Friday, November 8, 2024

ರಾಜ್ಯದ 13,896 ಮಂದಿಗೆ ಉದ್ಯೋಗವಕಾಶ : ಸಚಿವ ಎಂ. ಬಿ. ಪಾಟೀಲ್‌

ಜನಪ್ರತಿನಿಧಿ (ಬೆಂಗಳೂರು) : ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 146ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ ಒಟ್ಟು 3,587 ಕೋಟಿ ರೂ. ಬಂಡವಾಳ ಹೂಡಿಕೆಯ 64 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಸಮಿತಿ ನೀಡಿದ ಅನುಮೋದನೆಯಿಂದ ರಾಜ್ಯದಲ್ಲಿ 13,896 ಮಂದಿಗೆ ಉದ್ಯೋಗ ಲಭಿಸಲಿದೆ. ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ ಇಂಡಿಯಾ, ರಿವರ್ ಮೊಬಿಲಿಟಿ, ವೆಗಾ ಆಟೊ ಆ್ಯಕ್ಸೆಸರೀಸ್, ಮಿರ್ರಾ ಆ್ಯಂಡ್ ಮಿರ್ರಾ ಇಂಡಸ್ಟ್ರೀಸ್ ಒಳಗೊಂಡು ಅನೇಕ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲಿವೆ.

ಸಭೆಯ ಬಳಿಕ ಮಾತನಾಡಿ ಪಾಟೀಲ್, ‘ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ ಇಂಡಿಯಾ ದೇವನಹಳ್ಳಿ ಬಳಿ 390 ಕೋಟಿ ರೂ. ವೆಚ್ಚದಲ್ಲಿ ಪ್ರೈಮರಿ ಸೆಲ್ಸ್ ಆ್ಯಂಡ್ ಬ್ಯಾಟರೀಸ್ ಘಟಕ ಸ್ಥಾಪಿಸಲಿದೆ. ಇದರಿಂದ 300 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ’ ಎಂದು ವಿವರಿಸಿದರು.

ಬೆಂಗಳೂರು ಮೂಲದ ನವೋದ್ಯಮವಾದ ರಿವರ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ ಹೊಸಕೋಟೆ ಬಳಿ 306.9 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲಿದೆ. ಇದರಿಂದ 690 ಜನರಿಗೆ ಉದ್ಯೋಗವಕಾಶ ದೊರಕಲಿದೆ’ ಎಂದು ತಿಳಿಸಿದರು.

ವೆಗಾ ಆಟೊ ಆ್ಯಕ್ಸೆಸರೀಸ್ ಪ್ರೈವೇಟ್ ಲಿಮಿಟೆಡ್‌ನಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ಇಪಿಎಸ್ ಲೀನರ್‌ ತಯಾರಿಕಾ ಘಟಕ ಸ್ಥಾಪನೆಯಾಗಲಿದೆ. 205 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಮಿರ್ರಾ ಆ್ಯಂಡ್ ಮಿರ್ರಾ ಇಂಡಸ್ಟ್ರೀಸ್‌ನಿಂದ ಉಕ್ಕಿನ ತಂತಿ ಸಂಸ್ಕರಣಾ ಘಟಕ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಕಂಪನಿಯ 200 ಕೋಟಿ ರೂ.0 ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.

ಇದರಿಂದಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!