Saturday, October 12, 2024

ತ್ರಾಸಿ ಶೋ ರೂಮ್ ನಲ್ಲಿ ಬೆಂಕಿ ಆಕಸ್ಮಿಕ- ಕೋಟ್ಯಂತರ ರೂ. ನಷ್ಟ

ಕುಂದಾಪುರ: ತ್ರಾಸಿಯ ಪ್ರತಿಷ್ಠಿತ ಶೋರೂಮ್‌ನಲ್ಲಿ ತಡರಾತ್ರಿ ಬೆಂಕಿ ಆಕಸ್ಮಿಕ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.

ತ್ರಾಸಿ ಸಮೀಪದ ಸುಧಾಕರ್ ಶೆಟ್ಟಿ ಮಾಲಕತ್ವದ ಅಂಬಾ ಟಿವಿ ಹಾಗೂ ಹೋಂ ಅಪ್ಲೈಯನ್ಸಸ್ ಶೋರೂಂ ನಲ್ಲಿ ರಾತ್ರಿ ೯:೩೦ ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಸಂಪೂರ್ಣ ಅಂಗಡಿ ಸುಟ್ಟು ಭಸ್ಮವಾಗಿದೆ. ಸುಮಾರು ಒಂದು ಕೋಟಿ ರೂಪಾಯಿಗೂ ಮಿಕ್ಕಿ ಸ್ವತ್ತುಗಳು ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಅಂಗಡಿಯಲ್ಲಿದ್ದ ೩ ಲಕ್ಷ ರೂಪಾಯಿ ನಗದು ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ

ಬೆಂಕಿಯ ಚೆನ್ನಾಗಿ ಆಕಾಶಕ್ಕೆ ಚಾಚುತಿದಂತೆ ಸ್ಥಳೀಯರಿಂದ ಮಾಹಿತಿ ಪಡೆದ ಬೈಂದೂರು ಕುಂದಾಪುರ ಹಾಗೂ ಉಡುಪಿ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ರಾತ್ರಿ ಸುಮಾರು ೩:೦೦ ತನಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ ಅಗ್ನಿಶಾಮಕ ತಂಡಕ್ಕೆ ಸ್ಥಳೀಯರು ಸಹಕಾರ ನೀಡಿದರು.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!