Saturday, October 12, 2024

ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ದೃಷ್ಟಿ ಬಿಡುಗಡೆ

ಗಂಗೊಳ್ಳಿ : ಯಾವುದೇ ವಿದ್ಯಾಸಂಸ್ಥೆಯ ವಾರ್ಷಿಕ ಸಂಚಿಕೆಯು ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಕಾರಣವಾಗುತ್ತದೆ ಸುಪ್ತ ಮನಸ್ಸಿನ ಭಾವನೆಗಳಿಗೆ ವೇದಿಕೆಯಾಗುತ್ತದೆ. ಶಿಕ್ಷಣವು ಉದ್ಯಮವಾಗುತ್ತಿರುವ  ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಶೂನ್ಯವಾಗುತ್ತಿದೆ ಇಂತಹ ಸಮಯದಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಿಯು ಕಾಲೇಜಿನ ವಾರ್ಷಿಕ ಸಂಚಿಕೆ ವಿದ್ಯಾರ್ಥಿಗಳಲ್ಲಿನ ಕೌಶಲ್ಯವನ್ನು ಹೊರಹೊಮ್ಮಿಸುವಲ್ಲಿ ಗಮನಾರ್ಹ ಕಾರ್ಯವಾಗಿದೆ ಎಂದು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಹೇಳಿದರು.
 ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ವಾರ್ಷಿಕ ಸಂಚಿಕೆ ದೃಷ್ಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು
 ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಡಾ. ಕಾಶಿನಾಥ್ ಪೈ, ಕಾಲೇಜಿನ  ಕಾರ್ಯದರ್ಶಿ ಎನ್ ಸದಾಶಿವ ನಾಯಕ್, ಹಿರಿಯ ಆಂಗ್ಲಭಾಷೆ ಉಪನ್ಯಾಸಕ ಥಾಮಸ್ ಪಿ.ಎ ಉಪಸ್ಥಿತರಿದ್ದರು.
 ವಿದ್ಯಾರ್ಥಿನಿ ಸೃಷ್ಟಿ ಸ್ವಾಗತಿಸಿದರು. ಭಾರತಿ ಪರಿಚಯಿಸಿದರು. ದೃಷ್ಟಿ ವಾರ್ಷಿಕ ಸಂಚಿಕೆ ನಿರ್ವಾಹಕ ಸಂಪಾದಕ ಸುಜಯೀoದ್ರ ಹಂದೆ ಹೆಚ್ ಪ್ರಾಸ್ತಾವಿಕ ಮಾತುಗಳನಾಡಿದರು.  ಶ್ರೇಯಲ್ ವಂದಿಸಿದರು. ಗುರು ಚರಣ್ ವೈದ್ಯ ಕಾರ್ಯಕ್ರಮ ನಿರೂಪಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!