spot_img
Saturday, December 7, 2024
spot_img

ಯಕ್ಷಗಾನ ಕಲಿತು ಮುಂದಿನ ಪೀಳಿಗೆಗೆ ದಾಟಿಸಿ-ಡಾ.ತಲ್ಲೂರು ಶಿವರಾಮ ಶೆಟ್ಟಿ

ತೆಕ್ಕಟ್ಟೆ: ಕಲೆಯನ್ನು ಗೌರವಿಸಿ, ಪ್ರೀತಿಸಿದರೆ ಕಲೆ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಸಪ್ತ ಬಗೆಯ ಸುಪ್ತ ಪ್ರಕಾರಗಳಿರುವ ಕಲೆ ಯಕ್ಷಗಾನ. ಇಂತಹ ಸಹಸ್ರ ಗುಣವಿರುವ ಯಕ್ಷಗಾನ ಕಲೆಯನ್ನು ಮೀರಿಸುವ ಕಲೆ ಪ್ರಪಂಚದಲ್ಲಿ ಇನ್ನೊಂದಿಲ್ಲ. ಕಲಿಯುವಿಕೆಯಲ್ಲಿ ಆಸಕ್ತಿ ಹೊಂದಿ, ಶೃದ್ಧೆ ಭಕ್ತಿಗಳನ್ನು ಹೊಂದಿ ಕಲಿಯಿರಿ. ಪ್ರಪಂಚದಾದ್ಯಂತ ಕಲೆಯ ಮೂಲಕ ಗೌರವ ಸಿಗುತ್ತದೆ. ವಿದ್ಯೆ ಬದುಕಿಗೆ ಬೇಕು, ಕಲೆ ಜೀವನ ಅರಳುವುದಕ್ಕೆ ಬೇಕು. ಕಲೆಗೆ ಮರಣವಿಲ್ಲ. ಇಂದು ಸಮರ್ಥ ಗುರುಗಳಿಂದ ಯಕ್ಷಗಾನ ಕಲಿತು, ನಾಳೆ ಭವಿಷ್ಯವಾಳಿ, ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ಆಗಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಿಮ್ಮೇಳ ಮುಮ್ಮೇಳ ತರಗತಿಯನ್ನು ಉದ್ಘಾಟಿಸಿ ಮಾತನ್ನಾಡಿದರು.

ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ಶ್ವೇತಯಾನ-೩೧ರ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಯನ್ನು ಜೂನ್ ೧ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನ್ನಾಡಿದರು.
ಜಾತಿ ಬೇದವನ್ನು ಮರೆತು ಯಕ್ಷಗಾನ ಕಲೆ ಮೀರಿ ಮೇಲೇರಿದೆ. ಬದುಕನ್ನು ನಡೆಸುವುದಕ್ಕಾಗಿ ಆಯ್ದುಕೊಂಡ ಯಕ್ಷಗಾನ ನನ್ನನ್ನು ಜನಮಾನಸದಲ್ಲಿ ನಿಲ್ಲಿಸಿದೆ. ಬರೇ ವ್ಯಾವಹಾರಿಕವಲ್ಲದ, ಜನರ ಪ್ರೀತಿಯನ್ನು ಒದಗಿಸಿಕೊಡುವ ಯಕ್ಷಗಾನ ಕಲೆ ನಮ್ಮಲ್ಲಿನ ಚೈತನ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ಯಕ್ಷಗಾನ ಕಲಾವಿದ, ಸಂಘಟಕ ಮಹಮದ್ ಗೌಸ್ ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಉರಾಳ, ಸಂಸ್ಥೆಯ ವಿದ್ಯಾರ್ಥಿ ಸುಮನಾ ನೇರಂಬಳ್ಳಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು. ಯಶಸ್ವಿ ಕಲಾವೃಂದದ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಗಣೇಶ್ ಯು. ಸ್ವಾಗತಿಸಿ, ಕಿಶನ್ ಪೂಜಾರಿ ಪ್ರಾರ್ಥನೆಗೈದು, ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ತರಗತಿಯಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

 

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!