Friday, November 8, 2024

ಬೀಜಾಡಿ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಕಾರವಾರದಲ್ಲಿ ಪತ್ತೆ

ಕುಂದಾಪುರ: ತಿಪಟೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಯ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ತಿಪಟೂರಿನ ಯುವಕ ಯೋಗೀಶ್ ಬೀಜಾಡಿ ಸಮುದ್ರ ತೀರದಲ್ಲಿ ನೀರಿಗಿಳಿದ ವೇಳೆ ಕೊಚ್ವಿ ಹೋಗಿದ್ದು, ಆತನ ಮೃತ ದೇಹವನ್ನು ಒಂದು ವಾರದ ಬಳಿಕ ಜೂನ್ ೨೫ರಂದು ಕಾರವಾರದಲ್ಲಿ ಪತ್ತೆಯಾಗಿದೆ.

ತಿಪಟೂರಿನಲ್ಲಿ ಐಟಿ‌ಐ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳಾದ ಸಂದೀಪ್ ಹಾಗೂ ಯೋಗೀಶ್ ಎಂಬುವರು ತಮ್ಮ ಸ್ನೇಹಿತನ ಮನೆ ಮದುವೆ ಕಾರ್ಯಕ್ರಮಕ್ಕೆ ಜೂ.೧೯ರಂದು ಬಂದಿದ್ದರು. ಬಳಿಕ ಇಬ್ಬರೂ ಸಂಜೆ ದಾಸರ್ ಮನೆ ಸಮೀಪ ಸಮುದ್ರಕ್ಕಿಳಿದಿದ್ದು ಒಬ್ಬ ನಾಪತ್ತೆಯಾಗಿದ್ದು, ಇನ್ನೊಬ್ಬನನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ತಿಪಟೂರಿನ ನಿವಾಸಿ ಯೋಗೀಶ್ (೨೩) ಸಮುದ್ರದಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ.

ಕುಂದಾಪುರ ಪೊಲೀಸರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು, ಮುಳುಗುತಜ್ಞರು ಯೋಗೀಶ್ ಗಾಗಿ ಹುಡುಕಾಟ ನಡೆಸಿ ವಿಫಲರಾಗಿದ್ದರು. ಇದೀಗ ಯೋಗೇಶ ಮೃತದೇಹ ಕಾರವಾರದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!