Monday, July 15, 2024

ಕೋಳ್ಕೆರೆ : ಶ್ರೀ ಕಾಳಿ ಕುಣಿತ ಭಜನ ತಂಡದವರಿಂದ ಪ್ರತಿಭಾ ಪುರಸ್ಕಾರ

ಜನಪ್ರತಿನಿಧಿ (ಬಸ್ರೂರು ) : ಬಸ್ರೂರು ಗ್ರಾ.ಪಂ. ವ್ಯಾಪ್ತಿಯ ಕೋಳ್ಕೆರೆಯ ಶ್ರೀ ಕಾಳಿ ಮತ್ತು ಸಹಪರಿವಾರ ದೈವಸ್ಥಾನದ ವಠಾರದಲ್ಲಿ ಶ್ರೀ ಕಾಳಿ ಕುಣಿತ ಭಜನ ತಂಡದವರಿಂದ, ತಂಡದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭಜನೆ ಸೇವೆ ಮಾಡುತ್ತಿರುವ, ಎಸ್‌ಎಸ್‌ಎಸ್ಎಲ್‌ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಯಿತು.

ಜಿ.ಪಂ. ಮಾಜಿ ಸದಸ್ಯ ದೇವಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ಧರ್ಮದ ಆಚರಣೆಯ ಒಂದು ಭಾಗವಾಗಿರುವ ಭಜನೆಯಲ್ಲಿ ಎಳೆಯರ ಪಾಲ್ಗೊಳ್ಳುವಿಕೆ ಸ್ತುತ್ಯಾರ್ಹ. ಇನ್ನಷ್ಟು ಎಳೆಯರನ್ನು ಇಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೆ ಮಾಡುವುದರ ಜೊತೆಗೆ ಆ ಮಕ್ಕಳ ಜೀವನ ರೂಪಿಸುವಲ್ಲಿ, ಶೈಕ್ಷಣಿಕ ಕ್ಷೇತ್ರಕ್ಕೆ ಸಹಾಯವಾಗುವಲ್ಲಿ ಇಂತಹ ತಂಡಗಳು, ಸಂಘಟನೆಗಳು ಪ್ರೋತ್ಸಾಹಕರಾಗಿ ನಿಲ್ಲಬೇಕು. ಶ್ರೀ ಕಾಳಿ ಕುಣಿತ ಭಜನ ತಂಡದವರ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವರಾಮ ಪೂಜಾರಿ, ಸಂಜೀವ ನಾಯ್ಕ ಚಂದ್ರ ಪೂಜಾರಿ, ಬೇಬಿ ಶ್ರೀಕಾಂತ್ ಸೇರಿ ಇತರರು ಉಪಸ್ಥಿತರಿದ್ದರು.

ಕೆ.ವಿಕಾಸ್ ಹೆಗ್ಡೆ ಪ್ರಸ್ತಾವಿಸಿದರು. ವಿಘ್ನೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ್ ಪೂಜಾರಿ ವಂದಿಸಿದರು.‌

Related Articles

Stay Connected

21,961FansLike
3,912FollowersFollow
21,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!