spot_img
Tuesday, March 31, 2026
spot_img

ಕರ್ನಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆಯ ವ್ಯವಸ್ಥಾಪಕ ಭಾಸ್ಕರ ಹೆಗ್ಡೆ ಸಿ. ಹೆಚ್ ಅವರಿಗೆ ಸನ್ಮಾನ

ಸಾಲಿಗ್ರಾಮ: ಮೇ 31ರಂದು ನಿವೃತ್ತಿಯಾದ ಕರ್ನಾಟಕ ಬ್ಯಾಂಕ್ ಸಾಲಿಗ್ರಾಮ ಶಾಖೆಯ ವ್ಯವಸ್ಥಾಪಕ ಭಾಸ್ಕರ ಹೆಗ್ಡೆ. ಸಿ. ಹೆಚ್ ಹಾಗೂ ದಂಪತಿಗಳನ್ನು ಸಮಾನ ಮನಸ್ಕರ ವತಿಯಿಂದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಸಂಜೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗ ಕಾರ್ಕಡದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಸಿ. ಚಂದ್ರಶೇಖರ ಕಾರಂತ, ಕೆ. ನರಸಿಂಹ ಐತಾಳ, ಪ್ರಸ್ತುತ ವ್ಯವಸ್ಥಾಪಕರಾದ ಅವಿನಾಶ್ ಹಂದೆ, ಸಿಬ್ಬಂದಿ ಪಿ. ಸೀತಾರಾಮ ಐತಾಳ್, ಹಾಗೂ ಸುಧಾಕರ ನಾವುಡ ಅವರು ಭಾಸ್ಕರ ಹೆಗ್ಡೆ . ಸಿ. ಹೆಚ್ ದಂಪತಿಗಳಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ ಹಾಗೂ ಸ್ಮರಿಣಿಕೆ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.

ಭಾಸ್ಕರ ಹೆಗ್ಡೆ ಅವರು ತುಂಬು ಹೃದಯದಿಂದ ಸನ್ಮಾನಕ್ಕೆ ಕೃತಜ್ಞತೆ ತಿಳಿಸಿದರು. ಚಂದ್ರಶೇಖರ ಕಾರಂತರು ಹೆಗ್ಡೆಯವರ 34 ವರ್ಷದ ಬ್ಯಾಂಕಿನ ಸುದೀರ್ಘ ಸೇವೆಯನ್ನು ಶ್ಲಾಘಿಸಿ, ಅವರ ಕರ್ತವ್ಯ ಪ್ರಜ್ಞೆಯನ್ನು, ಸರಳ ವ್ಯಕ್ತಿತ್ವವನ್ನು ವಿವರಿಸಿದರು.

ಗಾಯಿತ್ರಿ ಪ್ರಾರ್ಥನೆ ಮಾಡಿದರು. ಕೆ. ತಾರಾನಾಥ ಹೊಳ್ಳ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು. ಅವಿನಾಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಖಾ ಸಿಬ್ಬಂದಿಗಳು,ಸ್ಥಳೀಯರು ಉಪಸ್ಥಿತರಿದ್ದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!