spot_img
Wednesday, April 1, 2026
spot_img

ಹಿರಿಯ ಯಕ್ಷಗಾನ ಕಲಾವಿದ ರಾಜ್ಯೊತ್ಸವ ಪ್ರಶಸ್ತಿ ವಿಜೇತ ಮಾಧವ ನಾಯ್ಕ್ ನಿಧನ

ಕುಂದಾಪುರ: ಬಡಗುತಿಟ್ಟಿನ ಬಣ್ಣದ ವೇಷ ಹಾಗೂ ಮುಂಡಾಸು ವೇಷಕ್ಕೆ ಖ್ಯಾತಿ ಹೊಂದಿದ ಪೇತ್ರಿ ಮಾಧವ ನಾಯ್ಕ (84 ವರ್ಷ) ಪೇತ್ರಿಯ ಸ್ವಗೃದಲ್ಲಿ ಜೂನ್ 4ರಂದು ನಿಧನರಾದರು.

ಮಾರಣಕಟ್ಟೆ, ಮಂದಾರ್ತಿ, ಪೆರ್ಡೂರು, ಸಾಲಿಗ್ರಾಮ, ಅಮೃತೇಶ್ವರೀ, ಕೊಲ್ಲೂರು ಹಾಗೂ ಮುಲ್ಕಿ ಮೇಳಗಳಲ್ಲಿ 23 ವರ್ಷಗಳ ಕಾಲ ಮತ್ತು ಡಾ. ಶಿವರಾಮ ಕಾರಂತರ ನೇತೃತ್ವದ ಯಕ್ಷರಂಗದಲ್ಲಿ 30 ವರ್ಷಗಳ ಕಾಲ ವೇಷಧಾರಿಯಾಗಿ ಕಲಾ ಪ್ರತಿಭೆಯನ್ನು ಮೆರೆದಿದ್ದರು.

ಯಕ್ಷರಂಗದ ಪ್ರಮುಖ ವೇಷಧಾರಿಯಾಗಿ ವಿವಿಧ ದೇಶಗಳನ್ನು ಸಂಚರಿಸಿದ್ದರು. ಬಣ್ಣದ ವೇಷಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಮಾಧವ ನಾಯ್ಕರು ರಾವಣ, ಘಟೋತ್ಕಚ, ಹಿಡಿಂಬಾಸುರ, ತಾರಾಕಾಸುರ, ಶೂರ್ಪನಖೆ, ಹಿಡಿಂಬೆ, ಲಂಕಿಣಿ, ವೃತ್ರಜ್ವಾಲೆ ಹೀಗೆ ಗಂಡು ಬಣ್ಣ ಮತ್ತು ಹೆಣ್ಣು ಬಣ್ಣ ಎರಡರಲ್ಲೂ ನೈಪುಣ್ಯತೆ ಹೊಂದಿದ್ದರು.ಇವರಿಗೆ ಕರ್ನಾಟಕ ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗದ ಹೀಗೆ ಹಲವು ಪ್ರಶಸ್ತಿಗಳು ಸಂದಿವೆ.ಕಳೆದ ವಾರ ಮಂದಾರ್ತಿ ಮೇಳದ ಸೇವೆಯಾಟದ ದಿನ 1 ಲಕ್ಷ ಮೊತ್ತದ ಪ್ರತಿಷ್ಠಿತ ಹಾರಾಡಿ ರಾಮಗಾಣಿಗ ಪ್ರಶಸ್ತಿ ಲಭಿಸಿತ್ತು.

ಪತ್ನಿ, ಓರ್ವ ಪುತ್ರಿ, ಐವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!