spot_img
Thursday, December 5, 2024
spot_img

ಕೆಂಪೇಗೌಡರ ಜನಾನುರಾಗಿ ನಡೆ ಎಂದಿಗೂ ಆದರ್ಶ : ರಶ್ಮಿ ಎಸ್. ಆರ್‌ ಅಭಿಮತ

ಜನಪ್ರತಿನಿಧಿ (ಕುಂದಾಪುರ) : ಕೆಂಪೇಗೌಡರ ಜನಾನುರಾಗಿ ನಡೆ ಎಂದಿಗೂ ಆದರ್ಶ. ಬೆಂಗಳೂರು‌ ನಿರ್ಮಾಣದ ಸಂದರ್ಭದಲ್ಲಿ ಕುಲಕಸುಬುಗಳನ್ನು ಸೃಷ್ಟಿಸಿದ್ದು, ಹೊರೆಗಲ್ಲುಗಳನ್ನು ನಿರ್ಮಿಸಿದ್ದು ಅವರ ದೂರಗಾಮಿ ಚಿಂತನೆ ತೋರಿಸುತ್ತದೆ ಎಂದು ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್ ಹೇಳಿದರು.

ಕುಂದಾಪುರ ತಾಲೂಕು ಪಂಚಾಯತ್ ಕುಂದಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಕಲಾಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಯಂತಿಗಳ ಆಚರಣೆಗಳಿಂದ ಆದರ್ಶಗಳು ಮುಂದಿನ ಪೀಳಿಗೆಗೆ ದೊರಕುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಲ್ಲದೇ ಶುಭ ಹಾರೈಸಿದರು.

ವರದರಾಜ ಪ್ರಥಮದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕಿ ಶರಾವತಿ, ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೆಂಪೇಗೌಡ ಅವರು ಬಾಲ್ಯದಿಂದಲೇ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿದ್ದರು. ಬೆಂಗಳೂರು ನಿರ್ಮಾಣಕ್ಕೆ 1514 ಜನವರಿ 14 ರಂದು ಗುದ್ದಲಿ ಪೂಜೆ ಇಂದಿನ ರಾಜಾ ಸರ್ಕಲ್ ಎಂಬಲ್ಲಿ ನಡೆದಿದ್ದು ಅಂದಿನಿಂದ ಇಂದಿನವರೆಗೆ ಬೆಂಗಳೂರು ಬೆಳೆಯುತ್ತಿದ್ದು ಜಗದಗಲದೆತ್ತರಕ್ಕೆ‌ ಕೀರ್ತಿ ವಿಸ್ತರಿಸಿದೆ ಎಂದರು. ಪಠ್ಯ ಪುಸ್ತಕಗಳಲ್ಲಿ ಕೆಂಪೇಗೌಡರ ಬಗೆಗಿನ ಯಾವುದೇ ಪೂರ್ಣ ಮಾಹಿತಿ ಇಲ್ಲದೇ ಇರುವುದು ವಿಷಾದನೀಯ ಎಂದು ಹೇಳಿದರು.

ಬೆಂಗಳೂರಿಗೆ ಕೋಟೆಗಳು, ಕೆರೆಗಳು ಹಾಗೂ ಪೇಟೆಗಳು, ಕಾವಲು ಗೋಪುರಗಳ ನಿರ್ಮಿಸಿದ್ದರು. ರೈತರಿಗೆ, ವ್ಯಾಪಾರಿಗಳಿಗಾಗಿ ಕೆಂಪೇಗೌಡರು ನೀಡಿದ ಸಹಕಾರ ಅಪಾರ. ನ್ಯಾಯದಾನದಲ್ಲೂ ಇವರನ್ನು‌ ಮೀರಿಸಲು ಆಗಿಲ್ಲ. ಬೆಂಗಳೂರು ನಿರ್ಮಾತೃ ಜನಾನುರಾಗಿ ವ್ಯಕ್ತಿತ್ವದ ಕೆಂಪೇಗೌಡರ ಕೊಡುಗೆ ಅಪಾರವಾದದ್ದು ಎಂದರು.

ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮಿ ಪ್ರಾಸ್ತಾವಿಕ ಮಾತನಾಡಿದರು. ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್., ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಉಪಪ್ರಾಂಶುಪಾಲ ಕಿರಣ ಹೆಗ್ಡೆ, ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.

ಉಪತಹಶಿಲ್ದಾರ್ ವಿನಯ್ ಎಸ್‌. ವಿ ಸ್ವಾಗತಿಸಿ.  ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.  ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ವಂದಿಸಿದರು.

ಕೆಂಪೇಗೌಡ ಅವರ ಜಯಂತ್ಯೋತ್ಸವದ ಅಂಗವಾಗಿ ತಾಲೂಕು ಮಟ್ಟದಲ್ಲಿ ಏರ್ಪಡಿಸಿದ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!