spot_img
Tuesday, March 31, 2026
spot_img

ಲೋಕಸಭಾ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ | 64.2 ಕೋಟಿ ಮತದಾರರಿಂದ ಮತದಾನ : ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

ಜನಪ್ರತಿನಿಧಿ (ನವದೆಹಲಿ) : ಈ ಲೋಕಸಭಾ ಚುನಾವಣೆಯಲ್ಲಿ 64.2 ಕೋಟಿ ಜನರು ಮತದಾನ ಮಾಡುವುದರೊಂದಿಗೆ ಭಾರತ ವಿಶ್ವ ದಾಖಲೆ ಸೃಷ್ಟಿಸಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಭಾರತದ ಚುನಾವಣಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರೆದಿದ್ದ ಚುನಾವಣೋತ್ತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೀವ್‌ ಕುಮಾರ್, 31.2 ಕೋಟಿ ಮಹಿಳೆಯರು ಸೇರಿದಂತೆ 64. 2 ಕೋಟಿ ಮತದಾರರು ಮತದಾನದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಚುನಾವಣಾ ಕಾರ್ಯದಲ್ಲಿ 68,000 ಮೇಲ್ವಿಚಾರಣಾ ತಂಡಗಳು ಮತ್ತು 1.5 ಕೋಟಿ ಚುನಾವಣಾ ಮತ್ತು ಭದ್ರತಾ ಸಿಬ್ಬಂದಿ ಭಾಗಿಯಾಗಿದ್ದರು. 2019 ರಲ್ಲಿ 540 ಮರು ಮತದಾನ ನಡೆದಿದ್ದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 39 ಮರುಮತದಾನಗಳು ನಡೆದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು ದಶಕಗಳಲ್ಲಿಯೇ ಒಟ್ಟಾರೆ ಶೇಕಡಾ 58.58 ರಷ್ಟು ಮತದಾನವಾಗಿದೆ. 2024 ರ ಚುನಾವಣೆಯಲ್ಲಿ ನಗದು, ಉಚಿತ ಕೊಡುಗೆಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ ರೂ. 10,000 ಕೋಟಿ ಮೌಲ್ಯದಷ್ಟು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

 ರಾಜೀವ್‌ ಹೇಳಿದ ಪ್ರಮುಖ ಅಂಶಗಳು:

1.2024 ರ ಲೋಕಸಭೆ ಚುನಾವಣೆಯನ್ನು ನಡೆಸಲು ಸುಮಾರು ನಾಲ್ಕು ಲಕ್ಷ ವಾಹನಗಳು, 135 ವಿಶೇಷ ರೈಲುಗಳು ಮತ್ತು 1,692 ವಾಯು ಸೌಲಭ್ಯಗಳನ್ನು ಬಳಸಲಾಗಿದೆ

  1. 2024ರ ಸಾರ್ವತ್ರಿಕ ಚುನಾವಣೆ ವೇಳೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದಾಖಲಾದ 495 ದೂರುಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಬಗೆಹರಿಸಲಾಗಿದೆ.
  2. ಉನ್ನತ ನಾಯಕರಿಗೆ ಇಸಿ ನೋಟಿಸ್ ಜಾರಿ ಮಾಡಿದೆ. ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪಾರದರ್ಶಕ ಚುನಾವಣಾ ಪ್ರಕ್ರಿಯೆಗಾಗಿ ಉನ್ನತ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
  3. ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. 95-98 ಶೇಕಡಾ ಯೋಜನೆಗಳಲ್ಲಿ ಅರ್ಜಿ ಸಲ್ಲಿಸಿದ 48 ಗಂಟೆಗಳ ಒಳಗೆ EC ಅನುಮತಿ ನೀಡಿತು
  4. ನಕಲಿ ಮತದಾನವನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. 2024 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಿಂಥೆಟಿಕ್, AI ರಚಿತ ವಿಷಯ ಬಳಸಲಾಗಿದೆ.
  5. ಮತಗಳ ಎಣಿಕೆಯ ಪ್ರಕ್ರಿಯೆಯು ಸಂಪೂರ್ಣವಾಗಿ ದೃಢಿಕೃತವಾಗಿರುತ್ತದೆ.
  6. ಬಹು-ಪಕ್ಷ ನಿಯೋಗಗಳು ಪ್ರಸ್ತಾಪಿಸಿರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ
  7. ಚುನಾವಣಾ ನಂತರದ ಪರಿಶೀಲನೆಗೆ ಭಾರತೀಯ ಚುನಾವಣಾ ವ್ಯವಸ್ಥೆ ಅನುವು ಮಾಡಿಕೊಡುತ್ತದೆ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!