spot_img
Saturday, December 7, 2024
spot_img

ವಿಧಾನಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಮಂದಿ, ಪದವೀಧರರ ಕ್ಷೇತ್ರದಲ್ಲಿ 10 ಮಂದಿ ಪೈಪೋಟಿ !

ಜನಪ್ರತಿನಿಧಿ (ಬೆಂಗಳೂರು) : ವಿಧಾನಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ರಮೇಶ್‌ ಶೆಟ್ಟಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಸದ್ಯ ವಿಧಾನಪರಿಷತ್‌ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಮಂದಿ ಕಣದಲ್ಲಿದ್ದಾರೆ.

ಎಸ್‌.ಎಲ್. ಭೋಜೇಗೌಡ (ಜೆಡಿಎಸ್), ಕೆ.ಕೆ. ಮಂಜುನಾಥ್‌ ಕುಮಾರ್ (ಕಾಂಗ್ರೆಸ್), ಭಾಸ್ಕ‌ರ್ ಶೆಟ್ಟಿ, ನರೇಶ್ ಹೆಗಡೆ, ಎಸ್.ಆರ್. ಹರೀಶ್ ಆಚಾರ್ಯ, ಅರುಣ್ ಎಚ್‌.ಡಿ., ನಂಜೇಶ್ ಬಿ.ಆರ್. ಹಾಗೂ ಮಂಜುನಾಥ್ ಕೆ.ಕೆ. (ಪಕ್ಷೇತರರು) ಸ್ಪರ್ಧೆಯಿಂದ ಕಣ ಪೈಪೋಟಿ ಸೃಷ್ಟಿಸಿದೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ರಂಗಸ್ವಾಮಿ ಎಂ. ವಾಪಸ್ ನಾಮಪತ್ರ ವಾಪಸ್ ತೆಗೆದು ಕೊಂಡಿದ್ದು, 10 ಮಂದಿ ಕಣದಲ್ಲಿದ್ದಾರೆ. ಆಯನೂರು ಮಂಜುನಾಥ್ (ಕಾಂಗ್ರೆಸ್), ಧನಂಜಯ ಸರ್ಜಿ (ಬಿಜೆಪಿ), ಜಿ.ಸಿ. ಪಟೇಲ್ (ಸರ್ವ ಜನತಾ ಪಾರ್ಟಿ), ದಿನಕರ್ ಉಲ್ಲಾಳ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್‌, ಕೆ.ರಘುಪತಿ ಭಟ್, ಶೇಖ್ ಬಾವ ಮಂಗಳೂರು, ಷಡಕ್ಷರಪ್ಪ ಜಿ.ಆ‌ರ್. ಮತ್ತು ಎಸ್. ಮುಜಾಯಿದ್‌ ಸಿದ್ದಿಕಿ (ಎಲ್ಲರೂ ಪಕ್ಷೇತರರು). ಸ್ಪರ್ಧೆಯಿಂದ ಈ ಬಾರಿ ನೈರುತ್ಯ ಪದವೀಧರರ ಕ್ಷೇತ್ರವೂ ಕೂಡ ಹಲವು ಆಯಾಮಗಳಲ್ಲಿ ಚರ್ಚೆಗೂ ಕಾರಣವಾಗಿದೆ.

ಚುನಾವಣಾ ಆಯೋಗದ ಸೂಚನೆ ಯಂತೆ ಮತದಾರರ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಈ ಚುನಾವಣೆಯಲ್ಲಿ ಎನ್‌ಒಟಿಎ (ನೋಟಾ) ಇರುವುದಿಲ್ಲ. ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು  https://ceo.karnataka.gov.in/TGC_Electionroll20 ಜಾಲತಾಣದಲ್ಲಿ ಪಡೆಯಬಹುದು ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಅವರು ಮಾಹಿತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!