Sunday, September 8, 2024

ಸಿದ್ಧಾಪುರ: ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ಬೆಚ್ಚಳ್ಳಿ ಉದ್ಘಾಟನೆ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸಿದ್ಧಾಪುರ, ಜೂ.17: ಕೃಷಿಕ, ಸಮಾಜಸೇವಕ ರಾಜೇಂದ್ರ ಬೆಚ್ಚಳ್ಳಿಯವರು ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಿದ, ಭೋಜು ಪೂಜಾರಿ ಚಾರಿಟೇಬಲ್ ಟ್ರಸ್ಟ್ ಬೆಚ್ಚಳ್ಳಿ ಇದರ ಉದ್ಘಾಟನಾ ಕಾರ್ಯಕ್ರಮ ಸಿದ್ಧಾಪುರದ ರಂಗನಾಥ ಸಭಾಂಗಣದಲ್ಲಿ ಜೂ.16ರಂದು ನಡೆಯಿತು.

ದಕ್ಕೇರಬಾಳು ಗೋಪಾಲಕೃಷ್ಣ ಕಾಮತ್ ಟ್ರಸ್ಟ್ ಉದ್ಘಾಟಿಸಿ ಶುಭ ಹಾರೈಸಿದರು. ಸಂಪಿಗೇಡಿ ಸಂಜೀವ ಶೆಟ್ಟಿ, ಟ್ರಸ್ಟ್ ನ ದಾಖಲೆಗಳನ್ನು ಭೋಜು ಪೂಜಾರಿ ಅವರಿಗೆ ಹಸ್ತಾಂತರಿಸಿ ಶುಭ ಕೋರಿದರು. ನಿವೃತ್ತ ಪ್ರಾಧ್ಯಾಪಕ ಶ್ರೀಕಾಂತ್ ರಾವ್ ಸಿದ್ದಾಪುರ, ರಾಜೇಂದ್ರ ಬೆಚ್ಚಳ್ಳಿ ಅವರ ಸಾಧನೆಯ ಕೈಪಿಡಿ ಬಿಡುಗಡೆಗೊಳಿಸಿ ಟ್ರಸ್ಟ್ ಗೆ ಶುಭಾಶಯ ಕೋರಿದರು.

ರಾಜೇಂದ್ರ ಬೆಚ್ಚಳ್ಳಿ ಅವರ ಆಶಯದಂತೆ, ಈ ಎಲ್ಲಾ ಸಾಧನೆಗಳ ಹಿಂದೆ ಬೆನ್ನೆಲುಬಾಗಿ ನಿಂತ, ತಮ್ಮ ತಂದೆ ತಾಯಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿದರು. ಅವರ ಕುಟುಂಬ ವರ್ಗದವರು ಕೂಡ ಅವರ ಜೊತೆ ಸಹಕರಿಸಿದರು. ಇದೇ ಸಂದರ್ಭದಲ್ಲಿ ಗಿರೀಶ್ ಪೂಜಾರಿ ಕಾರೇಮಕ್ಕಿ ಭೋಜು ಪೂಜಾರಿ ಟ್ರಸ್ಟ್ ಗೆ ೫,೦೦೦ ದೇಣಿಗೆ ನೀಡಿ ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು.

ಸಂಚಿತ ಠೇವಣಿ ಬಾಂಡ್ ವಿತರಣೆ:
ಬೆಚ್ಚಳ್ಳಿ ಅವರ ಆಲೋಚನೆಯಂತೆ , ಅರ್ಹ ಪ್ರತಿಭಾವಂತ ಮಕ್ಕಳಿಗೆ ಒಂದು ಸಾವಿರ ರೂಪಾಯಿಗಳ ಸಂಚಿತ ಠೇವಣಿಯನ್ನು ಇಟ್ಟು, ಏಳು ವರ್ಷಗಳ ನಂತರ ಅದು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕಲ್ಪಿಸಿ, ವೇದಿಕೆಯಲ್ಲಿ ಬಾಂಡ್ ಗಳನ್ನ ಮುಸ್ತಾಕ್ ಹೆನ್ನಾಬೈಲ್ ವಿತರಿಸಿದರು.

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರದ ರೋಹನ್, ಜಾಂಬೂರು ಶಾಲೆಯ ಲಿಖಿತ್ , ಹೆನ್ನಾಬೈಲು ಶಾಲೆಯ ಆರಾಧ್ಯ , ಬೆಚ್ಚಳ್ಳಿ ಶಾಲೆಯ ಸಾತ್ವಿಕ್ ಹಾಗೂ ಪ್ರೀತಂ , ಇತ್ತೀಚೆಗಷ್ಟೇ ಸಿಡಿಲು ಬಡಿದು ತಂದೆಯನ್ನ ಕಳೆದುಕೊಂಡ ಸಿದ್ದಾಪುರ ಅಂಗನವಾಡಿಯ ಕಂದಮ್ಮ ಸರ್ವದ್ ಶೆಟ್ಟಿ ಈ ಪುಟಾಣಿಗಳು ವೇದಿಕೆಯಲ್ಲಿ ಬಾಂಡುಗಳನ್ನು ಸ್ವೀಕರಿಸಿದರು.

ವಿದ್ಯಾರ್ಥಿಸಾಧಕರಿಗೆ ಸನ್ಮಾನ:
೨೦೨೩-೨೪ನೇ ಶೈಕ್ಷಣಿಕ ಸಾಲಿನ ೧೦ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಮ್ಮಾನ ಕಾರ್ಯಕ್ರಮ ನೆರವೇರಿತು. ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿನ ಯಮನಮ್ಮ ಬಿರಾದಾರ, ಉಡುಪಿ ಜಿಲ್ಲೆಯ ಕಲಾವಿಭಾಗದ ಅತ್ಯಧಿಕ ಅಂಕ ಗಳಿಸಿದಂತಹ ವಿದ್ಯಾರ್ಥಿನಿ, ಮದರ್ ತೆರೇಸಾ ಶಂಕರನಾರಾಯಣದ ಅನನ್ಯಾ, ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿಯ ಕುಮಾರಿ ದೀಪಾ, ಸರಕಾರಿ ಪ್ರೌಢಶಾಲೆ ಸಿದ್ದಾಪುರದ ಜೆ ಎನ್ ಜ್ಞಾನ ಪುತ್ರನ್, (ರಾಜ್ಯಕ್ಕೆ ಆರನೇಯ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿ ) , ಸರಸ್ವತೀ ವಿದ್ಯಾಲಯ ಸಿದ್ದಾಪುರದ ಗೀತಾ ಪೈ , ಸರಕಾರಿ ಪ್ರೌಢಶಾಲೆ ಹೊಸಂಗಡಿಯ ಎನ್ ರಕ್ಷಾ , ಸರಕಾರಿ ಪ್ರೌಢಶಾಲೆ ಶಂಕರನಾರಾಯಣದ ಶಶಾಂಕ್ ಹಾಗೂ ಶಂಕರ್ , ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆ ಇಲ್ಲಿನ ಮನೋಶ್ರೀ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಜೆ ಎನ್ ಜ್ಞಾನ ಪುತ್ರನ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತದನಂತರ ೨೦೨೩- ೨೪ನೇ ಸಾಲಿನಲ್ಲಿ ಶೇಕಡ 100 ಫಲಿತಾಂಶ ಪಡೆದ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ಸನ್ಮಾನ ನಡೆಸಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣದ ಪ್ರಾಂಶುಪಾಲ ಜಗದೀಶ್ ಭಟ್, ಸರಕಾರಿ ಪ್ರೌಢಶಾಲೆ ಸಿದ್ದಾಪುರದ ಮುಖ್ಯೋಪಾಧ್ಯಾಯರು ಚಂದ್ರಕುಲಾಲ್ ,ಸರಕಾರಿ ಪ್ರೌಢಶಾಲೆ ಹೊಸಂಗಡಿಯ ಮುಖ್ಯೋಪಾಧ್ಯಾಯರು ಗುರುಪ್ರಸಾದ್, ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ಪ್ರೌಢಶಾಲೆ ಕಮಲಶಿಲೆಯ ಮುಖ್ಯೋಪಾಧ್ಯಾಯರು ಸುರೇಂದ್ರ ಶೆಟ್ಟಿ , ಸರಕಾರಿ ಪ್ರೌಢಶಾಲೆ ಶಂಕರನಾರಾಯಣದ ಚಿತ್ರಕಲಾ ಶಿಕ್ಷಕ ಉಮೇಶ್ ಪ್ರಭು ಹಾಗೂ ಸರಸ್ವತಿ ವಿದ್ಯಾಲಯ ಸಿದ್ದಾಪುರದ ಮಾಧವಿ ಮಾತಾಜಿ ಇವರುಗಳಿಗೆ ವೇದಿಕೆಯಲ್ಲಿ ಶಾಲು ಹೊದಿಸಿ ಗೌರವ ಸ್ಮರಣಿಕೆ ನೀಡಲಾಯಿತು.

ಸನ್ಮಾನಿತರ ಪರವಾಗಿ ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಭಟ್ ತಮ್ಮ ಶುಭ ಹಾರೈಕೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು.

ಸರಕಾರಿ ಪ್ರೌಢಶಾಲೆ ಸಿದ್ಧಾಪುರದ ವಿದ್ಯಾರ್ಥಿನಿಯರು ರೈತಗೀತೆ ಹಾಡಿದರು. ಟ್ರಸ್ಟ್ ಸಂಚಾಲಕ ರಾಜೇಂದ್ರ ಬೆಚ್ಚಳ್ಳಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.ಪರಿಸರದ ಹಲವಾರು ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಶಿಕ್ಷಕ ಪ್ರತಾಪ್ ಚಂದ್ರ ಕಿಣಿ ವಂದಿಸಿದರು. ಶಿಕ್ಷಕಿ ವಸಂತಿ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!