spot_img
Wednesday, January 22, 2025
spot_img

ರಾಹುಲ್‌ ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನೂ ಸಲಹೆ ನೀಡಿದ್ದೆ : ಸಿಎಂ ಸಿದ್ದರಾಮಯ್ಯ

ಜನಪ್ರತಿನಿಧಿ (ಬೆಂಗಳೂರು) : ರಾಹುಲ್‌ ಗಾಂಧಿ ಅವರು ವಿಪಕ್ಷ ನಾಯಕ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು(ಬುಧವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ರಾಹುಲ್ ಗಾಂಧಿಯವರು ಲೋಕಸಭಾ ವಿರೋಧ ಪಕ್ಷದ ಸ್ಥಾನವನ್ನು ಸ್ವೀಕರಿಸಬೇಕೆಂದು ನಾನು ಕೂಡ ಸಲಹೆ ನೀಡಿದ್ದೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಎದುರಿಸಬೇಕಾದರೆ ನೀವೇ ವಿರೋಧಪಕ್ಷದ ನಾಯಕರಾಗಬೇಕೆಂಬುದು ನನ್ನ ಹಾಗೂ ಕಾರ್ಯಕಾರಿಣಿ ಸಮಿತಿಯ ಒತ್ತಾಯವಾಗಿತ್ತು. ಆ ಹುದ್ದೆ ಅಲಂಕರಿಸಿರುವುದಕ್ಕೆ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇನ್ನು, ನಂದಿನಿ ಹಾಲಿನ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲಿನ ದರ ಹೆಚ್ಚಾಗಿಲ್ಲ. ಕಳೆದ ವರ್ಷ ಇದೇ ವೇಳೆಗೆ ಹಾಲಿನ ಉತ್ಪಾದನೆ 90 ಲಕ್ಷ ಲೀಟರ್ ಇತ್ತು. ಈಗ 99 ಲಕ್ಷ ಲೀಟರ್ ಗಿಂತ ಹೆಚ್ಚಾಗಿದೆ. ರೈತರು ಡೈರಿಗೆ ತರುವ ನಾವು ಹಾಲು ಪಡೆಯಬೇಕಾಗಿದ್ದು, ಅದನ್ನು ಮಾರಾಟ ಮಾಡಬೇಕಿದೆ. ಒಂದು ಲೀಟರ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ನಲ್ಲಿ 50 ಮೀ.ಲೀ ಹೆಚ್ಚು ಮಾಡಿದ್ದು, ಅದಕ್ಕೆ 2.10 ರೂ. ವೆಚ್ಚವಾಗುತ್ತೆ. ಹಾಲಿನ ಪ್ರಮಾಣಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ. ಹಾಲು ಹೆಚ್ಚು ಉತ್ಪಾದನೆಯಾಗುತ್ತಿದೆ, ಅದನ್ನು ಗ್ರಾಹಕರಿಗೆ ಹೆಚ್ಚು ನೀಡಿ ಅದಕ್ಕೆ ತಕ್ಕ ದರವನ್ನಷ್ಟೇ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೆಚ್ಚಾಗಿ ಉತ್ಪಾದನೆಯಾಗಿರುವ ಹಾಲನ್ನು ರೈತರಿಂದ ಕೊಂಡು ಗ್ರಾಹಕರಿಗೆ ತಲುಪಿಸಬೇಕೇ ಹೊರತು ಚೆಲ್ಲಲಾಗುವುದಿಲ್ಲ. ಹೋಟೆಲ್‌ಗಳಲ್ಲಿ ಕಾಫಿ ಟೀ ದರಗಳನ್ನು ಹೇಗೆ ಹೆಚ್ಚಿಸುತ್ತಾರೆ? ಹಾಲಿನ ಬೆಲೆ ಏರಿದ್ದರೆ ಮಾತ್ರ ಹೆಚ್ಚಿಸಬೇಕು. ಹಾಲಿನ ಪ್ರಮಾಣವೂ ಹೆಚ್ಚಿಸಿ, ಅದಕ್ಕೆ ಅನುಗುಣವಾಗಿ ದರ ನಿಗದಿ ಮಾಡಲಾಗಿದೆ. ಹೆಚ್ಚುವರಿಯಾಗಿ ನೀಡುವ 2 ರೂಪಾಯಿಗೆ ಹೆಚ್ಚು ಹಾಲು ಸಿಗುತ್ತಿದೆ. ಹೀಗಿರುವಾಗ ಕಾಫಿ, ಟೀ ದರ ಏರಿಸುವ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!