spot_img
Thursday, December 5, 2024
spot_img

ಕೋಟೇಶ್ವರ ಸರ್ಕಾರಿ ಕಾಲೇಜಿನಲ್ಲಿ ರೋವರ್-ರೇಂಜರ್ ಬೇಸಿಗೆ ಶಿಬಿರ

ಕುಂದಾಪುರ: ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿ ಮೇ ೨೫ ಮತ್ತು ೨೬ರಂದು ರೋವರ್‍ಸ್-ರೇಂಜರ್‍ಸ್ ಘಟಕದ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆನಂದ ಅಡಿಗ ಬಿ. ಆರ್ಡಿ ಅವರು ಮಾತನಾಡಿ ಇಂತಹ ಶಿಬಿರಗಳು ಯುವ ಮನಸು ಸದೃಢಗೊಳಿಸುವುದಲ್ಲದೆ ಭವಿಷ್ಯದಲ್ಲಿ ಎದುರಾಗುವ ಎಲ್ಲ ತೊಂದರೆಗಳನ್ನು ದಿಟ್ಟವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ಶಿಬಿರದ ಪ್ರಯೋಜನವನ್ನು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ರಾಮರಾಯ ಆಚಾರ್ಯರವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ರೇಂಜರ್ ಶ್ರೀದೇವಿ, ಹಿರಿಯ ರೋವರ್ ವಿಜಯ್, ಗವರ್ನರ್ ಪ್ರಶಸ್ತಿ ಪುರಸ್ಕೃತ ಪರಮೇಶ್ವರ ಸಹಕರಿಸಿದರು. ಐಕ್ಯೂ‌ಎಸಿ ಸಂಚಾಲಕರಾದ ನಾಗರಾಜ ಯು, ರೋವರ್ ಸ್ಕೌಟ್ ಲೀಡರ್ ಕಾರ್ತಿಕ್ ಪೈ, ರೇಂಜರ್ ಲೀಡರ್ ಡಾ. ಮುನಿರತ್ನಮ್ಮ ಎಲ್.ಎಂ., ವಿದ್ಯಾರ್ಥಿ ನಾಯಕರಾದ ರೋವರ್ ಪ್ರಜ್ವಲ್, ರೇಂಜರ್ ಮೇಘನಾ ಉಪಸ್ಥಿತರಿದ್ದರು. ಸಹನಾ ಕಾರ್ಯಕ್ರಮವನ್ನು ನಿರೂಪಿಸಿ, ರೇಷ್ಮಾರವರು ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!