spot_img
Friday, January 17, 2025
spot_img

ಚುನಾವಣಾ ಪ್ರಚಾರ : ರಾಜಕೀಯ ಪಕ್ಷಗಳನ್ನು ಕೊನೆಗೂ ತರಾಟೆಗೆ ತೆಗೆದುಕೊಂಡ ಕೇಂದ್ರ ಚುನಾವಣಾ ಆಯೋಗ

ಜನಪ್ರತಿನಿಧಿ (ನವ ದೆಹಲಿ)  : ಲೋಕಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಜಾತಿ, ಸಮುದಾಯ, ಭಾಷೆ ಹಾಗೂ ಧರ್ಮದ ವಿಷಯಗಳ ಆಧಾರದ ಮೇಲೆ ವೈಷಮ್ಯ ಕಾರುವ ಭಾಷಣಗಳನ್ನು ಮಾಡಿದ್ದಕ್ಕಾಗಿ ಹಾಗೂ ಇದೇ ಆಧಾರದಲ್ಲಿ ಚುನಾವಣಾ ಪ್ರಚಾರ ನಡೆಸಿಕ್ಕಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳನ್ನು ಕೇಂದ್ರ ಚುನಾವಣ ಆಯೋಗ ತಡವಾಗಿಯಾದರೂ ಇಂದು(ಬುಧವಾರ) ತೀವ್ರ ತರಾಟೆಗೆ ತೆಗೆದುಕೊಂಡಿದೆ.

“ಭಾರತದ ಸಾಮಾಜಿಕ-ಸಾಂಸ್ಕೃತಿಕ ಪರಿಸರವು ನಿರಂತರ ಸಂರಕ್ಷಣೆಯಾಗಿರುವುದರಿಂದ ಚುನಾವಣೆಗಳಿಗೆ ಬಲಿಯಾಗಲು ಸಾಧ್ಯವಿಲ್ಲ” ಎಂದು ಕೇಂದ್ರ ಚುನಾವಣಾ ಆಯೋಗ  ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಮತದಾರರ ಗುಣಮಟ್ಟದ ಚುನಾವಣಾ ಅನುಭವದ ಪರಂಪರೆಯನ್ನು ದುರ್ಬಲಗೊಳಿಸಲು ಯಾವ ರಾಜಕೀಯ ಪಕ್ಷಗಳಿಗೂ ಅವಕಾಶ ಕೊಡುವುದಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರದ ಬಗ್ಗೆ ಆಕ್ರೋಶ ಹೊರ ಹಾಕಿದ್ದಲ್ಲದೇ, ಚುನಾವಣಾ ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಧಾರ್ಮಿಕ ಹಾಗೂ ಕೋಮುವಾದದ ಭಾಷಣಗಳಿಂದ ದೂರವಿರಬೇಕು’ ಎಂದು ಆಯೋಗ ಖಡಕ್‌ ಆಗಿ ಸೂಚನೆ ನೀಡಿದೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!