spot_img
Saturday, December 7, 2024
spot_img

ಎಮ್.ಸಿ.ಸಿ. ಬ್ಯಾಂಕ್  ಬ್ರಹ್ಮಾವರ ಶಾಖೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

ಬ್ರಹ್ಮಾವರ: ಎಮ್.ಸಿ.ಸಿ. ಬ್ಯಾಂಕ್ ಲಿ ಇದರ ಬ್ರಹ್ಮಾವರ ಶಾಖೆಯಲ್ಲಿ  ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳ ಜೊತೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು.

ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಇದರ ಅಧ್ಯಕ್ಷರಾದ ಅನಿಲ್ ಲೋಬೊ ಮಾತನಾಡಿ ನಮ್ಮ ಬ್ಯಾಂಕಿನ ೧೧೨ ವರ್ಷಗಳ ಇತಿಹಾಸದಲ್ಲಿ ಪ್ರಥಮ ಭಾರಿ ಈ ವರ್ಷ ನಮ್ಮ ಬ್ರಹ್ಮಾವರ ಶಾಖೆಯಲ್ಲಿ, ಬ್ರಹ್ಮಾವರ ವಲಯದ ಮುಸ್ಲಿಂ ಗ್ರಾಹಕರು ಮತ್ತು ಹಿತೈಸಿಗಳೊಡನೆ ಬಕ್ರಿದ್ ಹಬ್ಬವನ್ನು ಆಚರಿಸುತ್ತೀದ್ದೆವೆ. ನಮ್ಮ ಬ್ಯಾಂಕ್ ಎಲ್ಲರಿಗೂ ಒಂದೇ ರೀತಿಯ ಸೇವೆಯನ್ನು ನೀಡುತ್ತದೆ, ಬಕ್ರೀದ್ ಹಬ್ಬದ ಸಂಭ್ರಮಕ್ಕೆ ನಾವು ಮುಸ್ಲಿಂ ಭಾಂದವರಿಗೆ ಶುಭಾಷಯಗಳನ್ನು ಕೋರುತ್ತೇವೆ, ಹಾಗೇಯೆ ಮುಂದಿನ ದಿನಗಳಲ್ಲಿ ದೀಪಾವಳಿಯನ್ನು ಆಚರಿಸುತ್ತೆವೆ’ ಎಂದು ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ತಿಳಿಸಿದರು.

ಅಥಿತಿಗಳಾದ ಕೋಟ ಇಬ್ರಾಹಿಂ ಸಾಹೇಬ್ ಮಾತನಾಡಿ ‘ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಬ್ಯಾಂಕ್ ಆಗಿದೆ, ಮತ್ತು ಇದು ರಾಜ್ಯಾದಂತ ತನ್ನ ಕಾರ್ಯ ಕ್ಷೇತ್ರವನ್ನು ವ್ಯಾಪಿಸಿದೆ. ಹೀಗಿರುವಾಗ ನಮ್ಮ ಮುಸ್ಲಿಂ ಸಮುದಾಯದೊಂದಿಗೆ ಬಕ್ರೀದ್ ಹಬ್ಬ ಆಚರಿಸಿದ್ದು ನಮಗೆ ಅತ್ಯಂತ ಹರ್ಷ ತಂದಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಉಡುಗೊರೆಯನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸೀನಿಯರ್ ಮೇನೆಜರ್ ಸಂದೀಪ್ ಕ್ವಾಡರ್ಸ್ ಉಪಸ್ಥಿತರಿದ್ದು, ಎಮ್.ಸಿ.ಸಿ. ಬ್ಯಾಂಕ್ ಲಿಮಿಟೆಡ್ ನಿರ್ದೇಶಕ ಎಲ್ರೊಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು, ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ವಂದಿಸಿದರು. ಬ್ಯಾಂಕಿನ ಸಿಬಂದಿ ಅನ್ಸಿಲ್ಲಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!