spot_img
Saturday, December 7, 2024
spot_img

ಲೋಕಸಭಾ ಚುನಾವಣೆ : ನಿಜವಾದ ಭವಿಷ್ಯ | ಎರಡು ವರ್ಷಗಳ ಬಳಿಕ ಮೋದಿ ಪದತ್ಯಾಗ : ದ್ವಾರಕನಾಥ್‌ ಭವಿಷ್ಯ

ಜನಪ್ರತಿನಿಧಿ (ಬೆಂಗಳೂರು) : ಈ ಬಾರಿಯ ದೊಡ್ಡ ಮಟ್ಟದ ಜಿದ್ದಾಜಿದ್ದಿನ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ರಾಜಗುರು ದ್ವಾರಕಾನಾಥ್ ಗುರೂಜಿ ಹೇಳಿದ್ದ ಭವಿಷ್ಯ ಬಹುತೇಕ ನಿಜವಾಗಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಷ್ಟಪಟ್ಟು 240 ಕ್ಷೇತ್ರಗಳನ್ನು  ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದರಲ್ಲದೇ, ಎನ್‌ಡಿಎ ಮಿತ್ರಪಕ್ಷಗಳ ಸಹಕಾರದಿಂದ ಸರಕಾರ ರಚಿಸಲಿದೆ ಎಂದು ಹೇಳಿದ್ದರು. ಸದ್ಯದ ವಾತಾವರಣ ದ್ವಾರಕನಾಥ್‌ ಹೇಳಿದ ಹಾಗೆಯೇ ಆಗಿದೆ.

ಮಾತ್ರವಲ್ಲದೇ, ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೂ, ಹಿಂದಿನ ಎರಡು ಅವಧಿಯಂತೆ ಸ್ವತಂತ್ರವಾಗಿ ಆಡಳಿತ ನಡೆಸುವುದು ಅವರಿಗೆ ಕಷ್ಟವಾಗುತ್ತದೆ’’ ಎಂದು ದ್ವಾರಕಾನಾಥ್ ಭವಿಷ್ಯ ಹೇಳಿದ್ದರು. ಧ್ವಾರಕನಾಥ್‌ ಹೇಳಿದಂತೆ ಸ್ವತಂತ್ರವಾಗಿ ಆಡಳಿತ ನಡೆಸುವುದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಅವಕಾಶ ಮಾಡಿಕೊಟ್ಟಿಲ್ಲ.

ಇನ್ನು, ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂಉತ್ತರ ಭಾರತದಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು, ಆದರೇ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ ಒಳಗೊಂಡು ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದೂ ದ್ವಾರಕಾನಾಥ್ ಅಂದಾಜಿಸಿದ್ದರು. ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿಯ ನಿರೀಕ್ಷೆ ಸುಳ್ಳಾಗಿದೆ.

ಈ ಮೂರು ರಾಜ್ಯಗಳಲ್ಲಿ ಕಳೆದ ಬಾರಿ ಗಳಿಸಿದ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದರೂ ಬಿಜೆಪಿ ನಿರಾಯಾಸವಾಗಿ ಬಹುಮತದ ಗಡಿ ದಾಟುತ್ತಿತ್ತು.

ಅಷ್ಟಲ್ಲದೇ, ಮೋದಿ ಪ್ರಧಾನಿಯಾಗಿ ಅವಧಿ ಪೂರೈಸಲ್ಲ, ಮಧ್ಯಂತರ ಚುನಾವಣೆ ಇಲ್ಲ ‘‘ನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸುವ ಸಾಧ್ಯತೆ ಕಡಿಮೆಯಿದೆ. ಎರಡು ವರ್ಷ ಬಳಿಕ ಅವರು ಪದತ್ಯಾಗ ಮಾಡಬಹುದು ಎಂದೂ ಧ್ವಾರಕನಾಥ್‌ ಭವಿಷ್ಯ ನುಡಿದಿದ್ದಾರೆ.

ಹಾಗಂತ ಅವಧಿಗೆ ಮುನ್ನ ಲೋಕಸಭೆ ವಿಸರ್ಜನೆಯಾಗಿ ಮಧ್ಯಂತರ ಚುನಾವಣೆ ನಡೆಯುವ ಯಾವ ಸಾಧ್ಯತೆಗಳೂ ಕಾಣಿಸುತ್ತಿಲ್ಲ. ಪ್ರಧಾನಿ ಬದಲಾದರೂ ಎನ್‌ಡಿಎ ಸರಕಾರ ಐದು ವರ್ಷ ಪೂರೈಸಲಿದೆ,’’ ಎಂದೂ ಭವಿಷ್ಯ ನುಡಿದಿದ್ದರು.

ಸದ್ಯ, ಮೋದಿ ನೇತೃತ್ವದಲ್ಲೇ ಎನ್‌ಡಿಎ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದೆ. ಮೈತ್ರಿ ಪಕ್ಷಗಳು ಸಚಿವ ಸಂಪುಟದಲ್ಲಿ ದೊಡ್ಡ ಹುದ್ದೆಗಳಿಗೆಯೇ ಕಣ್ಣಿಟ್ಟಿದ್ದು, ಬಿಜೆಪಿ ತನ್ನ ಅಂಗಪಕ್ಷಗಳ ಬೇಡಿಕೆಯನ್ನು ಪೂರೈಸಲಿದೆಯೇ ? ಮೋದಿ ಪ್ರಧಾನಿಯಾಗಿ ಅವಧಿ ಪೂರೈಸಲ್ಲ, ಮಧ್ಯಂತರ ಚುನಾವಣೆ ಇಲ್ಲ, ಎರಡು ವರ್ಷ ಬಳಿಕ ಮೋದಿ ಪ್ರಧಾನಿ ಹುದ್ದೆಯನ್ನು ತೊರೆಯಬಹುದು ಎಂದು ಹೇಳಿದ ಧ್ವಾರಕನಾಥ್‌ ಅವರ ಭವಿಷ್ಯ ನಿಜವಾಗಲಿದೆಯೇ ಎನ್ನುವುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!