spot_img
Saturday, December 7, 2024
spot_img

ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಐದು Rank

Varenya Nayak I Rank BA
Sandramol Shaji 2 Rank BCA
Smitha 4th Rank BCA
Kavana Navada 7th Rank BCA
Chaya K 10th Rank BCA

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2023ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಐದು Rankಗಳು ದೊರಕಿವೆ.

ಬಿ.ಎ. ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನಾಗರಾಜ್ ನಾಯಕ್ ಮತ್ತು ಜಯಂತಿ ನಾಯಕ್ ಅವರ ಪುತ್ರಿ ವರೇಣ್ಯ ನಾಯಕ್ ಅವರಿಗೆ ಪ್ರಥಮ Rank ದೊರೆತಿದೆ. ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಶಾಜಿ ಜಾರ್ಜ್ ಮತ್ತು ಲಿಟ್ಟಿ ಮೋಲ್ ಅವರ ಪುತ್ರಿ ಸ್ಯಾಂಡ್ರಮೋಲ್ ಶಾಜಿ ಅವರಿಗೆ ದ್ವಿತೀಯ Rank, ಕುಂದಾಫುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕೃಷ್ಣ ಪೂಜಾರಿ ಮತ್ತು ಬೇಬಿ ಪೂಜಾರಿ ಅವರ ಪುತ್ರಿ ಸ್ಮಿತಾ ಅವರಿಗೆ ನಾಲ್ಕನೇ Rank, ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ವಾಸುದೇವ ನಾವಡ ಮತ್ತು ಕಮಲಾಕ್ಷಿ ನಾವಡ ಅವರ ಪುತ್ರಿ ಕವನ ನಾವಡ ಅವರಿಗೆ ಏಳನೇ Rank, ಕುಂದಾಪುರ ತಾಲೂಕಿನ ಮಣೂರು ಗ್ರಾಮದ ಕೃಷ್ಣ ಎನ್. ಮತ್ತು ಸುಜಾತಾ ಕೆ. ಅವರ ಪುತ್ರಿ ಛಾಯಾ ಕೆ.ಅವರಿಗೆ ಹತ್ತನೇ Rank ದೊರೆತಿದೆ.

ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!