Sunday, September 8, 2024

ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಪ್ರೇಮವಿದೆ, ಮೋದಿ ಹಿಂದೂಸ್ತಾನದ ಜವಾನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ : ಮೋದಿ ವಿರುದ್ಧ ರಾಗಾ ತೀವ್ರ ವಾಗ್ದಾಳಿ

ಜನಪ್ರತಿನಿಧಿ (ಚಂಡೀಗಢ) :  ಅಗ್ನಿವೀರ್ ಯೋಜನೆ ಇದು ಮೋದಿಯ ಯೋಜನೆ, ಸೇನೆಯ ಯೋಜನೆ ಅಲ್ಲ. ಸೇನೆಗೆ ಇದು ಬೇಕಾಗಿಲ್ಲ. ಈ ಯೋಜನೆಯನ್ನು ಪಿಎಂಒ (ಪ್ರಧಾನಿ ಕಚೇರಿ) ರೂಪಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಹರಿಯಾಣದ ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಭಾರತದ ಗಡಿಗಳು ಹರಿಯಾಣ ಹಾಗೂ ದೇಶದ ಯುವಕರಿಂದ ಸುರಕ್ಷಿತವಾಗಿದೆ. ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಪ್ರೇಮವಿದೆ ಎಂದ ಅವರು, ಮೋದಿ ಹಿಂದೂಸ್ತಾನದ ಜವಾನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ ಎಂದು ಮೋದಿ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.

ಮೋದಿ ಸರ್ಕಾರ 22 ಉನ್ನತ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತದೆ. ಆದರೆ “ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ ಯಾಕೆಂದರೆ ಅದು ಅವರನ್ನು ಹಾಳುಮಾಡುತ್ತದೆ” ಎಂದು ಬಹಿರಂಗವಾಗಿ ಹೇಳುತ್ತಾರೆ. ರೈತರನ್ನು ರಕ್ಷಿಸಲು ಹಾಗೂ ಅವರಿಗೆ ಸೂಕ್ತ ಪರಿಹಾರವನ್ನು ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿದೆ. ಅವರು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಿಳಿಯಬೇಕಾಯಿತು” ಎಂದು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!