Saturday, October 12, 2024

ಅತೀ ಚಿಕ್ಕ ವಯಸ್ಸಿನಲ್ಲಿ ಅತ್ಯದ್ಭುತ ಸಾಧನೆಗೈದವರು ದಿ| ಕಾಳಿಂಗ ನಾವುಡರು-ಗಂಪು ಪೈ ಸಾಲಿಗ್ರಾಮ

ತೆಕ್ಕಟ್ಟೆ: ತೆಂಕು-ಬಡಗು ವಿದ್ಯಾರ್ಥಿಗಳನೇಕರು ಯಕ್ಷರಂಗದಲ್ಲಿ ಇತ್ತೀಚೆಗೆ ಬಹಳ ಮಿಂಚುತ್ತಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ಯಕ್ಷಗಾನದ ಆಸಕ್ತಿಯಿಂದ ಅನೇಕರು ಯಕ್ಷಗಾನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಾಳಿಂಗ ನಾವುಡರು ಕೂಡ ಅತೀ ಚಿಕ್ಕ ವಯಸ್ಸಿನಲ್ಲಿ ಅತ್ಯದ್ಭುತ ಸಾಧನೆಗೈದು ಅತೀ ಬೇಗನೇ ಇಹಲೋಕ ತ್ಯಜಿಸಿದವರು. ಕಾಳಿಂಗ ನಾವುಡರ ಹೆಸರು ಸಾಂಸ್ಕೃತಿಕ ಲೋಕಕ್ಕೆ ಅಜರಾಮರ. ಇಂದು ಕಿರಿಯ ಮಕ್ಕಳೇ ಕಾಳಿಂಗ ನಾವುಡರ ಸಂಸ್ಮರಣೆಯಲ್ಲಿ ಪಾಲ್ಗೊಂಡು ಯಾವ ದೊಡ್ಡ ಕಲಾವಿದರಿಗೂ ಕಡಿಮೆ ಇಲ್ಲದಂತೆ ಪ್ರದರ್ಶನ ನೀಡಿ ಕಾಳಿಂಗ ನಾವುಡರ ಆತ್ಮಕ್ಕೆ ಶಾಂತಿಯನ್ನು ನೀಡಿದ್ದಾರೆಂದು ನನ್ನ ಭಾವನೆ ಎಂದು ಕಾಳಿಂಗ ನಾವುಡರ ಆತ್ಮೀಯ ಒಡನಾಡಿ ಗಂಪು ಪೈ (ಗಣಪತಿ ಪೈ) ಸಾಲಿಗ್ರಾಮ ನಾವುಡರ ಸಂಸ್ಮರಣೆ ಮಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಜೂನ್ ೨ರಂದು, ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಶ್ವೇತಯಾನ -೩೨ ಕಾರ್ಯಕ್ರಮದಡಿಯಲ್ಲಿ ಕಾಳಿಂಗ ನಾವುಡರ ಆತ್ಮೀಯ ಒಡನಾಡಿ ಗಂಪು ಪೈ ಸಾಲಿಗ್ರಾಮ ಪ್ರಾಯೋಜನೆಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ದಿ| ಕಾಳಿಂಗ ನಾವುಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಗಂಪು ಪೈ ಮಾತನ್ನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಕರ್ನಾಟಕ ಬ್ಯಾಂಕ್ ಉದ್ಯೋಗಿ ಶ್ರೀಕಾಂತ್ ರಾವ್ ಮಾತನ್ನಾಡಿ, ತೆಂಕು ತಿಟ್ಟಿನ ಅನೇಕ ಕಲಾವಿದರು ಬಡಗಿನಲ್ಲಿ ಹೆಸರು ಗಳಿಸಿದ್ದರು. ಇಂದು ತೆಂಕಿನ ಕಿರಿಯ ಕಲಾವಿದರನ್ನು ಕರೆಸಿ, ಬಡಗಿನ ಕಿರಿಯ ಕಲಾವಿದರೊಂದಿಗೆ ಸ್ಪರ್ಧಾತ್ಮಕ ಪ್ರದರ್ಶನ ನೀಡಿ ಕಾರ್ಯಕ್ರಮವನ್ನು ಗೆಲ್ಲಿಸಿದರು. ಇಂದು ಕಾಳಿಂಗ ನಾವುಡರ ಆತ್ಮಕ್ಕೆ ಅತೀವ ಸಂತೋಷ ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ. ಗಣೇಶ್ ಯು., ಪ್ರಾಚಾರ್ಯ ದೇವದಾಸ ರಾವ್ ಕೂಡ್ಲಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುದರ್ಶನ ಉರಾಳ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಕೀರ್ತನ್ ಮಿತ್ಯಂತ ಹಾಲಾಡಿ, ಯಶಸೀ ಕಲಾವೃಂದದ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತೆಂಕು ಬಡಗು ಕಲಾವಿದರಿಂದ ಯಕ್ಷ ಗಾನ ವೈಭವ ರಂಗದಲ್ಲಿ ಪ್ರಸ್ತುತಿಗೊಂಡಿತು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!