spot_img
Wednesday, January 22, 2025
spot_img

ಮಳೆಗಾಲಕ್ಕೆ ಶುಭನಾಂದಿ: ರೋಹಿಣಿ ಮಳೆ ಆರಂಭ

ಕುಂದಾಪುರ: ಕರಾವಳಿ ಭಾಗದಲ್ಲಿ ಮಳೆ ನಕ್ಷತ್ರವನ್ನು ನೋಡುವ ಕ್ರಮವಿದೆ. 27 ನಕ್ಷತ್ರಗಳನ್ನೂ ಕೂಡಾ ಮಳೆಗಾಲದ ಅವಧಿಯಲ್ಲಿ ಮಳೆ ನಕ್ಷತ್ರವಾಗಿ ಪರಿಗಣಿಸುವ ಪರಿಪಾಠವಿದೆ. ಕುಂದಾಪುರ ಭಾಗದಲ್ಲಿ ಅದು ಹೆಚ್ಚು ಪ್ರಸ್ತುತದಲ್ಲಿದೆ. ಆ ಪ್ರಕಾರವಾಗಿ ರೋಹಿಣಿ ಮಳೆ ಪ್ರಾರಂಭವನ್ನು ಮಳೆಗಾಲದ ಆರಂಭವೆಂದೆ ಭಾವಿಸಲಾಗುತ್ತದೆ. ಅಧಿಕೃತವಾಗಿ ಜೂನ್‌ನಿಂದ ಮಳೆಗಾಲ ಆರಂಭವಾಗುವುದಾದರೂ ಕೂಡಾ ಪ್ರಾದೇಶಿಕವಾಗಿ ರೋಹಿಣಿ ಮಳೆ ಆರಂಭವನ್ನೇ ಮಳೆಗಾಲದ ಆರಂಭ ಎನ್ನಲಾಗುತ್ತದೆ. ಕುಂದಾಪ್ರ ಭಾಗದಲ್ಲಿ ಅದಕ್ಕೆ ಪೂರಕವಾಗಿ ಒಂದು ಗಾದೆ ಮಾತಿದೆ. ರೋಹಿಣಿ ಮಳೆ ದೋಣಿ ಹಾಕುತ್ತೆ ಅಂತ.

ಮಹಾ (ಳೆ) ನಕ್ಷತ್ರದಲ್ಲಿ ಒಂದಾದ ರೋಹಿಣಿ ನಕ್ಷತ್ರ ಮೇ 24ರಿಂದ ಆರಂಭ. ಈ ವರ್ಷ ಮುಂಗಾರು ಪೂರ್ವ ಮಳೆ ಈಗಾಗಲೆ ಸುರಿಯುತ್ತಿದೆ. ರೋಹಿಣಿ ಮಳೆಯು ಕೂಡಾ ಶುಕ್ರವಾರ ಬಿರುಸಾಗಿಯೇ ಆರಂಭವಾಗಿದೆ ಎಂದೇ ನಂಬಲಾಗುತ್ತದೆ. ನಂಬಿಕೆಗಳಿಗೆ ವಿಶೇಷವಾದ ಮಹತ್ವಿಕೆ ಇದೆ. ಅದೇ ರೀತಿ ಜನತೆ ಮಳೆಗಳಿಗೂ ಒಂದೊಂದು ಹೆಸರು ಪೂರಕ ಉದಾಹರಣೆ ಕಥೆಗಳನ್ನು ಇರಿಸಿದ್ದಾರೆ. ಜನಜೀವನದ ಜೊತೆ ಈ ನಂಬಿಕೆ, ಆರಾಧನೆ, ಆಚಾರ ವಿಚಾರಗಳು ಕೂಡಾ ಮುನ್ನಡೆದುಕೊಂಡು ಹೋಗುತ್ತದೆ. ರೈತಾಪಿಗಳ ಕೃಷಿ ಸಂಸ್ಕೃತಿಯೇ ಅದು.

ವೃಷಭ ಸಂಕ್ರಮಣದಿಂದ ಮಿಥುನ ಸಂಕ್ರಮಣ (ಮೇ14ರಿಂದ ಜೂನ್ 13) ಬೇಸಿಗೆ ತಿಂಗಳು. ಮುಂಗಾರು ಹಂಗಾಮಿಯ ಕೃಷಿ ಚಟುವಟಿಕೆಗಳು, ಪೂರ್ವಸಿದ್ಧತೆಗಳು ಆರಂಭವಾಗುವುದು ಈ ತಿಂಗಳಿನಲ್ಲಿಯೆ. ಹಿಂದೆ ಸಾಂಪ್ರಾದಾಯಿಕ ಶೈಲಿಯ ನಾಟಿ ವಿಧಾನ ಮಾಡುತ್ತಿದ್ದಾಗ ಬೇಸಿಗೆ ತಿಂಗಳಲ್ಲಿ ಬಿತ್ತನೆ ಬೀಜ ಹಾಕಲಾಗುತ್ತಿತ್ತು. ಜೂನ್ ೧೫ರ ಬಳಿಕ ಮಳೆ ಬಿರುಸಾಗುವುದರಿಂದ ಅಷ್ಟರೊಳಗೆ ಭತ್ತದ ಸಸಿ ನಾಟಿಗೆ ಸಿದ್ಧವಾಗಬೇಕಿತ್ತು. ಆದರೆ ಈಗ ಹಾಗಿಲ್ಲ. ಯಾಂತ್ರೀಕೃತ ಬೇಸಾಯ ವಿಧಾನ ಬಂದಿರುವುದರಿಂದ ಸಸಿಮಡಿಯನ್ನು ಅಂಗಳದಲ್ಲಿ ಸಿದ್ಧಗೊಳಿಸಿಕೊಡುವಷ್ಟು ಸಂಕುಚಿತಗೊಂಡಿದೆ.

ಆದರೂ ಕೂಡಾ ಈ ರೋಹಿಣಿ ಮಳೆಯ ಆರಂಭ ಮಾತ್ರ ಜನಮಾನಸದಲ್ಲಿ ಇಂದಿಗೂ ಕೂಡಾ ಉಳಿದುಕೊಂಡಿದೆ. ರೋಹಿಣಿ ಮಳೆ ಉತ್ತಮ ಆರಂಭ ಕಂಡಿದೆ. ಈ ವರ್ಷದ ಎಲ್ಲಾ ಮಳೆ ನಕ್ಷತ್ರಗಳು ಕೂಡಾ ಉತ್ತಮವಾಗಿ ಸುರಿಯಲಿ ಎಂದು ಹಾರೈಸೋಣ.

27ನಕ್ಷತ್ರಗಳು:
೧.ಅಶ್ವಿನಿ, ೨.ಭರಣಿ, ೩.ಕೃತಿಕಾ, ೪.ರೋಹಿಣಿ, ೫.ಮೃಗಶಿರ, ೬.ಆರ್ದ್ರಾ, ೭ ಪುನರ್ವಸು, ೮.ಪುಷ್ಯ, ೯.ಆಶ್ಲೇಷ, ೧೦.ಮಘೆ, ೧೧.ಹುಬ್ಬ (ಪೂರ್ವ ಫಲ್ಗುಣಿ), ೧೨.ಉತ್ತರಾ (ಉತ್ತರ ಫಲ್ಗುಣಿ), ೧೩.ಹಸ್ತ, ೧೪.ಚಿತ್ತಾ , ೧೫.ಸ್ವಾತಿ, ೧೬.ವಿಶಾಖ, ೧೭.ಅನುರಾಧ, ೧೮.ಜ್ಯೇಷ್ಠ, ೧೯.ಮೂಲ, ೨೦.ಪೂರ್ವಾಷಾಡಾ, ೨೧.ಉತ್ತರಾಷಾಡಾ, ೨೨.ಶ್ರವಣ, ೨೩.ಧನಿಷ್ಠ, ೨೪.ಶತಭಿಷ, ೨೫.ಪೂರ್ವಭಾದ್ರ, ೨೬.ಉತ್ತರಭಾದ್ರ, ೨೭.ರೇವತಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!