spot_img
Wednesday, January 22, 2025
spot_img

ಮಾದಕವಸ್ತುಗಳ ಹೆಬ್ಬಾಗಿಲು ಗುಜರಾತನ್ನು ರಾಜ್ಯ ಬಿಜೆಪಿ “ಉಡ್ತಾ ಗುಜರಾತ್” ಎನ್ನುವುದಿಲ್ಲವೇಕೆ? : ಕಾಂಗ್ರೆಸ್‌ ಖಡಕ್‌ ಪ್ರಶ್ನೆ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕದ ಬಗ್ಗೆ ಬಿಜೆಪಿಗಿರುವ ಅಸಹನೆ ಮತ್ತೊಮ್ಮೆ ಬಹಿರಂಗವಾಗಿದೆ, ಕರ್ನಾಟಕಕ್ಕೆ ಹಾಗೂ ಬೆಂಗಳೂರಿಗೆ ಕೆಟ್ಟ ಹೆಸರು ತರಲು ತುದಿಗಾಲಲ್ಲಿ ನಿಂತಿರುವ ಬಿಜೆಪಿ ಈ ಹಿಂದೆ ಬೆಂಗಳೂರನ್ನು ಸಿನ್ ಸಿಟಿ ಎಂದಿತ್ತು, ಈಗ ಉಡ್ತಾ ಬೆಂಗಳೂರು ಎನ್ನುವ ಮೂಲಕ ಕರ್ನಾಟಕದ ಅನ್ನ, ನೀರಿಗೆ, ಕನ್ನಡಿಗರ ಮತಕ್ಕೆ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

ಗುಜರಾತ್‌ನಲ್ಲಿ ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿರುವ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಹರಿಹಾಯ್ದಿದೆ.

ಭಾರತದಲ್ಲಿನ ಡ್ರಗ್ಸ್ ದಂಧೆಗೆ ಗುಜರಾತ್ ಹೆಬ್ಬಾಗಿಲಾಗಿದೆ,

◆ ಜಗತ್ತಿನಲ್ಲೇ ಅತಿ ದೊಡ್ಡ ಡ್ರಗ್ಸ್ ಸೀಜ್ ಆಗಿದ್ದು ಗುಜರಾತಿನ ಅದಾನಿ ಬಂದರಿನಲ್ಲಿ, ಸುಮಾರು ₹21,000 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಆಗಿತ್ತು.

◆ ಮತ್ತೊಮ್ಮೆ ಇದೇ ಬಂದರಿನಲ್ಲಿ ₹9000 ಕೋಟಿ ಡ್ರಗ್ಸ್ ಸೀಜ್ ಆಗಿತ್ತು.

◆ ದೇಶದಲ್ಲಿ ವಶಪಡಿಸಿಕೊಂಡ ಒಟ್ಟು ಮಾದಕವಸ್ತುಗಳ ಅಂಕಿ ಅಂಶದಲ್ಲಿ ಗುಜರಾತಿನದ್ದೇ ಸಿಂಹಪಾಲು, 30%ನಷ್ಟು ಮಾದಕವಸ್ತುಗಳು ಗುಜರಾತಿನಿಂದಲೇ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ.

ಬೆಂಗಳೂರು ಸೇರಿದಂತೆ ಇಡೀ ದೇಶಕ್ಕೆ ಮಾದಕವಸ್ತುಗಳು ಗುಜರಾತ್ ಹೆಬ್ಬಾಗಿಲ ಮೂಲಕವೇ ಬರುತ್ತಿದ್ದರೂ ರಾಜ್ಯ ಬಿಜೆಪಿ “ಉಡ್ತಾ ಗುಜರಾತ್” ಎನ್ನುವುದಿಲ್ಲವೇಕೆ? ಅದಾನಿ ಬಂದರಿನಲ್ಲಿ ಇಡೀ ಜಗತ್ತೇ ಬೆಚ್ಚಿಬೀಳುವಷ್ಟು ಡ್ರಗ್ಸ್ ಸಿಕ್ಕಿರುವುದರ ಬಗ್ಗೆ ಬಿಜೆಪಿ ತುಟಿ ಬಿಚ್ಚುವುದಿಲ್ಲವೇಕೆ? ಎಂದು ಕಾಂಗ್ರೆಸ್‌ ಕಟುವಾಗಿ ಪ್ರಶ್ನೆ ಮಾಡಿದೆ.

ಈ ಹಿಂದೆ ಬಿಜೆಪಿ ಆಡಳಿತದಲ್ಲಿ ಬಿಜೆಪಿಯ ಸ್ಟಾರ್ ಪ್ರಚಾರಕಿ, ಸಿನೆಮಾ ನಟಿ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು, ರಾಜ್ಯಾದ್ಯಂತ ಬಿಜೆಪಿಯ ಕಾರ್ಯಕರ್ತರು ಗಾಂಜಾ ಪೂರೈಕೆ ಮಾಡುವಾಗ ಸಿಕ್ಕಿಬಿದ್ದಿದ್ದರು, ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಯೇ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದನ್ನು ದೇಶ ನೋಡಿದೆ ಎಂದು ಕೂಡ ಹೇಳಿ ಬಿಜೆಪಿಯನ್ನು ಟೀಕಿಸಿದೆ.

ಇನ್ನು, ದೇಶದ ಡ್ರಗ್ಸ್ ಜಾಲದಲ್ಲಿ ಹಲವು ಬಿಜೆಪಿ ನಾಯಕರ ಕೈವಾಡವಿರುವುದನ್ನು ದೇಶ ನೋಡಿದೆ, ಅದೇ ಬಿಜೆಪಿ ಈಗ ಉಡ್ತಾ ಬೆಂಗಳೂರು ಎನ್ನುತ್ತಾ ದೇಶದ ಯುವಕರ ಭವಿಷ್ಯವನ್ನು, ರಾಜ್ಯದ ಹೆಸರನ್ನು ಕೆಡಿಸಿವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಖೇದಕರ ಎಂದು ಕಾಂಗ್ರೆಸ್‌ ಹೇಳಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!