spot_img
Tuesday, February 18, 2025
spot_img

ಸರಕಾರಿ ಪ್ರೌಢಶಾಲೆ ನೆಂಪು ವಂಡ್ಸೆ: 2000-01ನೇ ಸಾಲಿನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ

ವಂಡ್ಸೆ: ಸರಕಾರಿ ಪ್ರೌಢಶಾಲೆ ನೆಂಪು ವಂಡ್ಸೆ ಇದರ 2000-01ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ಮೇ ೧೯ರಂದು ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯ ದಿ| ಸಂಜೀವಿ ಭಾಸ್ಕರ ಶೆಟ್ಟಿ ಆಡಿಟೋರಿಯಂನಲ್ಲಿ ಜರಗಿತು.

ಪ್ರೇಮಾನಂದ ಆಚಾರ್ಯ ವಂಡ್ಸೆ ಪ್ರಾರ್ಥನೆ ಮಾಡಿದರು. 23 ವರ್ಷಗಳ ಹಿಂದಿನ ಸವಿ ಸವಿ ನೆನಪುಗಳ ಮೆಲುಕು, ವಾಸ್ತವದ ಸ್ಥಿತಿಗತಿ, ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಯ ಕುರಿತು ಅಭಿಪ್ರಾಯಗಳು ವ್ಯಕ್ತವಾದವು. ವಿವಿಧ ಆಟಗಳು, ಸ್ಪರ್ಧೆಗಳು, ಸಂಗೀತ, ನೃತ್ಯ ಕಾರ್ಯಕ್ರಮ ನೆರವೇರಿತು.

ಹರೀಶ್ ಭಟ್ ಗುಡ್ರಿ ಹಾಗೂ ಉದಯ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು. ಕಳೆದ ವರ್ಷ (2023) ಇದೇ ತಂಡ 22 ವರ್ಷಗಳ ನಂತರ ಮಕರ ಸಂಕ್ರಾಂತಿಯ ಹೊತ್ತಿನಲ್ಲಿ ಭೇಟಿಯಾಗಿ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ನೆರವೇರಿಸಿತ್ತು.ಇದರ ಸವಿನೆನಪಿನ ಕಾರ್ಯಕ್ರಮದ ಮುಂದುವರಿದ ಭಾಗವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!