Sunday, September 8, 2024

ವಿಪಕ್ಷಗಳ ವಿರೋಧದ ನಡುವೆಯೂ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಪ್ರಮಾಣ | ದೇಶವನ್ನು ನಡೆಸಲು ಒಮ್ಮತ ಅತ್ಯಂತ ಮಹತ್ವ : ಮೋದಿ

ಜನಪ್ರತಿನಿಧಿ (ನವ ದೆಹಲಿ) : ಹೊಸ ಸರ್ಕಾರದ ಲೋಕಸಭೆಯ ಮೊದಲ ಅಧಿವೇಶನ ಪ್ರಾರಂಭಗೊಂಡಿದೆ. ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಮೊದಲ ಲೋಕಸಭಾ ಅಧಿವೇಶನ ಇದಾಗಿದದ್ದು, ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ವಿಪಕ್ಷಗಳ ವಿರೋಧದ ನಡುವೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೂ ಮುನ್ನಾ ಮಾತನಾಡಿದ  ಪ್ರಧಾನಿ, “ದೇಶದ ಜನರು ಮೂರನೇ ಬಾರಿಗೆ ನಮಗೆ ಅವಕಾಶ ನೀಡಿದ್ದಾರೆ, ಇದು ನಮ್ಮ ದೊಡ್ಡ ಗೆಲುವು, ನಮ್ಮ ಜವಾಬ್ದಾರಿ ಮೂರು ಪಟ್ಟು ಹೆಚ್ಚಾಗಿದೆ. ನಮ್ಮ ಮೂರನೇ ಅಧಿಕಾರಾವಧಿಯಲ್ಲಿ ನಾವು ಮೂರು ಪಟ್ಟು ಹೆಚ್ಚು ಕೆಲಸ ಮಾಡುತ್ತೇವೆ ಹಾಗೂ ನಾವು ಮೂರು ಬಾರಿ ಫಲಿತಾಂಶಗಳನ್ನು ಪಡೆಯುತ್ತೇವೆ ಎಂದು ಭರವಸೆ ನೀಡುತ್ತೇನೆ” ಎಂದು ಹೇಳಿದ್ದಾರೆ.

ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ದೇಶದ ಕಲ್ಯಾಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಮ್ಮತದ ಅಗತ್ಯವಿದೆ ಎಂದವರು ಕರೆ ನೀಡಿದ್ದಾರೆ.

“ಕಳೆದ 10 ವರ್ಷಗಳಲ್ಲಿ, ನಾವು ಯಾವಾಗಲೂ ಸಂಪ್ರದಾಯವನ್ನು ಜಾರಿಗೆ ತರಲು ಪ್ರಯತ್ನಿಸಿದ್ದೇವೆ ಯಾಕೆಂದರೆ ಸರ್ಕಾರವನ್ನು ನಡೆಸಲು ಬಹುಮತದ ಅಗತ್ಯವಿದೆ, ಆದರೆ ದೇಶವನ್ನು ನಡೆಸಲು ಒಮ್ಮತ ಅತ್ಯಂತ ಮಹತ್ವದ್ದಾಗಿದೆ ಎಂದು ನಾವು ನಂಬುತ್ತೇವೆ. ತಾಯಿ ಭಾರತಿ ಮತ್ತು 140 ಕೋಟಿ ಜನರ ಆಕಾಂಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಪೂರೈಸಿ, ಎಲ್ಲರ ಒಪ್ಪಿಗೆಯೊಂದಿಗೆ ಹಾಗೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಸೇವೆ ಸಲ್ಲಿಸಲು ಇದು ನಮ್ಮ ನಿರಂತರ ಪ್ರಯತ್ನವಾಗಿದೆ” ಎಂದಿದ್ದಾರೆ.

ಇನ್ನು, ದೇಶಕ್ಕೆ ಉತ್ತಮ ಪ್ರತಿಪಕ್ಷ, ಜವಾಬ್ದಾರಿಯುತ ಪ್ರತಿಪಕ್ಷಗಳ ಅಗತ್ಯವಿದೆ. ಈ 18ನೇ ಲೋಕಸಭೆಯಲ್ಲಿ ಗೆದ್ದಿರುವ ಸಂಸದರು ಸಾಮಾನ್ಯ ಜನರ ಈ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತಾರೆ ಎಂಬ ಪೂರ್ಣ ನಂಬಿಕೆ ನನಗಿದೆ ಎಂದರು.

ನರೇಂದ್ರ ಮೋದಿ, ಅಮಿತ್ ಶಾ ಒಳಗೊಂಡು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಕ್ಷೇತ್ರಗಳ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡಿದರು.

https://x.com/ANI/status/1805109310768468192

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!