spot_img
Saturday, December 7, 2024
spot_img

ಸಂಸದೀಯ ಸಂಪ್ರದಾಯ ಅನುಕೂಲ ಶಾಸ್ತ್ರವಾಗಬಾರದು !

ಸಂಸದೀಯ ವ್ಯವಸ್ಥೆಯ ಬೆಳವಣಿಗೆ ನಿಂತಿರುವುದೇ ಅದರ ಆರೇೂಗ್ಯ ಪೂರ್ಣ ಸಂಪ್ರದಾಯದ ನಡವಳಿಕೆಯ ಮೇಲೆ ಎನ್ನುವುದು ಸಂಸದೀಯ ವ್ಯವಸ್ಥೆಯನ್ನು ಒಪ್ಪಿಕೊಂಡು ಬಂದ ದೇಶದ ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಅರ್ಥವಾಗಬೇಕು ಜನಸಾಮಾನ್ಯರಿಗೂ ಮನವರಿಕೆಯಾಗಬೇಕು.

ಯಾವುದೇ ಒಂದು ಪಕ್ಷಕ್ಕೆ ಸದ್ಯಕ್ಕೆ ಬಹುಮತವಿದೆ ಅಂದ ತಕ್ಷಣ ನಂಬಿಕೊಂಡು ಪಾಲಿಸಿಕೊಂಡು ಬಂದ ಸಂಪ್ರದಾಯಗಳನ್ನು ಗಾಳಿಗೆ ತೂರುವುದು ಸಂಸದೀಯ ಬೆಳವಣಿಗೆಯ ದೃಷ್ಟಿಯಿಂದ ಹಿತಕರವಾದ ನಡವಳಿಕೆ ಅಲ್ಲ.

ಸಂಸದೀಯ ವ್ಯವಸ್ಥೆಯ ಜನಕ ಅನ್ನಿಸಿಕೊಂಡ ಬ್ರಿಟನ್ ನಲ್ಲಿ ಅವರ ಸಂವಿಧಾನ ಅಲಿಖಿತವಾಗಿದ್ದರೂ ಕೂಡಾ ಅಲ್ಲಿನ ಸಂಸದೀಯ ವ್ಯವಸ್ಥೆ ಇನ್ನೂ ಗಟ್ಟಿಯಾಗಿ ನಿಂತಿದೆ ಅಂದರೆ ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಜನರ ರಕ್ತದಲ್ಲಿ ಅಡಗಿರುವ ಪ್ರಜಾಪ್ರಭುತ್ವ ಸಂಸದೀಯ ಪದ್ಧತಿಯ ಮೇಲಿನ ಪ್ರೀತಿ ಗೌರವ ನಂಬಿಕೆ. ಯಾರೇ ಅಧಿಕಾರಕ್ಕೆ ಬಂದರೂ ಈ ಸಂಸದೀಯ ನಡವಳಿಕೆ ಮುರಿಯಲು ಸಾಧ್ಯವಿಲ್ಲ.

ಸಂಸದೀಯ ವ್ಯವಸ್ಥೆಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಲಿಖಿತ ರೂಪದಲ್ಲಿ ಬರೆಯಲು ಸಾಧ್ಯವೂ ಅಲ್ಲ ಸಾಧುವಲ್ಲ.

ಬ್ರಿಟನ್ನಿನ ಸಂಸತ್ತಿನ ಸಾಮಾನ್ಯ ಸಭೆಯ ವಿಚಾರದಲ್ಲಿ ಕೂಡಾ ಸಾಕಷ್ಟು ಉದಾಹರಣೆಗಳು ನೀಡಬಹುದು. ಅವರು ಸ್ಪೀಕರ್‌ ಸ್ಥಾನಕ್ಕೆ ಎಷ್ಟು ಆದ್ಯತೆಯನ್ನು ನೀಡಿದ್ದಾರೆ ಅಂದರೆ “ones speaker means life time speaker” ಎನ್ನುವ ಮಟ್ಟಿಗೆ ಮರ್ಯಾದೆ ನೀಡುತ್ತಾ ಬಂದಿದ್ದಾರೆ.

ನಮ್ಮಲ್ಲಿ ಕೂಡಾ ಸಂಸತ್ತಿನ ಸಂಸದೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಹತ್ತು ಹಲವು ಆರೇೂಗ್ಯಪೂರ್ಣ ನಡವಳಿಕೆಯನ್ನು ಹುಟ್ಟು ಹಾಕಿಕೊಂಡು ಬಂದ ಉದಾಹರಣೆಗಳು ನಮ್ಮ ಮುಂದಿದೆ. ಆದರೆ ರಾಜಕೀಯ ಪಕ್ಷಗಳು ತಮ್ಮ ಒಣ ಪ್ರತಿಷ್ಟೆಗಾಗಿ ಇದನ್ನು ಬಲಿಕೊಟ್ಟರು. ಇದೆ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಹಂಗಾಮಿ ಸ್ಪೀಕರ್‌ ಆಯ್ಕೆ ಮಾಡುವ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ಸದನಕ್ಕೆ ಆಯ್ಕೆಯಾಗಿ ಬಂದವರಿಗೆ ಈ ಅವಕಾಶ ನೀಡುವುದು ಇದು ಆರೇೂಗ್ಯ ಪೂರ್ಣ ಸಂಪ್ರದಾಯ. ಅದು ಬಿಟ್ಟು ಇದರ ಒಳಗೂ ಇನ್ನೊಂದು ಲೆಕ್ಕಾಚಾರ ಹಾಕಿ ನಿರಂತರವಾಗಿ ಆಯ್ಕೆಯಾಗಿ ಬಂದಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿಯೇ ಸದನದ ಹಿರಿಯ ಸದಸ್ಯರನ್ನು ರಾಜಕೀಯ ಮೇಲಾಟಕ್ಕಾಗಿ ಪರಿಗಣಿಸದಿರುವುದು ಸರಿ ಅಲ್ಲ. ಹೀಗೆ ಮಾಡುತ್ತಾ ಹೇೂದರೆ ಪ್ರತಿಯೊಂದಕ್ಕೂ ಒಂದೊಂದು ಕಾರಣ ಖಂಡಿತವಾಗಿಯೂ  ಸಿಕ್ಕಿಯೇ ಸಿಗುತ್ತದೆ. ಇದು ರಾಜಕೀಯ ಪಕ್ಷಗಳ ಅನುಕೂಲ ಶಾಸ್ತ್ರದ ಪ್ರಯೇೂಗವೆಂದೇ ಪರಿಗಣಿಸಬೇಕಾಗುತ್ತದೆ.

ಈಗ ಆಡಳಿತರೂಢ ಸಮಿಶ್ರ ಸರಕಾರಕ್ಕೆ ಸ್ವಲ್ಪ ಬಹುಮತವಿದೆ ಸಾಧ್ಯವಾಯಿತು. ಒಂದು ವೇಳೆ ಸರಿಯಾದ ಬಹುಮತವಿಲ್ಲದೆ ತೂಗುಗತ್ತಿಯಲ್ಲಿ ಕೂತು ಸರ್ಕಾರ ಕಟ್ಟಿ  ಸದನದಲ್ಲಿ ಬಹುಮತ ತೇೂರಿಸಬೇಕಾದ ಪರಿಸ್ಥಿತಿಯ ಷರತ್ತಿನಲ್ಲಿ ಸರ್ಕಾರ ಕಟ್ಟಿದೆ ಆದರೆ ಈ ಹಂಗಾಮಿ ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಒಂದು ವಿಶ್ವಾಸ ಮಂಡನೆಯ ಕಠಿಣ ಪರಿಸ್ಥಿತಿ ಎದುರಿಸಬೇಕಾದ ಪರಿಸ್ಥಿತಿ ಆಡಳಿತರೂಢ ಪಕ್ಷಕ್ಕೆ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ. ಉದಾಹರಣೆಗೆ ಬಹು  ಹಿಂದೆ ವಾಜಿಪೇಯಿಯವರನ್ನು ಪ್ರಧಾನಿ ಮಂತ್ರಿಯಾಗಿ ರಾಷ್ಟ್ರ ಪತಿಗಳು ನೇಮಿಸಿ ಸದನದಲ್ಲಿ ಬಹುಮತ ಸಾಬೀತು ಪಡಿಸಿ ತೇೂರಿಸಿ ಎಂದು ಷರತ್ತಿನ ಸಂದರ್ಭದಲ್ಲಿ ಬಹುಮತ ವ್ಯಕ್ತಪಡಿಸುವ ಮೊದಲೇ ಅವರಿಗೆ ಬಂದ ಬಹುದೊಡ್ಡ ಸಮಸ್ಯೆ ಅಂದರೆ ಸ್ಪೀಕರ್‌ ಆಯ್ಕೆ. ಅಂತೂ ಕೊನೆಯ ಎರಡು ನಿಮಿಷಗಳಲ್ಲಿ ಅವರನ್ನು ಬಚಾವು ಮಾಡಿದ್ದು ಇದೇ ಟಿಡಿಪಿಯ ಚಂದ್ರಬಾಬು ನಾಯ್ಡು . ನಮ್ಮ ಬಾಲಯೇೂಗಿಯನ್ನು ಸ್ಪೀಕರ್‌ ಮಾಡುವುದಿದ್ದರೆ ನಾವು ನಿಮಗೆ ಬಾಹ್ಯ ಬೆಂಬಲ ನೀಡಲು ಸಿದ್ಧ ಎನ್ನುವ ಫೇೂನ್ ಕರೆ ಬಂದಾಗಲೇ ವಾಜಪೇಯಿ ಪ್ರಧಾನಿಯಾಗಿ ಮುಂದುವರಿಯಲು ಕಾರಣವಾಯಿತು. ಒಂದು ವೇಳೆ ಇದೇ ಅನುಕೂಲ ಶಾಸ್ತ್ರದ ಪ್ರಯೇೂಗವನ್ನು ವಾಜಪೇಯಿ ಅವರಿಗೆ ಮಾಡಲು ಸಾಧ್ಯವಿತ್ತಾ? ಎನ್ನುವುದನ್ನು ಇಂದು ನಾವು ಆಲೋಚಿಸಬೇಕಾದ ಸಂಪ್ರದಾಯದ ಔಚಿತ್ಯ.

ಹಾಗೇ ಇನ್ನೊಂದು ಬಹುಮುಖ್ಯವಾದ ಅಲಿಖಿತವಾದ ನಡವಳಿಕೆ ಇದೆ. ಪ್ರಧಾನ ಮಂತ್ರಿಗಳನ್ನು ನೇಮಿಸುವಾಗ ಯಾರನ್ನು ನೇಮಿಸಬೇಕು ಎನ್ನುವ ಕುರಿತಾಗಿ ಸಂವಿಧಾನದಲ್ಲಿಉಲ್ಲೇಖವಿಲ್ಲ. ಆದರೆ ರಾಷ್ಟ್ರಪತಿ ಗಳು ಕೆಲವೊಂದು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ತಾವಾಗಿಯೇ  ತೆಗದುಕೊಳ್ಳಬೇಕು ಎನ್ನುವ ಸಂಪ್ರದಾಯವೂ ಇದೆ. ಇದನ್ನು  ಕೂಡಾ ಅನುಕೂಲ ಶಾಸ್ತ್ರದ ತರದಲ್ಲಿ ಬಳಸಲು ನಾವು ಅವಕಾಶ ಮಾಡಿಕೊಟ್ಯರೆ ಪರಿಸ್ಥಿತಿ ಎಲ್ಲಿಗೆ ಬರಬಹುದು?

ಅಂತೂ ಸಂಸದೀಯ ವ್ಯವಸ್ಥೆಯಲ್ಲಿ ಕೆಲವೊಂದು ನಡವಳಿಕೆಯನ್ನು ರೂಢಿಸಿಕೊಂಡು ಬಂದಿರುವುದು ರಾಜಕೀಯ ಪಕ್ಷಗಳ ಅಹಂಕಾರವನ್ನು ಪ್ರದರ್ಶಿಸಲು ಅಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಂಡಾಗಲೇ ಪ್ರಜಾಪ್ರಭುತ್ವದಲ್ಲಿ ಗೌರವ ವಿಶ್ವಾಸ ಮುಂದುವರಿಯಲು ಸಾಧ್ಯ ಎನ್ನುವುದನ್ನು ಪ್ರತಿಯೊಬ್ಬರು ಮನವರಿಕೆ ಮಾಡಿಕೊಳ್ಳಲೇಬೇಕಾಗಿದೆ. ಇವತ್ತು ನಮ್ಮ ಪಕ್ಷವಿದೆ ನಮ್ಮ ನಾಯಕರಿದ್ದಾರೆ ಅಂದರೆ ಸಾಲದು ನಾಳಿನ ಪರಿಸ್ಥಿತಿಯ ಬಗ್ಗೆಯೂ ಮುಂದಾಲೇೂಚನೆ ಮಾಡಬೇಕು. ಸಂಸದೀಯ ನಡವಳಿಕೆಗಳು ಅನುಕೂಲ ಶಾಸ್ತ್ರವಾಗಬಾರದು ಅಷ್ಟೆ.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
(ಲೇಖಕರು : ನಿವೃತ್ತ ರಾಜಕೀಯ ಶಾಸ್ತ್ರ ಉಪನ್ಯಾಸಕರು, ರಾಜಕೀಯ ವಿಶ್ಲೇಷಕರು)

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!