spot_img
Saturday, December 7, 2024
spot_img

ಕೃಷ್ಣ ಜನ್ಮಭೂಮಿ – ಶಾಹಿ ಈದ್ಗಾ ಪ್ರಕರಣ : ತೀರ್ಪು ಕಾಯ್ದಿರಿಸಿ ಅಲಹಾಬಾದ್‌ ಹೈಕೋರ್ಟ್‌ ಆದೇಶ

ಜನಪ್ರತಿನಿಧಿ (ಪ್ರಯಾಗ್‌ ರಾಜ್‌ ) : ಮಥುರಾದಲ್ಲಿ ಇರುವ ಶ್ರೀ ಕೃಷ್ಣ ಭೂಮಿ ಹಾಗೂ ಶಾಹಿ ಈದ್ಗಾ ಸ್ಥಳ ನಿರ್ವಹಣಾ ವಿವಾದ ಬಗ್ಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಲಹಾಬಾದ್‌ ಹೈಕೋರ್ಟ್‌, ತನ್ನ ತೀರ್ಪನ್ನು ಇಂದು (ಶುಕ್ರವಾರ) ಕಾಯ್ದಿರಿಸಿದೆ.

ಶ್ರೀ ಕೃಷ್ಣ ಮಂದಿರಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿ ತೆರವು ಕೋರಿ ಹಲವು ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಮೊಘಲ್ ದೊರೆ ಔರಂಗಜೇಬ್‌ ನ ಅವಧಿಯಲ್ಲಿ ದೇವಾಲಯ ನೆಲಸಮಗೊಳಿಸಿ, ಅದೇ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿತ್ತು ಎಂದು ಹಿಂದೂ ಪರ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಪೂಜಾ ಸ್ಥಳ ಬಗ್ಗೆ 1991 ರ ವಿಶೇಷ ಅವಕಾಶ ಕಾಯ್ದೆ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳು ಅನರ್ಹ. ಈ ಕಾಯ್ದೆಯಡಿಯಲ್ಲಿ ಯಾವುದೇ ಪೂಜಾ ಸ್ಥಳದ ಪರಿವರ್ತನೆಯನ್ನು ನಿಷೇಧಿಸಿದೆ. ಜತೆಗೆ 1947 ರ. ಅ 15ಕ್ಕೆ ಸಂಬಂಧಿಸಿದಂತೆ ಅಸ್ಥೀತ್ವದಲ್ಲಿರುವ ಅಂಥ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಕಾಪಾಡಬೇಕು ಎಂದು ಮುಸ್ಲೀಂ ಪರ ವಕೀಲರು  ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.

ಪ್ರಕರಣದ ವಾದ ಹಾಗೂ ಪ್ರತಿವಾದವನ್ನು ಆಲಿಸಿದ ನ್ಯಾ. ಮಯಾಂಕ್‌ ಕುಮಾರ್‌ ಜೈನ್‌ ತೀರ್ಪನ್ನು ಕಾಯ್ದಿರಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!