spot_img
Wednesday, January 22, 2025
spot_img

ಬಡಾಹಾಡಿ ಸುಬ್ರಾಯ ಉಡುಪ ನಿಧನ

ಜನಪ್ರತಿನಿಧಿ (ಕುಂದಾಪುರ) : ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಕಂದಾವರ ಇಲ್ಲಿನ ಆಡಳಿತ ಮೊಕ್ತೇಸರರಾದ ಬಡಾಹಾಡಿ ಸುಬ್ರಾಯ ಉಡುಪ ಅವರು ಶನಿವಾರ (22.06.2024) ಅಸ್ತಂಗತರಾದರು. ಶಿಕ್ಷಣ, ಸಹಕಾರಿ, ಧಾರ್ಮಿಕ ಕ್ಷೇತ್ರದಲ್ಲಿ ಗುರುತರವಾದ ಹೆಜ್ಜೆಯನ್ನೊತ್ತಿದ್ದ ಅವರು ಅಪಾರ ಬಂಧು ಬಳಗವನ್ನು, ಕುಟುಂಬದವರನ್ನು ಅಗಲಿದ್ದಾರೆ.

ಬಡಾಹಾಡಿ ಸುಬ್ರಾಯ ಉಡುಪ, ಬಳ್ಕೂರು ಅವರು 22-01-1930 ಬಳ್ಳೂರು ಗ್ರಾಮದ ಬಡಾಹಾಡಿಯ ದಿ: ರಾಮಚಂದ್ರ ಉಡುಪ ಮತ್ತು ದಿ। ಮಹಾಲಕ್ಷ್ಮೀಯಮ್ಮನವರ ಸುಪುತ್ರ. ದೇಶದ ಸ್ವಾತಂತ್ರ್ಯ ಪೂರ್ವದ ಶಿಕ್ಷಣ ವ್ಯವಸ್ಥೆ ನಮ್ಮ ಕಲ್ಪನೆಗೆ ನಿಲುಕದ್ದು. ಆ ಕಾಲದಲ್ಲೇ ಬಸ್ರೂರು ಪರಿಸರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕುಂದಾಪುರದ ಹೆಮ್ಮೆಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಪೂರೈಸಿ, ಮಂಗಳೂರಿನಲ್ಲಿ ಟಿ.ಸಿ.ಎಚ್. ತರಬೇತಿ ಪಡೆದಿದ್ದರು. ವಿದ್ಯಾರ್ಥಿದೆಸೆ ಮುಗಿಯುತ್ತಲೆ ಕಂಡೂರಿನ ನೇತಾಜಿ ಶಾಲೆಯಲ್ಲಿ ಅಧ್ಯಾಪಕರಾಗಿ ಕರ್ತವ್ಯಕ್ಕೆ ಸೇರಿದ ಅವರು ಎರಡೇ ವರ್ಷದಲ್ಲಿ ಆದರ್ಶ ಅಧ್ಯಾಪಕರೆನಿಸಿ ಸಂಸ್ಥೆಯ ಮುಖ್ಯೋಪಾಧ್ಯಾಯರಾಗಿ ಸುಮಾರು ಮೂವತ್ತಾರು ವರ್ಷ ಅವಿಚ್ಛಿನ್ನ ಸೇವೆ ಸಲ್ಲಿಸಿದ್ದಾರೆ.

ಬಳ್ಕೂರು ಜಪ್ತಿ ಗ್ರಾಮಗಳ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಸಹಕಾರಿ ರಂಗದಲ್ಲೂ ತೊಡಗಿಕೊಂಡಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!