spot_img
Saturday, December 7, 2024
spot_img

ಹಿರಿಯ ಧರ್ಮಗುರು ವಂ| ಪ್ಯಾಟ್ರಿಕ್ ಕ್ರಾಸ್ತಾ ನಿಧನ

ಕುಂದಾಪುರ: ಕೆನರಾ ಪ್ರಾಂತ್ಯದ ಕಪುಚಿನ್ ಸಭೆಯ ಹಿರಿಯ ಧರ್ಮಗುರು ವಂ| ಪ್ಯಾಟ್ರಿಕ್ ಕ್ರಾಸ್ತಾ ಅವರು ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ  ಜೂನ್ 27 ರಂದು ನಿಧನರಾದರು.

ಅವರು ಗಂಗೊಳ್ಳಿ ಧರ್ಮಕೇಂದ್ರದ ವ್ಯಾಪ್ತಿಯಲ್ಲಿನ ಕನ್ನಡಕುದ್ರುವಿನ, ದಿ.ರೋಸಾರಿಯೊ ಕ್ರಾಸ್ತಾ ಮತ್ತು ದಿ.ಸಿಸಿಲಿಯಾ ಕ್ರಾಸ್ತಾ ಇವರ ಪುತ್ರನಾಗಿ 1943 ಅಕ್ಟೋಬರ್ 3 ರಂದು ಜನಿಸಿದ್ದರು. ಅವರು ಗಂಗೊಳ್ಳಿಯಲ್ಲಿ ಶಿಕ್ಷಣ ಪಡೆದು ನಂತರ ಅವರು ಕಪುಚಿನ್ ಸಭೆಯಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡರು.

ತಮ್ಮ ಧಾರ್ಮಿಕ ಜೀವನದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದರು. ಅವರು ರೋಮ್ ನಲ್ಲಿ ಬೈಬಲ್ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕಪುಚಿನ್ ಸಭೆಯ ಕರ್ನಾಟಕ-ಗೋವಾ-ಮಹಾರಾಷ್ಟ್ರ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾಗಿದ್ದರು. ಅಲ್ಲದೆ ಅವರು ಮೈಸೂರು, ಕೃಪಾಲಯ, ಬೊಗಾಡಿ, ಮೈಸೂರ್, ಶಾಂತಿ ಸದನ (FISI) ಬೆಂಗಳೂರಿನ ಶಾಂತಿ ಸಾಧನ ಕೇಂದ್ರ, ದೀನ ಸೇವಾ ಆಶ್ರಮ ದೈವಶಾಶ್ತ್ರ ಕೇಂದ್ರದಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 7 ಜನ ಸಹೋದರರಾಗಿದ್ದಾರೆ ಮತ್ತು ಓರ್ವ ಸಹೋದರಿ ಒಡಹುಟ್ಟಿದವರಾಗಿದ್ದಾರೆ,. ಅವರಲ್ಲಿ ಓರ್ವ ಸಹೋದರ ಫಾ.ರುಡೊಲ್ಪ್ ಎಸ್.ವಿ.ಡಿ. ಸಭೆಯ ಧರ್ಮಗುರುಗಳಾಗಿದ್ದಾರೆ. ಫಾ.ಪ್ಯಾಟ್ರಿಕ್ ಕ್ರಾಸ್ತಾ ಜನಪ್ರಿಯ ಧರ್ಮಗುರುಗಳಾಗಿದ್ದು, ಜನರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಇವರ ಅಂತಿಮ ವಿಧಿವು ಫರಂಗಿಪೇಟೆಯ ಕಪುಚಿನ್ ಗುರುಮಠದಲ್ಲಿ ಜುಲಾಯಿ 1 ರಂದು ಸೋಮವಾರ ಸಂಜೆ 3 ಗಂಟೆಗೆ ಜರಗಲಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!