Wednesday, September 11, 2024

ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು: ಶಾಲಾ ಸಂಸತ್ ಚುನಾವಣೆಗೆ ಭೇಟಿ ನೀಡಿದ ಸಹಾಯಕ ಆಯುಕ್ತರು

ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಕುಂದಾಪುರ ಇಲ್ಲಿ ೨೦೨೪-೨೫ ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಮೊಬೈಲ್ ಇವಿ‌ಎಮ್ ಮೂಲಕ ದಿನಾಂಕ ೨೭-೦೬-೨೦೨೪ ರ ಗುರುವಾರ ಸಂಸ್ಥೆಯಲ್ಲಿ ನಡೆಯಿತು.

ಸಂಸ್ಥೆಯ ಉಪಪ್ರಾಂಶುಪಾಲರಾದ ಕಿರಣ ಹೆಗ್ಡೆಯವರು ಮುಖ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಸುವಿಕೆ, ಪರಿಶೀಲನೆ, ಹಿಂತೆಗದುಕೊಳ್ಳುವಿಕೆ, ಮತದಾನ, ಫಲಿತಾಂಶ ಘೋಷಣೆ ಎಲ್ಲವನ್ನೂ ಅತ್ಯಂತ ಕ್ರಮಬದ್ಧವಾಗಿ ನಡೆಸಲಾಯಿತು. ಆಧಾರ ಕಾರ್ಡ ಅಥವಾ ಬ್ಯಾಂಕ್ ಪಾಸ್ ಪುಸ್ತಕವನ್ನು ದಾಖಲೆಯಾಗಿ ಬಳಸಿ ಸುಮಾರು ೪೪೦ ವಿದ್ಯಾರ್ಥಿಗಳು ಮತದಾನ ಮಾಡಿದರು.

ಈ ಸಂದರ್ಭದಲ್ಲಿ ಕುಂದಾಪುರದ ಸಹಾಯಕ ಆಯುಕ್ತರಾದ ರಶ್ಮಿ ಎಸ್ ಆರ್ ರವರು ಮತ್ತು ತಹಶೀಲ್ದಾರರಾದ ಶೋಭಾ ಲಕ್ಷ್ಮೀ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕುಂದಾಪುರದ ಸಹಾಯಕ ಆಯುಕ್ತರಾದ ಶ್ರೀಮತಿ ರಶ್ಮಿ ಎಸ್ ಆರ್ ರವರು ಮಕ್ಕಳಿಗೆ ಚುನಾವಣಾ ಶಿಕ್ಷಣ ನೀಡುವುದರಿಂದ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಯಶ್ವಸ್ಸು ಸಾಧ್ಯ ಎಂದು ಹೇಳಿದರು. ಚುನಾವಣೆಯಲ್ಲಿ ಶಾಲಾ ನಾಯಕನಾಗಿ ೧೦ ಬಿ ತರಗತಿಯ ಕುಮಾರ ಸಾಯಿಪ್ರಣಾಮ್ ಮತ್ತು ಉಪನಾಯಕನಾಗಿ ಕುಮಾರ ಸೀಮಂತ ಆಯ್ಕೆಯಾದರು.

ಚುನಾವಣಾ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳೇ ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಎಲ್ಲಾ ಶಿಕ್ಷಕ ಮತ್ತು ಶಿಕ್ಷಕಿಯರು ಸಹಕರಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!