗಳಾಗಲಿವೆ. ಶಿಕ್ಷೆಯ ಬದಲಿಗೆ ನ್ಯಾಯ, ತ್ವರಿತ ವಿಚಾರಣೆ ಹಾಗೂ ವಿಳಂಬದ ಸಂದರ್ಭದಲ್ಲಿ ನ್ಯಾಯ ಒದಗಿಸಲಾಗುವುದು, ಮೊದಲು ಪೊಲೀಸರ ಹಕ್ಕುಗಳನ್ನು ಮಾತ್ರ ರಕ್ಷಿಸಲಾಗುತ್ತಿತ್ತು, ಆದರೆ ಈಗ ಸಂತ್ರಸ್ತರ ಮತ್ತು ದೂರುದಾರರ ಹಕ್ಕುಗಳನ್ನು ಸಹ ರಕ್ಷಿಸಲಾಗುವುದು ಎಂದು ಹೇಳಿದರು.

22.5 ಲಕ್ಷಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಹೊಸ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ತರಬೇತಿ ನೀಡಲು 12,000 ಮಾಸ್ಟರ್ ಟ್ರೈನರ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಅಪರಾಧಗಳು ನಡೆಯುವುದನ್ನು ಹೊಸ ಕ್ರಿಮಿನಲ್ ನ್ಯಾಯ ಕಾನೂನುಗಳು ಕಡಿಮೆ ಮಾಡುತ್ತವೆ. ಶೇ.  90ರಷ್ಟು ಶಿಕ್ಷೆಯ ಪ್ರಮಾಣವನ್ನು ಹೊಸ ಕಾನೂನುಗಳ ಅಡಿಯಲ್ಲಿ ಕಾಣಬಹುದು ಎಂದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!